ಮಂಗಳೂರು: ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದರ ವಿರುದ್ದ ದ.ಕ ಜಿಲ್ಲಾ ಯುವ ಜನತಾದಳದಿಂದ ಪ್ರತಿಭಟನೆ

ಮಂಗಳೂರು,ಎ.1:ದ್ವಿತೀಯ ಪಿಯುಸಿಯ ರಸಾಯನಶಾಸ್ತ್ರ ಪತ್ರಿಕೆ ಮತ್ತೊಮ್ಮೆ ಸೋರಿಕೆಯಾಗಿರುವುದರ ವಿರುದ್ದ ಇಂದು ದ.ಕ ಜಿಲ್ಲಾಧಿಕಾರಿ ಕಚೇರಿ ಎದುರು ದ.ಕ ಜಿಲ್ಲಾ ಯುವ ಜನತಾದಳ(ಜಾ)ದಿಂದ ಪ್ರತಿಭಟನೆ ನಡೆಸಲಾಯಿತು.
ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದರಿಂದ ಲಕ್ಷಾಂತರ ವಿದ್ಯಾರ್ಥಿ ಮತ್ತು ಕುಟುಂಬಗಳ ಜೀವನದೊಂದಿಗೆ ಚೆಲ್ಲಾಟವಾಡಿದಂತಾಗಿದ್ದು ತಪ್ಪಿತಸ್ತ ಆಡಳಿತಶಾಯಿಗೆ ಶಿಕ್ಷೆಯಾಗಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜನತಾದಳ(ಜಾ) ದ.ಕ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಕುಂಞ, ಕಾರ್ಯಧ್ಯಕ್ಷ ಎಸ್.ಪಿ.ಚಂಗಪ್ಪ, ಮುಖಂಡರುಗಳಾದ ನಾಸಿರ್, ಲಿಖಿತ್ ರಾಜ್, ದೀಪಕ್ ಎಂ , ಅಕ್ಷಿತ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
Next Story





