ಅತ್ಯಂತ ಅಪಾಯಕಾರಿ ಮನುಷ್ಯ: ವಿಮಾನ ಅಪಹಾರಕನ ಪತ್ನಿ ನಿಕೋಶಿಯ
(ಸೈಪ್ರಸ್), ಮಾ. 31: ತನ್ನ ಮಾಜಿ ಗಂಡ ‘‘ಅತ್ಯಂತ ಅಪಾಯಕಾರಿ ಮನುಷ್ಯ’’ ಎಂದು ಮಂಗಳವಾರ ಈಜಿಪ್ಟ್‌ಏರ್ ವಿಮಾನವನ್ನು ಅಪರಿಸಿದ್ದಾನೆನ್ನಲಾದ ಈಜಿಪ್ಟ್ ಪ್ರಜೆಯ ಮಾಜಿ ಹೆಂಡತಿ ಹೇಳಿದ್ದಾರೆ.
ಆತ ಮಾದಕ ಪದಾರ್ಥಗಳನ್ನು ಸೇವಿಸುತ್ತಿದ್ದ, ತನ್ನ ಕುಟುಂಬವನ್ನು ಬೆದರಿಸುತ್ತಿದ್ದ ಹಾಗೂ ತನಗೆ ಮತ್ತು ಮಕ್ಕಳಿಗೆ ಹೊಡೆಯುತ್ತಿದ್ದ ಎಂದು ಸೈಪ್ರಸ್ ನಿವಾಸಿ ಮರೀನಾ ಪರಶೌ ಸೈಪ್ರಸ್‌ನ ಪತ್ರಿಕೆಯೊಂದರಲ್ಲಿ ಗುರುವಾರ ಪ್ರಕಟಗೊಂಡ ಸಂದರ್ಶನದಲ್ಲಿ ಹೇಳಿದ್ದಾರೆ.
ಮಾಜಿ ಹೆಂಡತಿ ಮತ್ತು ಮಕ್ಕಳನ್ನು ನೋಡುವ ಹತಾಶೆಯಿಂದ 59 ವರ್ಷದ ಸೈಫುದ್ದೀನ್ ಮುಸ್ತಾಫ ವಿಮಾನವನ್ನು ಅಪಹರಿಸಿದ್ದಾನೆ ಎಂಬ ಕೆಲವು ಮಾಧ್ಯಮಗಳ ವರದಿಯನ್ನು ಅವರು ಬಲವಾಗಿ ನಿರಾಕರಿಸಿದರು.
‘‘ಇದು ಸುಳ್ಳು’’ ಎಂದು ಮರೀನಾ ಹೇಳಿದರು. ಸೈಪ್ರಸ್‌ನ ಲರ್ನಾಕ ವಿಮಾನ ನಿಲ್ದಾಣಕ್ಕೆ ತನ್ನನ್ನು ಕರೆದುಕೊಂಡು ಬಂದ ಪೊಲೀಸರು, ಆತನ ಧ್ವನಿಯನ್ನು ಗುರುತಿಸುವಂತೆ ಮಾತ್ರ ತನ್ನನ್ನು ಕೇಳಿದರು ಎಂದರು.
Next Story





