ಮುಂಡಗೋಡ ಪ.ಪಂ ಅಧ್ಯಕ್ಷರಾಗಿ ರಫೀಕ ಇನಾಮದಾರ ಹಾಗು ಉಪಾಧ್ಯಕ್ಷರಾಗಿ ಫಕ್ಕಿರಪ್ಪ ಅಂಟಾಳ ಅವಿರೋಧವಾಗಿ ಆಯ್ಕೆ

ಮುಂಡಗೋಡ : ಶುಕ್ರವಾರ ಅಧ್ಯಕ್ಷ ಉಪಾಧ್ಯಕ್ಷ ಆಯ್ಕ ಪ್ರಕ್ರಿಯೆ ನಡೆದು ಅಧ್ಯಕ್ಷರಾಗಿ ರಫೀಕ ಇನಾಮದಾರ ಹಾಗು ಉಪಾಧ್ಯಕ್ಷರಾಗಿ ಫಕ್ಕಿರಪ್ಪ ಅಂಟಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
– ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಒಮ್ಮತ ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದರು ಅಧ್ಯಕ್ಷ ಸ್ಥಾನಕ್ಕೆ ರಫೀಕ ಇನಾಮದಾರ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಫಕ್ಕಿರಪ್ಪ ಅಂಟಾಳ ಮಾತ್ರ ನಾಮಪತ್ರಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಪೂರ್ವದಲ್ಲಿ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ನಿಕಟಪೂರ್ವ ಅಧ್ಯಕ್ಷ ಫಣಿರಾಜ ಹದಳಗಿ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ವಿನಾಯಕ ರಾಯ್ಕರ ನಾಮಪತ್ರ ಸಲ್ಲಿಸಿದ್ದರು.
16 ಸದಸ್ಯರ ಬಲದ ಪಟ್ಟಣ ಪಂಚಾಯತಲ್ಲಿ ಒಬ್ಬ ಅಭ್ಯರ್ಥಿ ಮೃತಪಟ್ಟಿರುವುದರಿಂದ 15 ಸದಸ್ಯರು ಪಟ್ಟಣ ಪಂಚಾಯತದಲ್ಲಿದ್ದಾರೆ. 15 ಜನ ಸದಸ್ಯರಲ್ಲಿ ಕಾಂಗ್ರೆಸ್ ಬಲ 11, ಬಿಜೆಪಿ 3, ಜೆಡಿಎಸ್.1 ಕಾಂಗ್ರೆಸ್ ನ 11 ಸದಸ್ಯರು ಒಮ್ಮತರಾಗಿರುವುದನ್ನು ಅರಿತ ಫಣಿರಾಜ ಹದಳಗಿ ಹಾಗು ವಿನಾಯಕ ರಾಯ್ಕರ ನಾಮಪತ್ರ ಹಿಂಪಡೆಯುವುದರಿಂದ ರಫೀಕ ಇನಾಮದಾರ ಅಧ್ಯಕ್ಷರಾಗಿ ಹಾಗು ಪ್ರಕಾಶ ಅಂಟಾಳ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಶೀಲ್ದಾರ ಅಶೋಕ ಗುರಾಣಿ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ರಫೀಕ ಇನಾಮದಾರ ಮಾತನಾಡಿ ತಮಗೆ ಅವಿರೋಧವಾಗಿ ಆಯ್ಕೆಮಾಡಿದ ಎಲ್ಲರಿಗೂ ಅಭಿನಂದಿಸುತ್ತಿದೇನೆ. ನಾನು ಎಲ್ಲ ಪಕ್ಷದವರನ್ನು ಪರಿಗಣನೆಗೆ ತೆಗೆದುಕೊಂಡು ಕೆಲಸಮಾಡುವುದಾಗಿ ತಿಳಿಸಿದರು
ಶಾಸಕ ಶಿವರಾಮ ಹೆಬ್ಬಾರ ಅಯ್ಕೆಯಾದ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ಆ ಪಕ್ಷ ಈ ಪಕ್ಷ ಎಂದು ಚುನಾವಣೆ ಆದನಂತರ ನಾವೆಲ್ಲ ಒಂದೇ ಎಲ್ಲರೂ ಕೂಡಿ ಪಟ್ಟಣ ಪಂಚಾಯತ ಮುಂಡಗೋಡ ಅಭಿವೃದ್ದಿ ಪಡಿಸೋಣ ಎಂದರಲ್ಲದೆ ತಮ್ಮ ಕಾಲಾವಧಿಯಲ್ಲಿ ತಮಗೆ ಸಹಕಾರ ನೀಡಿದ ನಿಕಟಪೂರ್ವ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು
ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಬೆಂಬಲಿಗರು ಪಟಾಕ್ಷೀ ಸಿಡಿಮದ್ದು ಸಿಡಿಸಿ ಸಂಭ್ರಮಿಸಿದರು .
ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಲು ಕಾಂಗ್ರೆಸನ್ ಕಾರ್ಯಪಡೆಯು ಹರಿದು ಬಂದಿತ್ತು
ಬಿ.ಎಫ್ ಬೆಂಡಿಗೇರಿ ಮನೆಗೆ ಭೇಟಿ: ಮುಸ್ಲೀಂ ಹಾಗು ಕಾಂಗ್ರೆಸ ಹಿರಿಯ ಮುಖಂಡ ಬಿ.ಎಫ್ ಬೆಂಡಿಗೇರಿ ನೂತನ ಅಧ್ಯಕ್ಷ ಉಪಾಧ್ಯಕ್ಷ ಭೇಟಿನೀಡಿ ಅವರ ಆಶೀರ್ವಾದ ಪಡೆದರು. ಒಟ್ಟಿಗೆ ಶಾಸಕರ ಪ್ರೀತಿಯ ಶಿಷ್ಯ ರಫೀಕ ಇನಾಮದಾರ ಅಧ್ಯಕ್ಷರಾದಂತಾಗಿದೆ. ಇದರಿಂದ ಶಾಸಕರ ಆಸೆಯು ಈಡೆರಿದಂತಾಗಿದೆ







