ಭಾರತದ ವಿರುದ್ಧ ವಿರುದ್ಧ ವಿಂಡೀಸ್‌ನ ಗೆಲುವಿಗೆ 193 ರನ್ ಸವಾಲು
ಟ್ವೆಂಟಿ-20 ವಿಶ್ವಕಪ್ ಸೆಮಿಫೈನಲ್

ಮುಂಬೈ, ಮಾ.31: ವೆಸ್ಟ್‌ಇಂಡಿಸ್ ವಿರುದ್ಧ ಟ್ವೆಂಟಿ-20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 192ರನ್ ಗಳಿಸಿದೆ.
ವಿರಾಟ್ ಕೊಹ್ಲಿ 89 ರನ್ (47ಎ,11ಬೌ,1ಸಿ)ಕೊಡುಗೆ ನೀಡಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತಕ್ಕೆ ಮೊದಲ ವಿಕೆಟ್‌ಗೆ ರೋಹಿತ್ ಶರ್ಮ ಮತ್ತು ಅಜಿಂಕ್ಯ ರಹಾನೆ 7.2 ಓವರ್‌ಗಳಲ್ಲಿ 62 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಆರಂಭದಲ್ಲಿ ರೋಹಿತ್ ಬ್ಯಾಟಿಂಗ್ ನಿಧಾನವಾಗಿದ್ದರೂ, ಬಳಿಕ ಸ್ಫೋಟಕ ಬ್ಯಾಟಿಂಗ್‌ಗೆ ಒತ್ತು ನೀಡಿದರು. 7.2ನೆ ಓವರ್‌ನಲ್ಲಿ ಬದ್ರಿ ಅವರು ರೋಹಿತ್ ಶರ್ಮರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.
ಔಟಾಗುವ ಮೊದಲು ಶರ್ಮ 43 ರನ್ (31ಎ, 3ಬೌ,3ಸಿ) ಗಳಿಸಿದರು. ಶಿಖರ್ ಧವನ್ ಬದಲಿಗೆ ಸ್ಥಾನ ಗಿಟ್ಟಿಸಿಕೊಂಡಿದ್ದ ಅಜಿಂಕ್ಯ ರಹಾನೆ ಚೆನ್ನಾಗಿ ಆಡಿದರು.ಎರಡನೆ ವಿಕೆಟಗೆ ವಿರಾಟ್ ಕೊಹ್ಲಿ ಮತ್ತು ರಹಾನೆ 66 ರನ್ ಸೇರಿಸಿದರು.
40 ರನ್ (35ಎ, 2ಬೌ) ಗಳಿಸಿದ ರಹಾನೆ ದೊಡ್ಡ ಹೊಡೆತಕ್ಕೆ ಯತ್ನಿಸಿ ರಸ್ಸೆಲ್ ಎಸೆತದಲ್ಲಿ ಬ್ರಾವೊಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಮುಂದೆ ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ(15) ಬ್ಯಾಟಿಂಗ್ ಮುಂದುವರಿಸಿದರು. 3ನೆ ವಿಕೆಟ್‌ಗೆ 64ರನ್ ಸೇರಿಸಿದರು.





