1.04 ಕೋಟಿ ರೂ. ಉಳಿತಾಯ ಬಜೆಟ್
ಸಾಗರ ನಗರಸಭೆ
ಸಾಗರ, ಮಾ. 31: ಇಲ್ಲಿನ ನಗರಸಭೆಯಲ್ಲಿ ಬುಧವಾರ ನಗರಸಭಾಧ್ಯಕ್ಷ ಆರ್. ಗಣಾಧೀಶ್ ಅವರು 2016-17ನೆ ಸಾಲಿನ ಅಂದಾಜು ಆಯವ್ಯಯ ಮಂಡಿಸಿದರು. ಒಟ್ಟ್ಟು 47.84 ಕೋಟಿ ರೂ. ಆದಾಯ ನಿರೀಕ್ಷಿಸಿ, ಒಟ್ಟು 46.80 ಕೋಟಿ ರೂ. ವೆಚ್ಚ ಅಂದಾಜಿಸಿ, ಒಟ್ಟಾರೆ 1.04 ಕೋಟಿ ರೂ. ಉಳಿತಾಯ ನಿರೀಕ್ಷೆಯ ಬಜೆಟ್‌ನ್ನು ಮಂಡಿಸಿ, ಇದೊಂದು ಪರಿಸರ ಸ್ನೇಹಿ, ಜನಸ್ನೇಹಿ ಆಡಳತದ ಬಜೆಟ್ ಆಗಿದೆ ಎಂದರು. ಆದಾಯ ಮೂಲಗಳಿಂದ ನಿರೀಕ್ಷೆ: ಆದಾಯ ಮೂಲದಲ್ಲಿ ಪ್ರಮುಖವಾಗಿ, ನಗರಸಭೆ ಯಿಂದ 6.46 ಕೋಟಿ ರೂ., ರಾಜ್ಯ ಸರಕಾರದಿಂದ ಅನುದಾನ 10.83 ಕೋಟಿ ರೂ., ರಾಜ್ಯ ಸರಕಾರದಿಂದ ವಿಶೇಷ ಅನುದಾನ 24.85 ಕೋಟಿ ರೂ., ಕೇಂದ್ರ ಸರಕಾರದ ವಿಶೇಷ ಅನುದಾನ 1.77 ಕೋಟಿ ರೂ, ಎಂದು ನಿರೀಕ್ಷಿಸ ಲಾಗಿದೆ ಎಂದು ವಿವರ ನೀಡಿದರು. ನಗರಸಭೆಯ ಆದಾಯ ಮೂಲಗಳಾದ ಆಸ್ತಿ ತೆರಿಗೆ- 2 ಕೋಟಿ ರೂ., ನೀರಿನ ತೆರಿಗೆ-1 ಕೋಟಿ ರೂ., ವಾಣಿಜ್ಯ ಮಳಿಗೆಗಳ ಬಾಡಿಗೆ-45 ಲಕ್ಷ ರೂ., ಅಭಿವೃದ್ಧಿ ಶುಲ್ಕ 24 ಲಕ್ಷ ರೂ., ಉದ್ದಿಮೆ ಪರವಾನಿಗೆ 26 ಲಕ್ಷ ರೂ., ದಂಡ ಮತ್ತು ಜುಲ್ಮಾನೆ 20 ಲಕ್ಷ ರೂ. ಮುಂತಾದವು ಪ್ರಮುಖ ಆದಾಯ ಗಳೆಂದು ನಿರೀಕ್ಷಿಸಲಾಗಿದೆ.
