ಯಕ್ಷಗಾನದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಯಕ್ಷಗಾನ ಕಲಾಭಿಮಾನಿಗಳ ಸಹಯೋಗದಲ್ಲಿ ಎ. 25 ರಂದು ಹೊಸನಗರ ಶ್ರೀ ರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಪುತ್ತೂರು ತಾಲೂಕಿನ ಬಡಗನ್ನೂರು ಪಟ್ಟೆ ಶ್ರೀಕೃಷ್ಣ ಹಿ.ಪ್ರಾ. ಶಾಲಾ ವಠಾರದಲ್ಲಿ ‘ತಪೋನಂದನ’ ಯಕ್ಷಗಾನ ಬಯಲಾಟ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಗುರುವಾರ ಬಿಡುಗಡೆಗೊಳಿಸಲಾಯಿತು.
ಅಶಿತ್ ರೈ ಪೇರಾಲು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಸುಬ್ಬಪ್ಪ ಪಾಟಾಳಿ ಪಟ್ಟೆ, ನಿವೃತ್ತ ಮುಖ್ಯಶಿಕ್ಷಕ ವೈ. ಕೃಷ್ಣ ನಾಯ್ಕ, ಪದ್ಮನಾಭ ರೈ ಅರೆಪ್ಪಾಡಿ, ಜಗದೀಶ್ ಗೌಡ, ಪಟ್ಟೆ ಶ್ರೀ ಕೃಷ್ಣ ಯುವಕಮಂಡಲದ ಅಧ್ಯಕ್ಷ ಶಶಿಧರ ಪಟ್ಟೆ, ಪದಾಕಾರಿಗಳಾದ ನಾಗರಾಜ್ ಪಟ್ಟೆ, ರಾಜೇಶ್ ಪಟ್ಟೆ, ವಿಠಲ ಸಾಲ್ಯಾನ್ ಉಪಸ್ಥಿತರಿದ್ದರು.
Next Story





