ಇಪ್ಪತ್ತೈದು ಸಚಿವರ ಬದಲಾವಣೆ ಬೇಸ್‌ಲೆಸ್
ಸಮಾನ ಮನಸ್ಕ ಶಾಸಕರ ನಡವಳಿಕೆಗೆ ಸಚಿವ ರಾಮಲಿಂಗಾ ರೆಡ್ಡಿ -ದಿನೇಶ್ ಗುಂಡೂರಾವ್ ಗರಂ

ಬೆಂಗಳೂರು, ಎ.1: ರಾಜ್ಯ ಸಚಿವ ಸಂಪುಟದಿಂದ ಇಪ್ಪತ್ತೈದು ಶಾಸಕರನ್ನು ಕೈ ಬಿಡಬೇಕೆಂಬ ಸಮಾನ ಮನಸ್ಕ ಶಾಸಕರ ಬೇಡಿಕೆಗೆ ಗರಂ ಆಗಿರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು"ಶಾಸಕರ ನಡವಳಿಕೆ ತಪ್ಪು. ಮಂತ್ರಿಗಳ ಬದಲಾವಣೆಗೆ ನಿಖರ ಕಾರಣಬೇಕು. ಬಹಿರಂಗವಾಗಿ ಒತ್ತಡ ಹೇರುವುದು ಸರಿಯಲ್ಲ ಎಂದು ಹೇಳಿದ್ದಾರೆ
"ಪಕ್ಷದ ಕೆಲಸ ಮಾಡಿಯೇ ನಾವು ಮಿನಿಸ್ಟರ‍್ ಆಗಿರುವುದು. ಐದು ವರ್ಷಗಳ ಕಾಲ ಮುಖ್ಯ ಮಂತ್ರಿಯ ಬದಲಾವಣೆ ಇಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂ ರಾವ್ ಸಮಾನ ಮನಸ್ಕ ಶಾಸಕರ ನಡುವಳಿಕೆ ತಪ್ಪು ಎಂದು ಹೇಳಿದ್ದಾರೆ.
ಸಚಿವರನ್ನು ಕೈ ಬಿಡಿ ಎಂದು ಯಾರೂ ಪ್ರಸ್ತಾಪ ಮಾಡಿಲ್ಲ. ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನಮ್ಮ ಹೇಳಿಕೆಯಿಂದ ಪಕ್ಷಕ್ಕೆ ಹಾನಿಯಾಗಿದ್ದರೆ 35ಶಾಸಕರನ್ನು ವಜಾ ಮಾಡಲಿ ಎಂದು ಶಾಸಕ ಎಸ್ ಟಿ ಸೋಮಶೇಖರ್ ಅಭಿಪ್ರಾಯ ಪಟ್ಟಿದ್ದಾರೆ.
ಶಾಸಕರ ಬೇಡಿಕೆ ಇಡುವುದು ಸಹಜ. ಆದರೆ 25 ಅಸಮಥ ಶಾಸಕರ ಪಟ್ಟ ಯಲ್ಲಿ ನಾವಿಬ್ಬರು ಇಲ್ಲ ಎಂದು ಸಚಿವರಾದ ವಿನಯ ಕುಮಾರ್್ ಸೊರಕೆ ಹಾಗೂ ಜಾರಕಿಹೊಳಿ ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದಾರೆ.





