ಸಿಆರ್‌ಪಿಎಫ್‌ಗೆ ಪಡೆಗಳ ಮಾಹಿತಿ ಸೋರಿಕೆಯ ಶಂಕೆ
ದಾಂತೇವಾಡ ನೆಲಬಾಂಬ್ ಸ್ಫೋಟ
ರಾಯ್ಪುರ, ಮಾ.31: ದಾಂತೇವಾಡದಲ್ಲಿ ಮಾರಕ ನೆಲಬಾಂಬ್‌ಗೆ ಬಲಿಯಾದ ತನ್ನ ಪಡೆಗಳ ಚಲನವಲನದ ಕುರಿತಾದ ಮಾಹಿತಿಯು ‘ಸೋರಿಕೆಯಾಗಿತ್ತು’ ಎಂದು ಸಿಆರ್‌ಪಿಎಫ್ ಅಭಿಪ್ರಾಯಿಸಿದೆ. ಅರೆ ಸೇನಾ ಪಡೆಯ ‘ಒಳಗೆ ಅಥವಾ ಹೊರಗೆ’ ಇರಬಹುದಾದ ಮಾಹಿತಿದಾರರ ಪತ್ತೆಗಾಗಿ ಅದು ತನಿಖೆಯೊಂದನ್ನು ಆರಂಭಿಸಿದೆ.
ಅವರ ಚಲನ ವಲನದ ಮಾಹಿತಿ ಸೋರಿಕೆಯಾಗಿರುವುದು ಖಂಡಿತ. ಎಲ್ಲಿಯೋ ಅಥವಾ ಯಾವುದೋ ಹಂತದಲ್ಲಿ ಅದು ನಡೆದಿದೆ. ಹುಡುಗರು ಹಠಾತ್, ಕಾರ್ಯಾಚರಣೆಯಲ್ಲದ ಚಲನೆಯಲ್ಲಿದ್ದರು. ಅದರಿಂದಾಗಿ ಅವರು ಮುಫ್ತಿಯಲ್ಲಿದ್ದರು. ತಾವು ಈ ಬಗ್ಗೆ ಪರಿಶೀಲಿಸುತ್ತಿದ್ದೇವೆಂದು ಸಿಆರ್‌ಪಿಎಫ್ ಮಹಾ ನಿರ್ದೇಶಕ ಕೆ.ದುರ್ಗಾಪ್ರಸಾದ್ ಪಿಟಿಐಗೆ ತಿಳಿಸಿದ್ದಾರೆ.
ಮಾವೊವಾದಿ ಪೀಡಿತ ದಾಂತೇವಾಡದಲ್ಲಿ ನಿನ್ನೆ ನಕ್ಸಲೀಯರು ನಡೆಸಿದ್ದ ನೆಲಬಾಂಬ್ ಸ್ಫೋಟದಲ್ಲಿ ಸಿಆರ್‌ಪಿಎಫ್‌ನ 7 ಮಂದಿ ಯೋಧರು ಬಲಿಯಾಗಿದ್ದರು.
ಡಿಜಿ ನಿನ್ನೆ ನಕ್ಸಲ್ ಪೀಡಿತ ದಾಂತೇವಾಡದಲ್ಲಿ ನಿನ್ನೆ ನಕ್ಸಲೀಯರು ನಡೆಸಿದ್ದ ನೆಲಬಾಂಬ್ ಸ್ಫೋಟದಲ್ಲಿ ಸಿಆರ್‌ಪಿಎಫ್‌ನ 7 ಮಂದಿ ಯೋಧರು ಬಲಿಯಾಗಿದ್ದರು.
ಡಿಜಿ ನಿನ್ನೆ ತಡ ರಾತ್ರಿ ಛತ್ತೀಸ್‌ಗಡ ತಲುಪಿದ್ದು, ಘಟನೆ ಸಂಭವಿಸಿರುವ ಮೇಲವಾಡ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಸಿಆರ್‌ಪಿಎಫ್ ಸಿಬ್ಬಂದಿ ಒಂದು ಶಿಬಿರದಿಂದ ಮತ್ತೊಂದಕ್ಕೆ ಪ್ರಯಾಣಿಸಲು ಉಪಯೋಗಿಸುತ್ತಿದ್ದ ಟಾಟಾ-709 ಮಿನಿ ಟ್ರಕ್ಕನ್ನು ನಕ್ಸಲರು ನೆಲಬಾಂಬ್ ಸಿಡಿಸಿ ಸ್ಫೋಟಗೊಳಿಸಿದ್ದರು.
ಘಟನೆಯ ಕುರಿತು ಸೇನಾ ವಿಚಾರಣೆಗೆ ಆದೇಶ ನೀಡಿರುವ ಹೊರತಾಗಿ, ಸಿಆರ್‌ಪಿಎಫ್ ಪಡೆಯೊಳಗೆ ಅಥವಾ ಹೊರಗಿರಬಹುದಾದ ಶಂಕಿತ ಮಾಹಿತಿದಾರನ ಪಾತ್ರದ ಕುರಿತು ತನಿಖೆ ನಡೆಸುತ್ತಿದೆಯೆಂದು ಹಿರಿಯ ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯಲ್ಲಿ ಕಾಣಿಸುತ್ತಿರುವ ಅನೇಕ ಸಂಗತಿಗಳ ಕಾರಣದಿಂದಾಗಿ ತಾವು ಸೋರಿಕೆ ಸಿದ್ಧಾಂತದ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ಸಿಬ್ಬಂದಿ ಸಾಮಾನ್ಯ ಉಡುಪಿನಲ್ಲಿ, ಕಾರ್ಯಾಚರಣೆಯದಲ್ಲದ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಅವರು ಯಾವುದೇ ಕಾರ್ಯಾಚರಣೆಗೆ ಹೋಗುತ್ತಿರಲಿಲ್ಲ. ಆ ಮಾರ್ಗದಲ್ಲಿ ಈ ಹಿಂದೆ ದಾಳಿ ನಡೆದೂ ಇಲ್ಲ. ಆದುದರಿಂದ ರಸ್ತೆ ಪರಿಶೀಲನೆ ತಂಡವನ್ನು ಅಲ್ಲಿ ನಿಯೋಜಿಸಿರಲಿಲ್ಲ. ಆದರೆ, ಅವರ ಚಲನೆಯ ಬಗ್ಗೆ ಮಾಹಿತಿ ಸೋರಿಕೆಯಾಗಿದೆ. ತಾವು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆಂದು ಮಹಾರಾಷ್ಟ್ರ ಪ್ರವಾಸದಿಂದ ಛತ್ತೀಸ್‌ಗಡಕ್ಕೆ ಧಾವಿಸಿರುವ ಡಿಜಿ ಪ್ರಸಾದ್ ವಿವರಿಸಿದ್ದಾರೆ.
ಸ್ಫೋಟವು ಭಾರೀ ದೊಡ್ಡದಾಗಿತ್ತು. ಸ್ಫೋಟ ನಡೆಸಲು ಪಕ್ಕಾ ಜಲ್ಲಿ ರಸ್ತೆಯಲ್ಲಿ 50-60 ಕಿ.ಗ್ರಾಂ.ಸ್ಫೋಟಕವನ್ನು ಹುಗಿದಿಟ್ಟಿರಬಹುದೆಂದು ಅವರು ಹೇಳಿದ್ದಾರೆ.





