ಸಾಮಾಜಿಕ ಮಾಧ್ಯಮ ಮತ್ತು ಪೊಲೀಸ್ ಇಲಾಖೆ
ಇದು ಸಾಮಾಜಿಕ ಜಾಲತಾಣವೆಂಬ ಕುತೂಹಲಭರಿತ, ಹಸಿವಿನ, ಕೋಪದ ಜಗತ್ತು. ಸಾಮಾಜಿಕ ಮಾಧ್ಯಮವು ನಮ್ಮ ಸಮಾಜದ ಸೂಕ್ಷ್ಮರೂಪವನ್ನು ಪ್ರತಿಫಲಿಸುತ್ತದೆ. ನಮ್ಮಲ್ಲಿ ಸಿನಿಕರೂ ಇದ್ದಾರೆ ಮತ್ತು ಪ್ರೋತ್ಸಾಹಕರೂ ಇದ್ದಾರೆ. ಮತ್ತೆ ನಮ್ಮಲ್ಲಿ ಅನಾಮಿಕತೆಯ ನೆರಳಲ್ಲಿ ರೇಗಿಸುವವರೂ ಇದ್ದಾರೆ. ನಾವು ಅವರಿಗೆ ನೀಡಿರುವ ಹೆಸರು ಟ್ರಾಲ್ಸ್!
ಟ್ವಿಟರ್‌ನಲ್ಲಿ ಈ ರೀತಿ ಟ್ವೀಟ್ ಮಾಡಿದ ಕಾರಣಕ್ಕೆ ದಿಲ್ಲಿಯ ಸೂಕ್ಷ್ಮ ಮತ್ತು ಅಭಿವ್ಯಕ್ತಿ ಶೀಲ ಪೊಲೀಸ್ ಅಧಿಕಾರಿಯೊಬ್ಬರನ್ನು ಭಯಾನಕವಾಗಿ ಟ್ರಾಲ್ (ರೇಗಿಸಲಾಯಿತು) ಮಾಡಲಾಯಿತು. ಆಕೆ ಏನು ಟ್ವೀಟ್ ಮಾಡಿದರು ಮತ್ತು ಮುಂದೆ ಏನಾಯಿತು ಎಂದು ಕೆಳಗೆ ನೀಡಲಾಗಿದೆ. (ಮೋನಿಕಾ ಭಾರದ್ವಾಜ್ ಓರ್ವ ಯುವ ಐಪಿಎಸ್ ಅಧಿಕಾರಿಯಾಗಿದ್ದು ದಿಲ್ಲಿ ಪಶ್ಚಿಮ ಜಿಲ್ಲೆಯ ಹೆಚ್ಚುವರಿ ಸಹಾಯಕ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ).
9 ಆರೋಪಿತರಲ್ಲಿ 5 ಮಂದಿ ಹಿಂದೂಗಳು. ಮೊದಲು ಜಗಳ ನಡೆದ ಸಮಯದಲ್ಲಿ ಇಬ್ಬರಲ್ಲಿ ಒಬ್ಬ ಹಿಂದೂ. ಮುಸ್ಲಿಮ್ ಆರೋಪಿಗಳು ಉತ್ತರ ಪ್ರದೇಶದವರಾಗಿದ್ದು ಬಾಂಗ್ಲಾ ದೇಶದವರಲ್ಲ. ಎಂದಾಕೆ ಟ್ವೀಟ್ ಮಾಡಿದ್ದರು. ನಾನು ನೆನಪಿಸುವ ಪ್ರಕಾರ, ಆರೋಪಿಗಳ ರಾಷ್ಟ್ರೀಯತೆ ಯನ್ನು ಬಹಿರಂಗಪಡಿಸುವುದು ಓರ್ವ ಹಿರಿಯ ಅಧಿಕಾರಿಗೆ ಒಪ್ಪುವ ಕೆಲಸವೇ ಎಂದು ಟ್ವಿಟರ್‌ನಲ್ಲಿ ನನ್ನನ್ನು ಪ್ರಶ್ನಿಸಲಾಗಿತ್ತು. ಅದಕ್ಕೆ ನಾನು ಮರು ಟ್ವೀಟ್ ಮಾಡುತ್ತಾ, ದುಷ್ಟ ವದಂತಿಗಳನ್ನು ಮತ್ತು ಸಮಾಜದ ಒಳಿತಿನ ದೃಷ್ಟಿಯಿಂದ ಮತ್ತು ಶಾಂತಿ ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಹಾಗೆ ಮಾಡುವುದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದೆ. (ಬಹುಶಃ ಅಷ್ಟು ವಿವರಣೆ ಸಾಕಾಗಿತ್ತು ಎಂದು ನಾನು ಭಾವಿಸುತ್ತೇನೆ). ದಂತವೈದ್ಯ ಪಂಕಜ್ ನರಂಗ್‌ನನ್ನು ಅವರದ್ದೇ ವಿಕಾಸ್ಪುರಿಯ ಮನೆಯಲ್ಲಿ ಗುಂಪೊಂದು ಹಾಕಿ ಸ್ಟಿಕ್ ಮತ್ತು ಸರಳುಗಳಿಂದ ಹಲ್ಲೆ ನಡೆಸಿ ಹತ್ಯೆ ನಡೆಸಿದ ಪ್ರಕರಣದಲ್ಲಿ ಪೊಲೀಸರು ಕ್ಷಿಪ್ರವಾಗಿ ಸ್ಪಂದಿಸಿ ಆರೋಪಿಗಳನ್ನು ಬಂಧಿಸಿದರು.
