ಭಟ್ಕಳ : ಮುರ್ಡೆಶ್ವರ ಪಾಲಿಟೆಕ್ನಿಕ್ ನಲ್ಲಿ ರಕ್ತದಾನ

ಭಟ್ಕಳ: ಮುರ್ಡೇಶ್ವರದಲ್ಲಿ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆ ಯ ರಕ್ತ ನಿಧಿ ಕೇಂದ್ರ , ಸಮುದಾಯ ಅಭಿವೃಧ್ಹಿ ಯೋಜನೆ ಆರ್.ಎನ್.ಎಸ್ ಪಾಲಿಟೆಕ್ನಿಕ್ ಮುರ್ಡೇಶ್ವರ, ಲಾಯನ್ಸ್ ಕ್ಲಬ್ ಮುರ್ಡೆಶ್ವರ ಎನ್.ಎಸ್.ಎಸ್ ಘಟಕ, ವಿದ್ಯಾರ್ಥಿ ಸಂಘ ಆರ್.ಎನ್.ಎಸ್ ಪಾಲಿಟಕ್ನಿಕ್ ಮುರ್ಡೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ರಕ್ತದಾನ ಮತ್ತು ರಕ್ತದ ವರ್ಗೀಕರಣ ಶಿಬಿರ ನಡೆಯಿತು. ಶಿಬಿರದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಹಾಗೂ ಸಾರ್ವಜನಿಕರು ಭಾಗವಹಿಸಿ ಸ್ವಯಂ ಪ್ರೇರಣೆಯಿಂದ 56 ಜನರು ತಮ್ಮ ಅಮೂಲ್ಯ ರಕ್ತದಾನವನ್ನು ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿಸಲು ಪ್ರೇರಣೆಯಾದರು. ಶಿಬಿರದಲ್ಲಿ ಪಾಲಿಟೆಕ್ನಿಕ್ ನ ಎಂ.ವಿ.ಹೆಗಡೆ, ಸಂತೋಷ ಆರ್.ಎ, ಕೆ,ಮರಿಸ್ವಾಮಿ, ದಿನೇಶ ಆಚಾರ್ಯ್, ಲಾಯನ್ಸ್ ಕ್ಲಬ್ ನ ಡಾ.ಸುನೀಲ್ ಜತನ್, ಮಂಜುನಾಥ ದೇವಡಿಗ, ಡಾ.ವಾದಿರಾಜ ಭಟ್, ತಿಲಕ್ ರಾವ್, ವಿದ್ಯಾರ್ಥಿ ಸಂಘದ ಪರಾಧಿಕಾರಿಗಳು ಭಾಗವಹಿಸಿದ್ದರು.
Next Story





