ಚುಟುಕು ಸುದ್ದಿಗಳು
ಇಂದಿನ ಕಾರ್ಯಕ್ರಮ
ಪೇಜಾವರ ಶ್ರೀ ಪಂಚಮ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಜೆ 5ಕ್ಕೆ ಚಂದ್ರಶಾಲೆಯಲ್ಲಿ ಪುರಾಣ ಬೆಂಗಳೂರಿನ ವಿದ್ವಾನ್ ಬ್ರಹ್ಮಣ್ಯಾಚಾರ್ಯರಿಂದ ಪ್ರವಚನ. 5:30ಕ್ಕೆ ರಾಜಾಂಗಣದಲ್ಲಿ ಧಾರ್ಮಿಕ ಉಪನ್ಯಾಸ ಬೆಂಗಳೂರಿನ ವಿದ್ವಾನ್ ಸಿ.ಎಚ್. ಬದರಿನಾಥಾಚಾರ್‌ರಿಂದ ಪ್ರವಚನ, 6:30ಕ್ಕೆ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದರು ಹಾಗೂ ಶ್ರೀವಿಶ್ವಪ್ರಸನ್ನ ತೀರ್ಥರಿಂದ ಅನುಗ್ರಹ ಸಂದೇಶ. 7:30ಕ್ಕೆ ಅಖಂಡ ಸಪ್ತೋತ್ಸವ, ಬ್ರಹ್ಮರಥೋತ್ಸವ.
ಇಂದು ಮಹಾಕಾವ್ಯದ ಜೊತೆ ಅನುಸಂಧಾನ
ಮೂಡುಬಿದಿರೆ, ಮಾ.31: ಅಲ್ಲಮಪ್ರಭು ಪೀಠ ಕಾಂತಾವರ ಇದರ ವತಿಯಿಂದ ಪ್ರತಿಷ್ಠಿತ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿ ಪುರಸ್ಕೃತ ಕವಿ ಡಾ.ಎಂ.ವೀರಪ್ಪಮೊಯ್ಲಿ ಅವರ ‘ಸಿರಿಮುಡಿ ಪರಿಕ್ರಮಣ’ ಮಹಾಕಾವ್ಯದ ಜೊತೆ ಅನುಸಂಧಾನ ಕುರಿತ ವಿಶಿಷ್ಟ ಕಾರ್ಯಕ್ರಮ ಕಾಂತಾವರ ಅಲ್ಲಮ ಪ್ರಭು ಪೀಠದ ಆವರಣದಲ್ಲಿನ ಚೌಟರ ಚೌಕಿಯಲ್ಲಿ ಎ.1ರಂದು ಅಪರಾಹ್ನ 3ರಿಂದ 6ರವರೆಗೆ ನಡೆಯಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಿಕ್ಷಣ ತಜ್ಞ ಪ್ರೊ. ಕೆ.ಇ. ರಾಧಾಕೃಷ್ಣ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ.
ಸಂಜೆ ನಡೆಯಲಿರುವ ಅಭಿನಂದನಾ ಸಮಾರಂಭದಲ್ಲಿ ಕಾಂತಾವರದ ಅಲ್ಲಮಪ್ರಭು ಪೀಠ, ಕನ್ನಡಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಘಟಕದ ವತಿಯಿಂದ ಡಾ.ವೀರಪ್ಪ ಮೊಯ್ಲಿಯವರನ್ನು ಅಭಿನಂದಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಪೀಠದ ಪ್ರಧಾನ ನಿರ್ದೇಶಕ ಡಾ. ನಾ.ಮೊಗಸಾಲೆ ತಿಳಿಸಿದ್ದಾರೆ.
ಶತಮಾನೋತ್ಸವ ಸಂಭ್ರಮದಲ್ಲಿ ಮೂಡುಬಿದಿರೆ ಕೋ-ಆಪರೇಟಿವ್ ಸರ್ವಿಸ್ ಬ್ಯಾಂಕ್
ಮೂಡುಬಿದಿರೆ, ಮಾ.31: ಶತಮಾನೋತ್ಸವ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ಮೂಡುಬಿದಿರೆಯ ಕೋ-ಆಪರೇಟಿವ್ ಸರ್ವಿಸ್ ಬ್ಯಾಂಕ್ ಎ.2ರಿಂದ 9ರವರೆಗೆ ಪ್ರತಿ ದಿನ ಸಂಜೆ 6ರಿಂದ ಸಹಕಾರ ಚಿಂತನ ಸರಣಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶತಮಾನೋತ್ಸವದ ಪ್ರಯುಕ್ತ ಭವ್ಯಸೌಧವನ್ನು ನಿರ್ಮಿಸಿದ್ದು, ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಪ್ರತೀ ತಿಂಗಳು ವಿಶೇಷ ಕಾರ್ಯಕ್ರಮಗಳನ್ನು ನಡೆಸಿದೆ. ಎ.9ರಂದು ಶತಮಾನೋತ್ಸವ ಸಮಾರಂಭ ನಡೆಯಲಿದ್ದು, ಭವ್ಯ ಮೆರವಣಿಗೆ ನಡೆಯಲಿದೆ. ಬ್ಯಾಂಕ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ 9 ಮಂದಿ ಮಾಜಿ ಅಧ್ಯಕ್ಷರುಗಳ ಭಾವಚಿತ್ರಗಳನ್ನು ಈ ಸಂದರ್ಭ ಅನಾವರಣಗೊಳಿಸಲಾಗುವುದು ಹಾಗೂ ಬ್ಯಾಂಕಿನ ನೂತನ ಹವಾನಿಯಂತ್ರಿತ ಕೊಠಡಿಯ ಉದ್ಘಾಟನೆ ನಡೆಯಲಿದೆ.