ಇತರರ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರ ಕೂಡಾ ಪ್ರಕರಣವನ್ನು ಬೇಧಿಸುವಲ್ಲಿ ಮುಖ್ಯ ಪಾತ್ರವಹಿಸಿದ್ದು ಪೊಲೀಸರಿಗೆ ತಾಂತ್ರಿಕವಾಗಿ ನೆರವು ನೀಡಿತ್ತು. ಒಳ್ಳೆಯ ಬೆಳವಣಿಗೆಯೆಂದರೆ ಜನರು ತಮ್ಮ ಪ್ರದೇಶದ ಭದ್ರತೆಯ ಬಗ್ಗೆ ತುಂಬಾ ಪ್ರಜ್ಞಾವಂತರಾಗಿದ್ದಾರೆ. ಅವರು ಆ ನಿರ್ವಾತವನ್ನು ತುಂಬುತ್ತಿದ್ದಾರೆ. ಆದರೆ ನಾನು ಕೇಳುವ ಪ್ರಶ್ನೆಯೆಂದರೆ, ಅಪರಾಧವನ್ನು ತಡೆಯುವ ಮತ್ತು ಪತ್ತೆಹಚ್ಚುವ ಕಾರ್ಯದಲ್ಲಿ ಭಾರತೀಯ ಪೊಲೀಸ್ ಇಲಾಖೆಯು ಸಾಮಾಜಿಕ ಮಾಧ್ಯಮವನ್ನು ಸಾಕಷ್ಟು ಬಳಸುತ್ತಿದೆಯೇ? ಸಾಮಾನ್ಯ ಜಾಗೃತಿ ಮತ್ತು ಸಾರ್ವಜನಿಕ ಭಾಗವಹಿಸುವಿಕೆ ಮತ್ತು ಬೆಂಬಲವನ್ನು ಯಾಚಿಸಲು ಸಾಮಾಜಿಕ ಮಾಧ್ಯಮವನ್ನು ಅದರ ಸಾಮರ್ಥ್ಯಕ್ಕೆ ತಕ್ಕಂತೆ ಬಳಸಲಾಗುತ್ತಿದೆಯೇ? ಮೋನಿಕಾ ಭಾರದ್ವಾಜ್‌ರನ್ನು ಟ್ರಾಲ್ ಮಾಡಿದ ಮತ್ತು ಹೀಯಾಳಿಸಿದ ರೀತಿ ಸಾಮಾಜಿಕ ಜಾಲವನ್ನು ಸಹಜ ಮತ್ತು ಉತ್ತಮ ಕೆಲಸಗಳಿಗೆ ಬಳಸದಿರುವುದನ್ನು ಸೂಚಿಸುತ್ತದೆ. ಪೊಲೀಸ್ ಇಲಾಖೆಯ ಒಳಗೆಯೇ ಸಿನಿಕತನದ ವಾಸನೆ ಬರುತ್ತದೆ, ಆದರೆ ಅದಕ್ಕೆ ಕಾರಣ ಮಾತ್ರ ತಿಳಿದಿಲ್ಲ (ನಾನು ಕೇವಲ ಅಭಿಪ್ರಾಯ ವ್ಯಕ್ತಪಡಿಸಬಹುದಷ್ಟೇ). ಪೊಲೀಸ್ ಇಲಾಖೆಯು ಈಗಷ್ಟೇ ಸಾಮಾಜಿಕ ಮಾಧ್ಯಮವನ್ನು ಉಪಯೋಗಿಸುವ ನೀತಿಯನ್ನು ರೂಪಿಸುತ್ತಿದೆ ಎಂದು ನಾನು ಭಾವಿಸುತ್ತೇನೆ.
