1 ಸಾವಿರ ಕೋಟಿ ರೂ. ಕೇಂದ್ರದ ಅನುದಾನ ಕಡಿತ

ಬೆಂಗಳೂರು, ಮಾ. 31: ಕೇಂದ್ರ ಸರಕಾರದಿಂದ ರಾಜ್ಯಕ್ಕೆ 2014-15ನೆ ಸಾಲಿನಲ್ಲಿ ಮಂಜೂರಾದ 12,255.93 ಕೋಟಿ ರೂ.ಗಳ ಪೈಕಿ 10,273.80 ಕೋಟಿ ರೂ. ಬಿಡುಗಡೆಯಾಗಿದ್ದು, ಉಳಿದ 1,982.13 ಕೋಟಿ ರೂ.ಇನ್ನೂ ಬಿಡುಗಡೆಯಾಗಿಲ್ಲ ಎಂದು ಯೋಜನಾ ಮತ್ತು ಸಾಂಖ್ಯಿಕ ಸಚಿವ ಎಸ್.ಆರ್.ಪಾಟೀಲ್ ತಿಳಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಡಾ.ಅಜಯ್ ಸಿಂಗ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 2015-16ನೆ ಸಾಲಿಗೆ 11,196.95 ಕೋಟಿ ರೂ.ಗಳನ್ನು ನಿಗದಿಯಾಗಿದ್ದು, ಆ ಪೈಕಿ 5,989.48 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ, ಉಳಿದ 5,207.47 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕಿದೆ ಎಂದು ವಿವರ ನೀಡಿದರು.
2014-15ನೆ ಸಾಲಿಗಿಂತ 2015-16ನೆ ಸಾಲಿನಲ್ಲಿ ಕೇಂದ್ರ ಅನುದಾನದಲ್ಲಿ 1,059 ಕೋಟಿ ರೂ.ಗಳಷ್ಟು ಕಡಿತ ಮಾಡಲಾಗಿದೆ ಎಂದು ಸಚಿವ ಪಾಟೀಲ್ ತಮ್ಮ ಉತ್ತರದಲ್ಲಿ ಮಾಹಿತಿ ನೀಡಿದರು.
Next Story