ರಾಜ್ಯ ಸರಕಾರದಿಂದ ನೌಕರರ ವೇತನ ಅನುದಾನ 305 ಲಕ್ಷ ರೂ., ಬೀದಿದೀಪ, ನೀರು ಸ
ರಬರಾಜು ನಿರ್ವ ಹಣೆ ಇತ್ಯಾದಿ ಅನುದಾನ 270 ಲಕ್ಷ ರೂ., ಪ್ರಕೃತಿ ವಿಕೋಪ , ಪರಿಹಾರ ಕಾಮಗಾರಿಗೆ ಅನುದಾನ 1 ಕೋಟಿ ರೂ., ಎಸ್.ಎಫ್.ಸಿ. ಅನುದಾನ 3 ಕೋಟಿ ರೂ., ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಗೆ 1 ಕೋಟಿ ರೂ., ಅನುದಾನ ನಿರೀಕ್ಷಿಸಲಾಗಿದೆ. ರಾಜ್ಯ ಹಣಕಾಸು ಆಯೋಗದ ಅನುದಾನ, ಕೆ.ಎಸ್. ಐ.ಐ.ಡಿ. ಸಿಯಿಂದ ಹೀಗೆ ಒಟ್ಟು 2,662.45 ಲಕ್ಷ ರೂ. ಅನುದಾನ ನಿರೀಕ್ಷಿಸಲಾಗಿದೆ. ನಿವೇಶನಗಳ ಮಾರಾಟ ಹಾಗೂ ಅಕ್ರಮ-ಸಕ್ರಮ ಯೋಜನೆಯಿಂದ 1 ಕೋಟಿ ರೂ. ನಿರೀಕ್ಷಿಸ ಲಾಗಿದೆ ಎಂದರು. *ಉದ್ದೇಶಿತ ವೆಚ್ಚದ ಅಂದಾಜು: ವೆಚ್ಚದ ಬಾಬ್ತಿನಲ್ಲಿ ಪ್ರಮುಖವಾಗಿ ನಗರಸಭೆ ನೌಕರರ ವೇತನಕ್ಕೆ 3.05 ಕೋಟಿ ರೂ., ಬೀದಿದೀಪ, ನಗರ ನೀರು ಸರಬರಾಜು ನಿರ್ವಹಣೆಗೆ ವಿದ್ಯುಚ್ಛಕ್ತಿ ವೆಚ್ಚ 2.70 ಕೋಟಿ ರೂ., ಘನತ್ಯಾಜ್ಯ ವಸ್ತು ಹೊರಗುತ್ತಿಗೆ ನಿರ್ವಹಣೆ ಗುತ್ತಿಗೆ ಕಾರ್ಮಿಕರ ವೇತನಕ್ಕೆ 1.50 ಕೋಟಿ ರೂ., ವಿವಿಧ ರಸ್ತೆ ಚರಂಡಿಗಳ ದುರಸ್ತಿ, ನಿರ್ವಹಣೆಗೆ 60 ಲಕ್ಷ ರೂ., ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಗೆ 1 ಕೋಟಿ ರೂ., ಕ್ರೀಡೆಗೆ ಪ್ರೋತ್ಸಾಹ, ಕ್ರೀಡಾ ತರಬೇತಿಗಳಿಗೆ 1.75 ಲಕ್ಷ ರೂ., ಹಾಲಿ ಬಸ್ ನಿಲ್ದಾಣ ದುರಸ್ತಿಗೆ 20 ಲಕ್ಷ ರೂ., ಶರಾವತಿ ಹಿನ್ನೀರಿನಿಂದ ಪಟ್ಟಣಕ್ಕೆ ಕುಡಿಯುವ ಶಾಶ್ವತ ನೀರಿನ ಯೋಜನೆಗೆ ಹೊಂದಿ ಕೊಂಡು ಬಸವನ ಹೊಳೆ ಡ್ಯಾಮ್ ನ ಯೋಜನೆ ನಿರ್ವಹಣೆಗೆ 80 ಲಕ್ಷ ರೂ. ವೆಚ್ಚಕ್ಕೆ ಉದ್ದೇಶಿ ಸಲಾಗಿದೆ.
ಅಭಿವೃದ್ಧಿ ಯೋಜನೆಯಲ್ಲಿ ಗಾಂಧಿ ಮೈದಾನದಲ್ಲಿ ವಾಕಿಂಗ್ ಟ್ರಾಕ್ ನಿರ್ಮಿಸಿ ಸೋಲಾರ್ ದೀಪ ಅಳವಡಿಕೆಗೆ ಹಾಗೂ ನೆಹರೂ ಮೈದಾನದಲ್ಲಿ ವಾಕಿಂಗ್ ಟ್ರಾಕ್‌ಗೆ ಸುತ್ತಲೂ ಸೋಲಾರ್ ದೀಪ ಅಳವಡಿಕೆಗೆ 35 ಲಕ್ಷ ರೂ., ಕಚೇರಿ ಕಟ್ಟಡದ ಮೇಲ್ಛಾವಣಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪನೆಗೆ 20 ಲಕ್ಷ ರೂ., ನೌಕರರಿಗೆ ಉತ್ತಮ ವಸತಿ ಕಲ್ಪಿಸಲು ಸಮಗ್ರ ವಸತಿ ಯೋಜನೆಗೆ 4 ಕೋಟಿ ರೂ., ಸುಸಜ್ಜಿತ ವಾಹನ ಶೆಡ್ ನಿರ್ಮಿಸಲು 10 ಲಕ್ಷ ರೂ., ಕಾಗದರಹಿತ ಆಡಳಿತ ಯೋಜನೆಗೆ 30 ಲಕ್ಷ ರೂ., ನಗರದ ವಸತಿ ರಹಿತರಿಗೆ ವಸತಿ ಸೌಲಭ್ಯಕ್ಕಾಗಿ 150 ಲಕ್ಷ ರೂ., ಭೂಸ್ವಾಧೀನ ವೆಚ್ಚ ಪಾವತಿಗೆ 75 ಲಕ್ಷ ರೂ., ನಗರಸಭೆ ಬಸ್ ನಿಲ್ದಾಣ ಕಾಮಗಾರಿಗೆ 1 ಕೋಟಿ ರೂ., ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಪಕ್ಕದಲ್ಲಿ ನಗರಸಭೆ ಪಿಕ್ ಅಪ್ ಬಸ್ ನಿಲ್ದಾಣಕ್ಕೆ 1.50 ಕೋಟಿ ರೂ., ನಗರದ ರಸ್ತೆ, ಚರಂಡಿ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ 10 ಕೋಟಿ ರ ೂ., ವ್ಯವಸ್ಥಿತ ಆ್ಯಂಬುಲೆನ್ಸ್ ಖರೀದಿಗೆ 15 ಲಕ್ಷ ರೂ., ವೈಜ್ಞಾನಿಕ ಕಸ ವಿಲೇವಾರಿ ಘಟಕ ಸ್ಥಾಪಿಸಲು 2.95 ಕೋಟಿ ರೂ., ಕೆರೆ ಅಭಿವೃದ್ಧಿಗೆ 50 ಲಕ್ಷ ರೂ., ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಹಾಗೂ ನಿರ್ವಹಣೆಗೆ 2.50 ಕೋಟಿ ರೂ., ತೆರೆದ ಬಾವಿ ನಿರ್ಮಾಣ, ಬೋರ್‌ವೆಲ್, ಕಿರು ನೀರು ಸರಬರಾಜು ಯೋಜನೆಗೆ 50 ಲಕ್ಷ ರೂ., ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆಗೆ 40 ಲಕ್ಷ ರೂ., ಉದ್ಯಾನವನ ಅಭಿ ವೃದ್ಧಿಗೆ 55 ಲಕ್ಷ ರೂ., ವ್ಯಾಯಾಮಶಾಲೆ ನಿರ್ಮಾಣ ಮತ್ತು ಗರಡಿಮನೆ ಅಭಿವೃದ್ಧಿಗೆ 20 ಲಕ್ಷ ರೂ. ಹೀಗೆ ಪ್ರಮುಖ ವೆಚ್ಚದ ಅಂದಾಜು ಉದ್ದೇಶಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸುರೇಶಬಾಬು, ಪೌರಾಯುಕ್ತ ಚಂದ್ರಶೇಖರ ಉಪಸ್ಥಿತರಿದ್ದರು.
ಶಾಸಕರ ವಿಶೇಷ ಅನುದಾನ
ಶಾಸಕರ ವಿಶೇಷ ಅನು ದಾನದಿಂದ 85 ಲಕ್ಷ ರೂ. ವೆಚ್ಚದಲ್ಲಿ ನಿರಂತರ ವಿದ್ಯುತ್ ಸಂಪರ್ಕ ಮಾರ್ಗ ಅಳವಡಿ ಸಲಾಗಿದ್ದು ನಿರಂತರ ಕುಡಿ ಯುವ ನೀರು ಒದಗಿಸಲು ವಿದ್ಯುತ್ ತೊಂದರೆಯಾಗುವುದಿಲ್ಲ. ರಾಜ್ಯ ಸರಕಾರ 3 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿ ಟೆಂಡರ್ ಕರೆಯಬೇಕಿದೆ. ಆಶ್ರಯ ನಿವೇಶನ ಅಭಿವೃದ್ಧಿಗೆ 10.60 ಲಕ್ಷ ರೂ. ಬಿಡುಗಡೆ ಯಾಗಿದ್ದು, ಬಡವರಿಗೆ ನಿವೇಶ ನಗಳನ್ನು ಶೀಘ್ರ ನೀಡಲಾಗುವುದು. ಎ. 14ರಂದು ಅನಾವರಣಗೊಳಿಸಲಾಗುವುದು. ಬರುವ ದಿನಗಳಲ್ಲಿ ದೇವರಾಜ ಅರಸು ಪ್ರತಿಮೆಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರ ಪ್ರಯತ್ನದ ಫಲವಾಗಿ ವಿಜಯ ನಗರದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಮುಗಿಯುವ ಹಂತದಲ್ಲಿದೆ ಎಂದವರು ತಿಳಿಸಿದರು.







