ಶೀಘ್ರ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕಾರ್ಯಪ್ರರ್ವತರಾಗಿ ಅಧಿಕಾರಿಗಳಿಗೆ ಎಸಿ ನಾಗೇಂದ್ರ ಹೊನ್ನಳ್ಳಿ ಸೂಚನೆ
ಜಿಲ್ಲಾ ಪಂಚಾಯತ ಅಧಿಕಾರಿಗಳ ಕಾರ್ಯಕ್ಕೆ ಉಪವಿಭಾಗಧಿಕಾರಿ ಗರಂ

ಮುಂಡಗೋಡ : 8-10 ದಿನದೊಳಗೆ ತಾಲೂಕಿನಲ್ಲಿ ಗ್ರಾಮಾಂತರ ಹಾಗು ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆವನ್ನು ಬಗೆ ಹರಿಸಬೇಕು ತಾಲೂಕಿನ ಎಲ್ಲಿಂದಲೂ ಕುಡಿಯುವ ನೀರಿನ ಸಮಸ್ಯೆ ಕುರಿತು ದೂರ ಬರದಹಾಗೆ ನೋಡಿಕೊಳ್ಳಬೇಕು ಎಂದು ಶಿರಸಿ ಉಪವಿಭಾಗಧಿಕಾರಿ ಡಾ॥
ಅವರು ಗುರವಾರ ಮಿನಿವಿಧಾನ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಕುರಿತು ತುರ್ತು ಸಭೆ ನಡೆಸಿದರು.
ತಾಲೂಕಿಗೆ ಡಿಸಿ ಅನುದಾನ 50 ಲಕ್ಷ ರೂ ಹಾಗು ಝಡ್‌ಪಿ ಅನುದಾನ 50 ಲಕ್ಷ ರೂ ಮಂಜುರಾಗಿ ಅನುದಾನ ದ ಹಣದಲ್ಲಿ ಸರಿಯಾಗಿ ಕಾಮಗಾರಿಗಳನ್ನು ಮಾಡಲಾಗುತ್ತಿದಿಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಇಂದಿನ ಸಭೆ ನಡೆಸಲಾಗುತ್ತಿದೆ ಯಾವುದೇ ಕಾರಣಕ್ಕೂ ಜನರಿಗೆ ಕುಡಿಯುವ ನೀರಿನ ಸಮಸ್ಯ ತಲೆದೂರಬಾರದು ಎನ್ನುವ ಮುಖ್ಯ ಉದ್ದೇಶ ಎಂದು ಹೇಳಿದರು ಜಿಲ್ಲಾ ಪಂಚಾಯತ ಅಧಿಕಾರಿಗಳನ್ನು ಎಲ್ಲಲ್ಲಿ ಕುಡಿಯುವ ನೀರಿನ ಕಾಮಗಾರಿ ಮಾಡಲಾಗಿದೆ ಎಂದು ಉಪವಿಭಾಗಧಿಕಾರಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಪಂಚಾಯತ ಅಧಿಕಾರಿಗಳಾದ ಎಇಇ ಸುರೇಶ ನಾಯಕ, ಎಇ ಅಂಜಲಿ ಪಾಟೀಲ ಹಾಗು ನವೀನ 38 ಜಿಲ್ಲಾಪಂಚಾಯತ ಕಾಮಗಾರಿಗಳಲ್ಲಿ 18 ಸಂಪೂರ್ಣಮಾಡಲಾಗಿದೆ. ಇದಕ್ಕೆ ತೃಪ್ತರಾಗದ ಉಪವಿಭಾಗಧಿಕಾರಿ ನೋಡ್ರಿ ಹೀಗೆಲ್ಲಾ ಮಾಡಿದರೆ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಾಗುತ್ತಿದೆ. ಶೀಘ್ರಗತಿಯಲ್ಲಿ ಎಲ್ಲಲ್ಲಿ ನೀರಿನ ಸಮಸ್ಯೆ ಇದಿಯೋ ಅಲ್ಲಲ್ಲಿ ನೀರಿನ ಕಾಮಗಾರಿಗಳನ್ನುನೇರವೇರಿಸಬೇಕು. ಡಿಸಿ ಫಂಡ್‌ನ್ನು ರಿಪೇರಿಕೆಲಸಕ್ಕೆ ಉಪಯೋಗಿಸಿ ಝಡ್‌ಪಿ ಹಣವನ್ನು ಹೊಸಕಾಮಗಾರಿ ಬೊರವೆಲ್ ಅಳವಡಿಸುವ ಹಾಗು ನೀರಿನ ಸಮಸ್ಯೆ ನಿವಾರಿಸಿಕೊಳ್ಳಲು ಉಪಯೋಗಿಸಿಕೊಳ್ಳಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಫಂಡ್ ಕಡಿಮೆ ಬಿದ್ದರೆ ಹೇಳಿ ಏನೇಯಾದರು ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಾರದು. ಜನರಿಗ ನೀರಿನ ಸಮಸ್ಯೆ ಯಾದರೆ ಅದಕ್ಕೆ ಸಂಬಂದ ಪಟ್ಟ ಅಧಿಕಾರಿಗಳನ್ನು ಗುರಿಮಾಡಿ ಕಾನೂನ ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಪಾಳಾ ಗ್ರಾಮ ಪಂಚಾಯತ ಕೆಲವಡೆ ಬಾವಿ ತೋಡಿದರು ನೀರು ಬರುತ್ತಾ ಇಲ್ಲಾ ಹಾಗು ಇಂದೂರ ಪಂಚಾಯತ ವ್ಯಾಪ್ತಿಯಲ್ಲಿ ತೋಡಿದ ಬೊರವೆಲ್ ನೀರು ಜನರಿಗೆ ಕುಡಿಯಲಿಕ್ಕೂ ಯೋಗ್ಯವಿಲ್ಲ ಈ ನೀರನ್ನು ಕುಡಿದ ಜನರು ಜಡ್ಡು ಜಾಪತ್ರೆಯಿಂದ ಬಳಲುತಿದ್ದಾರೆ ಪ್ರಾಣಿಗಳು ಮೂಸಲು ಇಷ್ಟಪಡುವುದಿಲ್ಲ ಎಂದು ಸಾರ್ವಜನಿಕರು ದೂರಿದ್ದನ್ನು ಗಂಭೀರವಾಗಿ ಪರಿ ಗಣಿಸಿದ ಉಪವಿಭಾಗಧಿಕಾರಿ ಇಂಥಹ ಸಮಸ್ಯೆಗಳಿಗೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆವನ್ನು ಪರಹರಿಸಬೇಕು ಎಂದು ತಾಕಿತ್ತು ಮಾಡಿದರು.
ಸಭೆಯಲ್ಲಿ ತಹಶೀಲ್ದಾರ ಅಶೋಕ ಗುರಾಣಿ, ತಾ.ಪಂ ಕಾ.ನಿ.ಅಧಿಕಾರಿ ಭೈರವಾಡಗಿ, ಲೋಕೊಪಯೋಗಿ, ಚಿಕ್ಕ ನೀರಾವರಿ, ಪ.ಪಂ ಮುಖ್ಯಾಧಿಕಾರಿ ಸೇರಿದಂತ ತಾಲೂಕಾ ಮಟ್ಟದ ಅಧಿಕಾರಿಗಳು ಜಿ.ಪಂ ನೂತನ ಸದಸ್ಯರಾದ ಜಯಮ್ಮ ಹಿರೇಹಳ್ಳಿ, ರವಿಗೌಡಾ ಪಾಟೀಲ ಗ್ರಾಮಪಂಚಾಯತ ಅಭಿವೃದ್ದಿ ಅಧಿಕಾರಿಗಳು ಹಾಗು ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.





