ಕಳವು ಪ್ರಕರಣ: ಇಬ್ಬರ ಬಂಧನ
ಕುಶಾಲನಗರ, ಎ.1: ಪಟ್ಟಣದ ಹೃದಯ ಭಾಗದಲ್ಲಿರುವ ಮಹಾಲಕ್ಷ್ಮೀ ಹಾರ್ಡ್‌ವೇರ್ ಅಂಗಡಿಯಿಂದ ಕಳವು ಮಾಡಿದ ಪ್ರಕರಣ ವರದಿಯಾಗಿದೆ.
ಈ ಸಂಬಂಧ ಅಂಗಡಿ ಮಾಲಕ ರಾಜುರಾಮ್ ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತರಾದ ಠಾಣಾಧಿಕಾರಿ ಅನೂಪ್ ಮಾದಪ್ಪರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೂಡಿಗೆ ನಿವಾಸಿ ರಮೇಶ್(30), ಪವಿ(32)ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ಆಟೊ ಚಾಲಕ ಸಾಗರ್(23) ಪರಾರಿಯಾಗಿರುತ್ತಾನೆ. ಕಳವು ಮಾಡಿದ ವಸ್ತುಗಳನ್ನು ಕೂಡಿಗೆಯ ವಿಜಯ್ ಎಂಬವರಿಗೆ ಮಾರಾಟ ಮಾಡಿರುವುದಾಗಿ ಪೊಲೀಸ್ ತನಿಖೆ ವೇಳೆಯಲ್ಲಿ ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಉದಯ್, ಸಜಿ, ಲೋಕೇಶ್, ಅನಂತ್ ಕುಮಾರ್, ಅಜಿತ್ ಭಾಗಿಯಾಗಿದ್ದರು.
Next Story