ಯಾವಾಗಲಾದರೊಮ್ಮೆ ಸಂಚಾರಿ ವ್ಯವಸ್ಥೆಯ ಬಗ್ಗೆ ಹಾಕುವುದರಿಂದ ಅಥವಾ ಸಮಸ್ಯೆಗೆ ಸಂಬಂಧಿಸಿದ ಪೇಜ್‌ಗಳನ್ನು ರಚಿಸಿದರೆ ಸಾಕಾಗುವುದಿಲ್ಲ. ಸಾಮಾಜಿಕ ಜಾಲತಾಣಗಳಿಗೆ ಭೇಟಿ ನೀಡುವಂತೆ ಜನರನ್ನು ಪ್ರಚೋದಿಸುವುದು ಮತ್ತು ಪ್ರೋತ್ಸಾಹಿಸುವುದು ಆರೋಗ್ಯಯುತವಾದುದಲ್ಲ. ಸ್ಮಾರ್ಟ್ ಫೋನ್‌ಗಳ ಈ ಕಾಲದಲ್ಲಿ ಪೊಲೀಸ್ ಇಲಾಖೆಯಲ್ಲಿ ಸಾಮಾಜಿಕ ಮಾಧ್ಯಮದ ಬಗ್ಗೆ ಸೂಕ್ತ ಯೋಜನೆಯನ್ನು ರೂಪಿಸಿ ಅದನ್ನು ಅನುಷ್ಠಾನಕ್ಕೆ ತರುವುದು ಉತ್ತಮ ಎಂದು ನನಗನಿಸುತ್ತದೆ. ಫೇಸ್‌ಬುಕ್, ಟ್ವಿಟರ್ ಮತ್ತಿತರ ಮಾಧ್ಯಮಗಳಲ್ಲಿ ಸ್ಥಳೀಯ ಭಾಷೆಯಲ್ಲೇ, ಗುಣಾತ್ಮಕ ಅಥವಾ ಋಣಾತ್ಮಕ, ಯಾವುದಾದರೂ ರೀತಿಯಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕು. ಕನಿಷ್ಠ ಪಕ್ಷ ಮತ್ತು ಬಹಳ ಮುಖ್ಯವಾಗಿ ಜನರು ಏನು ಯೋಚಿಸುತ್ತಿದ್ದಾರೆ ಎಂಬುದನ್ನಾದರೂ ಇದರಿಂದ ತಿಳಿಯಬಹುದು. ಸಾಮಾಜಿಕ ಮಾಧ್ಯಮಗಳ ಯೋಜನೆಯಲ್ಲಿ ಅಳವಡಿಸಬಹುದಾದ ಇನ್ನೂ ಕೆಲವು ಅಂಶಗಳನ್ನು ಇಲ್ಲಿ ಕೆಳಗೆ ತಿಳಿಸಿದ್ದೇನೆ. ಮೊದಲಿಗೆ ಮತ್ತು ಅತ್ಯಂತ ಪ್ರಮುಖವಾಗಿ: ಅದರ ಬಳಕೆಯ ಉದ್ದೇಶ. ಗುರಿಗಳು ಯಾವುದು? ಏನನ್ನು ಸಾಧಿಸಲು ಇದನ್ನು ಬಳಕೆ ಮಾಡಲಾಗುತ್ತದೆ? ಸಾಮಾಜಿಕ ಮಾಧ್ಯಮವು ಸಂಚಾರ, ಅಪರಾಧ ತಡೆ, ಸ್ವಭಾವದ ಸಮಸ್ಯೆಗಳು, ತೃಪ್ತಿಯ ಮಟ್ಟ, ವೀಕ್ಷಣೆ, ಎಚ್ಚರಿಕೆ, ರಕ್ಷಣಾ ಅಂಶಗಳು, ಅಭಿಯಾನಗಳು, ಗುರುತಿಸುವಿಕೆ, ಪ್ರಶಸ್ತಿ, ಹೊಸ ನೀತಿಗಳು, ಅನುಭವ, ಪ್ರತಿಕ್ರಿಯೆ ಹೀಗೆ ಹಲವು ವಿಭಾಗಗಳನ್ನು ಹೊಂದಿದೆ.
