ಪತಿ, ಪತ್ನಿಗೆ ಸುಪಾರಿ ಕೊಟ್ಟ, ಹಣಸಿಗದಿದ್ದಕ್ಕೆ ಪತಿಯನ್ನೂ ಕೊಂದರು

ಲಕ್ನೋ, ಮಾರ್ಚ್.31: ಕಾಕೊರಿ ಎಂಬಲ್ಲಿ ದಂಪತಿಗಳ ಕೊಲೆಗಾರರನ್ನು ಹುಡುಕುತ್ತಿದ್ದ ಪೊಲೀಸರು ನಾಲ್ವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆಕೃತ್ಯದ ಕಾರಣವನ್ನು ತಿಳಿದು ಸ್ವತಃ ಪೊಲೀಸರೇ ಬೇಸ್ತುಬೀಳುವಂತಾಗಿತ್ತು. ಕಲ್ಲೂ ನೇತಾ ಎಂಬಾತ ಪತ್ನಿಯ ಮೇಲೆ ಶಂಕೆಯಿಂದ ಅವಳನ್ನು ಕೊಲೆಗೈಯ್ಯಲಿಕ್ಕಾಗಿ ಬಾಡಿಗೆ ಕೊಲೆಗಡುಕನಿಗೆ ಸುಪಾರಿ ಕೊಟ್ಟಿದ್ದನೆಂದು ತಿಳಿದಿತ್ತು. ಪತ್ನಿಯನ್ನು ಕೊಂದನಂತರ ಕೊಲೆಗಡುಕರು ಕಲ್ಲೂವಿನಲ್ಲಿ ಹಣಕೇಳಿದ್ದಾರೆ. ಆತ ಹಣಕೊಡದಿದ್ದಾಗ ಸುಪಾರಿ ಹಂತಕರೇ ಆತನನ್ನು ಕೊಂದು ಹಾಕಿದ್ದರು ಎಂದು ವರದಿಗಳು ತಿಳಿಸಿವೆ.
ಆದರೆ ಪೊಲೀಸರು ಶಂಕಿತ ಹಂತಕರ ಈ ಕತೆಯನ್ನು ನಂಬಿಲ್ಲ.ಆದ್ದರಿಂದ ಎಸ್ಸೈ ಅವರ ಫೋನ್‌ಕಾಲ್ ವಿವರ ಮತ್ತು ಇತರ ಕೋನದಿಂದ ತನಿಖೆ ನಡೆಸಲು ಆದೇಶಿಸಿದ್ದಾರೆಂದು ವರದಿಯಾಗಿದೆ.
ಕಾಕೋರಿಯ ನಯಿ ಕಾಲನಿ ಬಾರಾವಾಂ ಕಲಾದ ನಿವಾಸಿ ಕಲ್ಲೂನೇತಾ(65) ಮತ್ತು ಆತನ ಮೂರನೇ ಪತ್ನಿ ಫಿರ್‌ದೌಸ್(45) ಕೊಲೆಯಾಗಿತ್ತು. ಈಪ್ರಕರಣದ ಹಂತಕರನ್ನು ಪೊಲೀಸರು ಹುಡುಕಲು ಶ್ರಮಿಸುತ್ತಿದ್ದಾಗ ಶೇಕ್ ಪುರ್ ಎಂಬಲ್ಲಿಂದ ಇಬ್ಬರು ಶಂಕಿತರನ್ನುಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಆನಂತರ ಲಾಲ್‌ಮವೂ ಮತ್ತು ಸಿಕರೌರಿಯಿಂದ ಇನ್ನಿಬ್ಬರನ್ನು ಬಂಧಿಸಲಾಗಿತ್ತು. ಆರೋಪಿಗಳನ್ನು ವಿಚಾರಿಸಿದಾಗ ಸುಪಾರಿ ಹತ್ಯೆಯ ಪ್ರಕರಣ ಬಹಿರಂಗವಾಗಿದೆ. ಬಂಧಿತರಲ್ಲಿ ಇಬ್ಬರು ಕಲ್ಲೂನೇತಾ ಮತ್ತು ಪತ್ನಿ ಕೊಲೆಯಾಗುವ ಮುಂಚೆ ಅವರ ಮನೆಯ ಸುತ್ತಮುತ್ತ ಠಳಾಯಿಸುತ್ತಿದ್ದರೆಂದು ವರದಿಯಾಗಿದೆ.







