ಮದುವೆಯಾಗುವ ಮಾತುಕೊಟ್ಟು ಯುವತಿಯರನ್ನು ವಂಚಿಸುತ್ತಿದ್ದ ಕೇರಳದ ಯುವಕನ ಬಂಧನ

ನೇಮಂ, ಎಪ್ರಿಲ್.1: ಮದುವೆಯಾಗುವುದಾಗಿ ಮಾತುಕೊಟ್ಟು ಹೆಣ್ಣುಮಕ್ಕಳನ್ನು ಪೀಡಿಸುತ್ತಿದ್ದ ಯವಕನೊಬ್ಬನನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ಪತ್ತನತಿಟ್ಟಂ ತಿರುವಲ್ಲ ಕೋಯಿಮಲ ಲಕ್ಷಂ ವೀಡ್ ಕಾಲನಿಯ ಸಿದ್ಧಾರ್ಥ ಯಾನೆ ಸೋನು(26) ಎಂಬಾತನನ್ನು ಈ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ನೇಮಂಎಂಬಲ್ಲಿನ ಯುವತಿಯನ್ನು ವಶೀಕರಿಸಿ ಅಪಹರಿಸಿ ಲೈಂಗಿಕವಾಗಿ ಬಳಸಿ ಆನಂತರ ತೊರೆದಿದ್ದನೆಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ದಸ್ತಗಿರಿ ಮಾಡಿದಾಗ ಹೆಣ್ಣುಮಕ್ಕಳನ್ನು ವಂಚಿಸುವುದು ಆತನ ಖಾಯಂ ಕೆಲಸ ಎಂಬುದು ಪೊಲೀಸರಿಗೆ ತಿಳಿದು ಬಂದಿತ್ತು.
ಶಾಪಿಂಗ್ ಕಾಂಪ್ಲೆಕ್ಸ್‌ಗಳಂತಹ ಸ್ಥಳಗಳಲ್ಲಿ ರೋಮ್ ತೆಗೆದು ಅಲ್ಲಿ ಅಂಗಡಿಗಳಲ್ಲಿ ಕೆಲಸಕ್ಕಿರುವ ಹೆಣ್ಣುಮಕ್ಕಳನ್ನು ಬಲೆಗೆ ಹಾಕುವುದು ಆತನ ಅಭ್ಯಾಸವಾಗಿತ್ತು. ಅವರನ್ನು ಅಲ್ಲಿಂದ ಕರೆದುಕೊಂಡು ಹೋದ ಬಳಿಕ ಅವರ ಚಿನ್ನಾಭರಣಗಳನ್ನು ಪಡೆದು ಮಾರಿ ಆತ ಖರ್ಚು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹಣ ಮುಗಿಯುವಾಗ ಅವರನ್ನು ತೊರೆದು ಹೋಗುವುದು ಅವನ ರೂಢಿಯಾಗಿತ್ತು. ಇತರ ಪೊಲೀಸ್ ಠಾಣೆಗಳಲ್ಲಿಯೂ ಈತನ ಕಳವು ಕೇಸುಗಳು ಇವೆ ಎಂದು ಪೊಲೀಸರು ಹೇಳಿದ್ದಾರೆ.
ಮದುವೆಯಾಗುವುದಾಗಿ ಮಾತುಕೊಟ್ಟು ಯುವತಿಯೊಬ್ಬಳನ್ನು ಮೋಹದ ಬಲೆಯಲಿ ಕೆಡವಿ ಆಂದ್ರಪ್ರದೇಶದ ಗುಂಟೂರಿಗೆ ಕರೆದು ಹೋಗಿ ಅಲ್ಲಿದ್ದು ಅವಳನ್ನು ಲೈಂಗಿಕವಾಗಿ ಬಳಸಿ ತೊರೆದುಹೋಗಿದ್ದ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿದೆ. ನೇಮಂ ಎಂಬಲ್ಲಿ ಯುವತಿಯೊಬ್ಬಳು ಕಾಣೆಯಾಗಿದ್ದಾಳೆ ಎಂಬ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಈತ ತೊರೆದಿದ್ದ ಯುವತಿ ಮರಳಿಬಂದು ಸಾಕ್ಷಿ ಹೇಳಿದ ಪ್ರಕಾರ ಸೋನುವನ್ನುಪೊಲೀಸರು ಬಂಧಿಸಿದರೆಂದು ವರದಿಗಳು ತಿಳಿಸಿವೆ. ಈ ತಿಂಗಳು ಹದಿನೇಳನೆ ತಾರೀಕಿಗೆ ಯುವತಿ ಕಾಣೆಯಾಗಿದ್ದಾಳೆಂದು ನೇಮಂ ಪೊಲೀಸರಿಗೆ ದೂರು ಲಭಿಸಿತ್ತು.
ರೈಲಿನಲ್ಲಿ ಆಂಧ್ರಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದನೆಂದು ಪೊಲೀಸರಿಗೆ ಯುವತಿ ತಿಳಿಸಿದ್ದಳು. ಇದರಂತೆ ಇನ್ನೊಬ್ಬಳು ಯುವತಿಗೂ ಮದುವೆಯಾಗುವುದಾಗಿ ಭರವಸೆ ಕೊಟ್ಟು ವಾಸಿಸುತ್ತಿದ್ದಾಗಲೇ ನೇಮಂನ ಯುವತಿಗೆ ನಿಕಟನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿ ಬಂದ ಬಳಿಕ ಈತನನ್ನು ಪೊಲೀಸರು ಹುಡುಕುತ್ತಿದ್ದಾಗ ಪಾಪ್ಪನಂಗಾಟ್ ಗೂಡಂಗಡಿಯಲ್ಲಿ ಕೆಲಸಕ್ಕೆ ಈತ ಸೇರಿದ್ದಾನೆಂಬ ಮಾಹಿತಿ ಪೊಲೀಸರಿಗೆ ತಿಳಿದು ಬಂದಿತ್ತು. ಅಲ್ಲಿಂದ ಮಂಗಳವಾರ ರಾತ್ರೆ ಪೊಲೀಸರು ಆತನನ್ನು ಬಂಧಿಸಿದ್ದಾರೆಂದು ವರದಿಗಳು ತಿಳಿಸಿವೆ.







