ಮಂಗಳೂರು:ಎ.1ರಂದು ‘ಮಸ್ಜಿದುಲ್ ಬುಖಾರಿ’ ಉದ್ಘಾಟನೆ
ಮಂಗಳೂರು, ಮಾ. 31: ನಾಟೆಕಲ್ ಬಳಿಯ ಕಿನ್ಯದ ಬದ್ರಿಯಾ ನಗರಲ್ಲಿ ನೂತನವಾಗಿ ನಿರ್ಮಾಣಗೊಂಡ ‘ಮಸ್ಜಿದುಲ್ ಬುಖಾರಿ’ಯ ಉದ್ಘಾಟನೆಯು ಎಪ್ರಿಲ್ 2ರಂದು ಮಧ್ಯಾಹ್ನ 3ಗಂಟೆಗೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹುಸೈನಿಯಾ ಇಸ್ಲಾಮಿಕ್ ಸೆಂಟರ್‌ನ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಕ್, ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ನೂತನ ಮಸೀದಿಯ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ ಎಂದರು.
ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಜಲಾಲುದ್ದೀನ್ ತಂಙಳ್ ಪೊಟೋಟ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದ ಉದ್ಘಾಟನೆಯನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷ ಶೈಖುನಾ ಅಲಿ ಕುಂಞಿ ನೆರವೇರಿಸಲಿದ್ದಾರೆ. ಜಂಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷ ಖಾಝಿ ಬೇಕಲ್ ಇಬ್ರಾಹೀಂ ಮುಸ್ಲಿಯಾರ್, ಅಲ್ ಮದೀನಾ ವಿದ್ಯಾಲಯದ ಅಧ್ಯಕ್ಷ ಪಿ.ಎಂ.ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ದಾರುಲ್ ಇರ್ಶಾದ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಮಲ್‌ಜಅ್ ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಜಲಾಲುದ್ದೀನ್ ತಂಙಳ್ ಉಜಿರೆ, ಆರೋಗ್ಯ ಸಚಿವ ಯು.ಟಿ.ಖಾದರ್, ವಕ್ಫ್ ಬೋರ್ಡ್ ರಾಜ್ಯ ನಿರ್ದೇಶಕ ಶಾಫಿ ಸಅದಿ ಬೆಂಗಳೂರು, ಎಸ್‌ವೈಎಸ್ ರಾಜ್ಯಾಧ್ಯಕ್ಷ ಕೆ.ಪಿ.ಹುಸೈನ್ ಕೆ.ಸಿ.ರೋಡ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅಬೂಬಕರ್ ಸಿದ್ದೀಕ್ ವಿವರಿಸಿದರು.
ಹುಸೈನಿಯಾ ಇಸ್ಲಾಮಿಕ್ ಸೆಂಟರ್‌ನ ಅಧೀನದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಬೂಧಾಬಿ ಘಟಕದ ಸಹಯೋಗದಲ್ಲಿ ಈ ಮಸೀದಿಯನ್ನು ನಿರ್ಮಿಸಲಾಗಿದೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹುಸೈನಿಯಾ ಇಸ್ಲಾಮಿಕ್ ಸೆಂಟರ್‌ನ ಉಪಾಧ್ಯಕ್ಷರಾದ ಸಿ.ಎಚ್.ಮುಹಮ್ಮದ್ ಅಲಿ ಸಖಾಫಿ ಕುತುಬಿನಗರ, ಅಶ್ರಫ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಕೆ.ಎಚ್.ಇಸ್ಮಾಯಿಲ್ ಸಅದಿ ಕಿನ್ಯ, ಕೋಶಾಧಿಕಾರಿ ವಿ.ಎ.ಮುಹಮ್ಮದ್ ಮುಸ್ಲಿಯಾರ್ ಉಪಸ್ಥಿತರಿದ್ದರು.





