ರೋಗಿಗಳ ಸರಣಿ ಕೊಲೆ: ಇಟಲಿ ನರ್ಸ್ ಬಂಧನ

ರೋಮ್, ಮಾ. 31: ಆಸ್ಪತ್ರೆಯೊಂದರ ತುರ್ತು ಚಿಕಿತ್ಸಾ ವಿಭಾಗದಲ್ಲಿ 13 ವೃದ್ಧ ರೋಗಿಗಳನ್ನು ಹತ್ಯೆಗೈದ ಸಂಶಯದಲ್ಲಿ 55 ವರ್ಷದ ಇಟಲಿಯನ್ ನರ್ಸ್ ಒಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದರು.
ಈಕೆ ಆಸ್ಪತ್ರೆಯಲ್ಲಿ ಹಲವು ದಶಕಗಳಿಂದ ಕೆಲಸ ಮಾಡುತ್ತಿದ್ದರು. ನರ್ಸ್‌ನ ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಈ ಮಹಿಳೆಯು ರಕ್ತ ತೆಳುವಾಗುವ ಔಷಧಿಯನ್ನು ಅಗಾಧ ಪ್ರಮಾಣದಲ್ಲಿ ರೋಗಿಗಳ ರಕ್ತ ನಾಳಕ್ಕೆ ಚುಚ್ಚುತ್ತಿದ್ದಳು ಎನ್ನಲಾಗಿದೆ.
12 ಮಂದಿ ಆಂತರಿಕ ರಕ್ತಸ್ರಾವದಿಂದ ಹಾಗೂ ಒಬ್ಬರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
Next Story





