ಅಮೆರಿಕಾದಿಂದ ಬಂಡವಾಳ ಹೂಡಿಕೆ : ಚೀನಾವನ್ನು ಹಿಂದಿಕ್ಕಿದ ಭಾರತ

ನವದೆಹಲಿ : ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಅಮೆರಿಕಾದ ಬರಾಕ್ ಒಬಾಮ ನೇತೃತ್ವದ ಆಡಳಿತಭಾರತದಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸಿದ್ದು ಈ ನಿಟ್ಟಿನಲ್ಲಿ ಭಾರತ ಚೀನಾ ದೇಶವನ್ನು ಹಿಂದಿಕ್ಕುವಲ್ಲಿ ಸಫಲವಾಗಿದೆ.
ದಕ್ಷಿಣ ಹಾಗೂ ಮಧ್ಯ ಏಷ್ಯಾ ದೇಶಗಳಿಗೆ 2016ರಲ್ಲಿ ಅಮೆರಿಕಾ ನೀಡುತ್ತಿರುವ ಪ್ರಾಮುಖ್ಯತೆಯ ವಿಚಾರದಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಅಸಿಸ್ಟಂಟ್ ಸೆಕ್ರಟರಿ ಆಫ್ ಸ್ಟೇಟ್ ನಿಶಾ ದೆಸಾಯಿ ಬಿಸ್ವಾಲ್ ಹೆಚ್ಚಿನ ಗಮನ ಆರ್ಥಿಕ ಪಾಲುದಾರಿಕೆಗೆ ನೀಡಲಾಗುತ್ತಿದ್ದರೂ ಭಾರತದಲ್ಲಿನ ಅಮೆರಿಕಾದ ಹೂಡಿಕೆಗಳು ಗಣನೀಯವಾಗಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಯುಎಸ್ ಇಂಡಿಯಾ ಬಿಸಿನೆಸ್ ಕೌನ್ಸಿಲ್ ನೀಡಿರುವ ಮಾಹಿತಿಯಂತೆ ಕಳೆದ ಒಂದು-ಒಂದೂವರೆ ವರ್ಷಗಳ ಅವಧಿಯಲ್ಲಿ 30 ಅಮೆರಿಕನ್ ಕಂಪೆನಿಗಳು 15 ಬಿಲಿಯನ್ ಡಾಲರಿಗೂ ಹೆಚ್ಚಿನ ಹೂಡಿಕೆಯನ್ನು ಭಾರತದಲ್ಲಿ ಮಾಡಿದ್ದರೆ ಮುಂದಿನ ಒಂದು ವರ್ಷದಲ್ಲಿ 50 ಅಮೆರಿಕನ್ ಕಂಪೆನಿಗಳು ಸುಮಾರು 27 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಗಳಿಗೆ ಸಹಿ ಹಾಕಲಿವೆ. 2014ರಲ್ಲಿ ಭಾರತದಲ್ಲಿ ಅಮೆರಿಕಾದ ಎಫ್‌ಡಿಐ28 ಬಿಲಿಯನ್ ಡಾಲರುಗಳಷ್ಟಿತ್ತು ಎಂಬ ಮಾಹಿತಿಯೂ ದೊರಕಿದೆ.





