ಕಿರು ತೆರೆ ನಟಿ ಪ್ರತ್ಯೂಷಾ ನೇಣಿಗೆ ಶರಣು

ಮುಂಬೈ, ಎ.1:ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಶುಕ್ರವಾರ ಮುಂಬೈನ ಗೋರೆಗಾಂವ್‌ನ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
24ರ ಹರೆಯದ ಪ್ರತ್ಯೂಷಾ ಅವರು ’ಬಾಲಿಕಾ ವಧು ’ಟಿವಿ ಧಾರವಾಹಿ ಮೂಲಕ ಪ್ರಸಿದ್ಧಿ ಪಡೆದಿದ್ದರು. ಭಗ್ನ ಪ್ರೇಮ ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Next Story