ಬ್ಯಾಂಕ್‌ನ ಸಿಇಒ ಚಂದ್ರಶೇಖರ್, ನಿರ್ದೇಶಕರಾದ ಗಣೇಶ್ ನಾಯಕ್, ಎಂ. ಪದ್ಮನಾಭ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಎ.30ರವರೆಗೆ ಗ್ರಾಪಂ ವ್ಯಾಪ್ತಿಯಲ್ಲಿ ಕುಮ್ಕಿದಾರರ ಸಮೀಕ್ಷೆ ಆಂದೋಲನ
ಪುತ್ತೂರು, ಮಾ.31: ಕುಮ್ಕಿ ಹಕ್ಕಿನ ವಿಚಾರದಲ್ಲಿ ಸರಕಾರದ ನೀತಿಯಿಂದಾಗಿ ಜಿಲ್ಲೆಯ ರೈತರಲ್ಲಿ ಗೊಂದಲ ಉ ಂಟಾಗಿದ್ದು, ಅವರಿಗೆ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಹಾಗೂ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಎ.1ರಿಂದ 30ರ ತನಕ ಜಿಲ್ಲೆಯ 230 ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಕುಮ್ಕಿದಾರರ ಸಮೀಕ್ಷಾ ಆಂದೋಲನ ನಡೆಸಲಾಗುವುದು. ಎ.30ರಂದು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಬೃಹತ್ ಹಕ್ಕೊತ್ತಾಯ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಕುಮ್ಕಿ ಜಾಗದ ಮಾಹಿತಿ ಸಂಗ್ರಹಿಸಿ ಗ್ರಾಪಂ ಹಾಗೂ ಗ್ರಾಮಕರಣಿಕರಿಗೆ ನೀಡಲಾಗುವುದು. ಅಂದಾಜು ಕುಮ್ಕಿ ಜಾಗದ ಲೆಕ್ಕಾಚಾರ ಮಾಡಿ ಅಧಿಕಾರಿಗಳಿಗೆ ತಲುಪಿಸಲಾಗುವುದು. ಜನರಲ್ಲಿ ಮೂಡಿರುವ ಗೊಂದಲವನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಜನಾಂದೋಲನ ಮಾಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಶೈಲಜಾ ಕೆ.ಟಿ. ಭಟ್, ಬೂಡಿಯಾರ್ ರಾಧಾಕೃಷ್ಣ ರೈ, ಮುಖಂಡ ಆರ್.ಸಿ.ನಾರಾಯಣ್ ಉಪಸ್ಥಿತರಿದ್ದರು.
ರಚನಾ-2016 ಪ್ರಶಸ್ತಿಗೆ ಅರ್ಜಿ ಆಹ್ವಾನ
ಮಂಗಳೂರು, ಮಾ.31: ‘ರಚನಾ’ - ಕೆಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಸ್ ಸಂಸ್ಥೆಯು ಕೆಥೊಲಿಕ್ ಕ್ರೈಸ್ತರಿಂದ ವಿಶಿಷ್ಟ ಸಾಧನೆಗೈದವರಿಂದ ರಚನಾ ವಾರ್ಷಿಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಿದೆ. ರಚನಾ ವಾರ್ಷಿಕ ವಿಶೇಷ ಸ್ತ್ರೀ ಪ್ರಶಸ್ತಿ, ರಚನಾ ವಾರ್ಷಿಕ ಕೃಷಿಕ ಪ್ರಶಸ್ತಿ, ರಚನಾ ವಾರ್ಷಿಕ ಉದ್ಯಮಿ ಪ್ರಶಸ್ತಿ, ರಚನಾ ವಾರ್ಷಿಕ ವೃತ್ತಿಪರ ಪ್ರಶಸ್ತಿ, ರಚನಾ ವಾರ್ಷಿಕ ಅನಿವಾಸಿ ಉದ್ಯಮಿ/ವೃತ್ತಿಪರ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು ಬಿರುದು, ಸನ್ಮಾನ ಪತ್ರ, ಸ್ಮಾರಕ, ಸಾರ್ವಜನಿಕ ಸನ್ಮಾನವನ್ನೊಳಗೊಂಡಿರುವುದು.
ಅರ್ಜಿ/ಶಿಫಾರಾಸು ಪತ್ರಗಳನ್ನು ಜು.15ರೊಳಗೆ ಸಂಬಂಧಿತ ಫೋಟೊಗಳೊಂದಿಗೆ ಅಧ್ಯಕ್ಷರು, ರಚನಾ ಮೊದಲ ಮಳಿಗೆ, ಪಿಯೋ ಮಾಲ್, ಬಿಜೈ ಚರ್ಚ್ ರೋಡ್, ಮಂಗಳೂರು 575004. ಇಮೇಲ್: ್ಟಚ್ಚಚ್ಞಞಚ್ಞಜಚ್ಝಟ್ಟಛಿಃಜಞಜ್ಝಿ.್ಚಟಞ ವಿಳಾಸಕ್ಕೆ ತಲುಪಿಸಬೇಕು ಎಂದು ಪ್ರಕಟನೆ ತಿಳಿಸಿದೆ.







