ಕೊಂಕಣಿ ಅಧ್ಯಯನ ಪೀಠಕ್ಕೆ 2 ಕೋಟಿ ರೂ.
ಬೆಂಗಳೂರು, ಮಾ. 31: ಕೊಂಕಣಿ ಅಧ್ಯಯನ ಪೀಠ ಸ್ಥಾಪಿಸಲು 2015-16ನೆ ಸಾಲಿನಲ್ಲಿ ಘೋಷಿಸಿದ್ದ 2 ಕೋಟಿ ರೂ.ಗಳನ್ನು ಮಂಗಳೂರು ವಿವಿ ಕುಲ ಸಚಿವರಿಗೆ ಬಿಡುಗಡೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಸಚಿವೆ ಉಮಾಶ್ರೀ, ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಕೊಂಕಣಿ ಅಧ್ಯಯನ ಪೀಠ ಆರಂಭಿಸಿದ್ದು, ಸದರಿ ಪೀಠವು ಚಾರಿತ್ರಿಕ, ಸಾಂಸ್ಕೃತಿಕ ಅಧ್ಯಯನ ಕೈಗೊಳ್ಳಲಿದ್ದು, ವಿಚಾರ ಸಂಕಿರಣ, ಕಾರ್ಯಾಗಾರ, ಸಮ್ಮೇಳನ ನಡೆಸಲಿದೆ.
ಅಲ್ಲದೆ, ಜಾನಪದ ಮತ್ತು ಪ್ರದರ್ಶನ ಕಲೆಗಳ ಅಧ್ಯಯನ ನಡೆಸುವುದು ಮತ್ತು ಇವುಗಳ ದಾಖಲೀಕರಣಗೊಳಿಸುವ ಧ್ಯೇಯೋದ್ದೇಶಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ.
Next Story





