ರುಂಗ್ಟಾ ಸೋದರರಿಗೆ ಎ.4ಕ್ಕೆ ಶಿಕ್ಷೆ ಘೋಷಣೆ
ಕಲ್ಲಿದ್ದಲು ಗಣಿ ಹಗರಣ
ಹೊಸದಿಲ್ಲಿ, ಮಾ.31: ಕಲ್ಲಿದ್ದಲು ಗಣಿ ಹಂಚಿಕೆ ಹಗರಣದಲ್ಲಿ ಜಾರ್ಖಂಡ್ ಇಸ್ಪಾಟ್ ಪ್ರೈವೆಟ್ ಲಿಮಿಟೆಡ್ (ಜೆಐಪಿಎಲ್) ಹಾಗೂ ಅದರ ಇಬ್ಬರು ನಿರ್ದೇಶಕರಿಗೆ ಶಿಕ್ಷೆಯ ಪ್ರಮಾಣದ ಆದೇಶವನ್ನು ಇಂದು ವಿಶೇಷ ನ್ಯಾಯಾಲಯವೊಂದು ಎ.4ಕ್ಕೆ ಮೀಸಲಿರಿಸಿದೆ. ಅಪರಾಧಿಗಳಿಗೆ ಗರಿಷ್ಠ ಕಾರಾಗೃಹ ವಾಸ ವಿಧಿಸಬೇಕೆಂದು ಸಿಬಿಐ ಮಮವಿ ಮಾಡಿತ್ತು.
ವಿಶೇಷ ಸಿಬಿಐ ನ್ಯಾಯಾಧೀಶ ಭರತ್ ಪರಾಶರ್‌ರ ಮುಂದೆ ವಾದ ಮಂಡಿಸಿದ ಸಿಬಿಐ, ಅಪರಾಧಿಗಳಾಗಿರುವ ಜಾರ್ಖಂಡ್ ಪ್ರೈ.ಲಿ. ಹಾಗೂ ಅದರ ನಿರ್ದೇಶಕರಾದ ಆರ್.ಎಸ್. ರುಂಗ್ಟಾ ಮತ್ತು ಆರ್.ಸಿ.ರುಂಗ್ಟಾ ಲೆಕ್ಕಾಚಾರ ಮಾಡಿಯೇ ಆರ್ಥಿಕ ಅಪರಾಧ ನಡೆಸಿದ್ದಾರೆ. ಆದುದರಿಂದ ಅವರು ದಯೆಗೆ ಅರ್ಹರಲ್ಲ. ಅವರಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕೆಂದು ಹೇಳಿತು.
ರಾಜ್ಯದಲ್ಲಿ ಕಲ್ಲಿದ್ದಲು ಗಣಿ ಪಡೆಯುವುದಕ್ಕಾಗಿ ಸರಕಾರಕ್ಕೆ ವಂಚಿಸಿದುದು ಹಾಗೂ ದಾರಿ ತಪ್ಪಿಸಿದುದು ಸಹಿತ ಹಲವು ಆರೋಪಗಳಲ್ಲಿ ಅವರು ದೋಷಿಗಳೆಂದು ನ್ಯಾಯಾಲಯ ಮಾ.28ರಂದು ತೀರ್ಪು ನೀಡಿತ್ತು.
Next Story