ನಮ್ಮ ಉದ್ದೇಶ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ಸಮುದಾಯದ ಜೊತೆ ಸಕ್ರಿಯವಾಗಿರುವುದು. ಸಾಮಾಜಿಕ ಜಾಲತಾಣವು ವೆಚ್ಚವನ್ನು ಕೂಡಾ ಕಡಿಮಗೊಳಿಸುತ್ತದೆ. ಆದರೆ ಮಿಂಚಿನ ವೇಗದಲ್ಲಿ ಪ್ರಸಾರವಾಗುತ್ತದೆ. ಅದು ಪೊಲೀಸ್ ಇಲಾಖೆಯ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ (ಟ್ರಾಲ್‌ಗಳಿಗೆ ಅನಾಮಿಕತೆಯನ್ನು ಒದಗಿಸಿದರೂ). ಜಗತ್ತಿನಾದ್ಯಂತ ಪೊಲೀಸರು ಟೀಕೆಗಳಿಗೆ ಒಗ್ಗಿ ಹೋಗಿದ್ದಾರೆ ಶ್ಲಾಘನೆಗೆ ಅಲ್ಲ ಎಂದು ನಾನು ಯೋಚಿಸುತ್ತೇನೆ. ಟೀಕೆ ದೈನಂದಿನ ವಾಡಿಕೆಯಾದರೆ ಶ್ಲಾಘನೆ ಯಾವಾಗಲಾದರೊಮ್ಮೆ ಸಿಗುವಂಥದ್ದು. ಆದರೆ ಒಮ್ಮೆ ಸಾರ್ವಜನಿಕರ ಜೊತೆಗಿನ ನಡವಳಿಕೆಯು ಉತ್ತಮವಾದರೆ, ಪೊಲೀಸ್ ಇಲಾಖೆಯಲ್ಲಿ ಗೌರವ ಹೆಚ್ಚಿದಾಗ ಶ್ಲಾಘನೆ ಕೂಡಾ ಹೆಚ್ಚಾಗುತ್ತದೆ ಮತ್ತು ಸಮುದಾಯದ ರಕ್ಷಣೆಯನ್ನು ಉತ್ತಮ ರೀತಿಯಲ್ಲಿ ಮಾಡಲು ಇದು ಸಹಾಯವಾಗುತ್ತದೆ. ಮೋನಿಕಾರನ್ನು ಹೀಯಾಳಿಸಿದರೇನಂತೆ? ನಾವು ಪೊಲೀಸರು ಅದನ್ನು ಹೇಗೆ ನಿಭಾಯಿಸಬೇಕೆಂದು ಅರಿತಿದ್ದೇವೆ. ಮೊದಲೆಲ್ಲಾ ನಮ್ಮ ಮುಖದ ಮೇಲೆ ಹೀಗೆ ಮಾಡಲಾಗುತ್ತಿತ್ತು ಈಗ ಜಾಲತಾಣಗಳಲ್ಲಿ ಮಾಡಲಾಗುತ್ತಿದೆ ಅಷ್ಟೇ. ಒಳ್ಳೆಯ ಕೆಲಸ ಮಾಡಿದೆ ನನ್ನ ಯುವ ಗೆಳತಿ. ನಿನ್ನ ಅಭಿವ್ಯಕ್ತಿಶೀಲತೆಯನ್ನು ಹೀಗೆಯೇ ಮುಂದುವರಿಸು ಮತ್ತು ಕಾಲೆಳೆಯುವವರಿಂದ ಹತಾಶಳಾಗಬೇಡ. ನಿನ್ನನ್ನೂ ಹೊಗಳುವವರಿದ್ದಾರೆ. ನೀನು ಮಾಡಿದ್ದನ್ನು ನಿನ್ನ ಇಲಾಖೆ ಪ್ರಶಂಸಿಸುತ್ತದೆ ಎಂದು ಭಾವಿಸುತ್ತೇನೆ. ನೀನು ವದಂತಿಗಳನ್ನು ಹರಡುವುದನ್ನು ನಿಲ್ಲಿಸಿದೆ. ನೀನು ಮತ್ತಷ್ಟು ಶಾಂತಿ ಕದಡುವುದನ್ನು ತಡೆದೆ. ನೀನು ನಿನ್ನ ಕರ್ತವ್ಯ ನಿಭಾಯಿಸಿದೆ. ನೀನು ಯುವ ಸಮುದಾಯದ ಒಬ್ಬ ತಂತ್ರಜ್ಞಾನಕ್ಕೆ ಒಗ್ಗಿಕೊಂಡ, ಅಭಿವ್ಯಕ್ತಿ ಶೀಲ ಪೊಲೀಸ್ ಅದಕ್ಕೂ ಮುಖ್ಯವಾಗಿ ನೀನು ಮಹಿಳೆ.