ಮಂಗಳೂರು: ಜೈಲ್ ಸಿಬ್ಬಂದಿಗೆ ಹಲ್ಲೆ: ಆರೋಪ
ಮಂಗಳೂರು, ಎ. 1: ಜೈಲ್ ಸಿಬ್ಬಂದಿಯೊಬ್ಬರಿಗೆ ದುರುಗುಟ್ಟಿ ನೋಡಿದ ಎಂಬ ಆರೋಪದಲ್ಲಿ ಇನ್ನೋರ್ವ ಸಿಬ್ಬಂದಿ ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಕೇಂದ್ರ ಕಾರಾಗೃಹದಲ್ಲಿ ಇಂದು ಸಂಜೆ ನಡೆದಿದೆ.
ಹಲ್ಲೆಗೊಳಗಾದವರನ್ನು ಜೈಲ್ ಕಾನ್‌ಸ್ಟೇಬಲ್‌ರನ್ನು ಬಾಗಲಕೋಟೆಯ ಬಾದಾಮಿ ತಾಲೂಕಿನ ಸಂತೋಷ್ (27) ಎಂದು ಗುರುತಿಸಲಾಗಿದೆ. ಜೈಲ್‌ನ ಇನ್ನೋರ್ವ ಸಿಬ್ಬಂದಿ ಚಕ್ರೇಶ್ ಕುಮಾರ್ ಎಂಬಾತ ಹಲ್ಲೆ ನಡೆಸಿದವರು ಎಂದು ಆರೋಪಿಸಲಾಗಿದೆ.
ಶುಕ್ರವಾರ ಸಂಜೆ ಸುಮಾರು 7 ಗಂಟೆ ಹೊತ್ತಿಗೆ ಸಂತೋಷ್ ಅವರು ಜೈಲ್‌ನ ಸೂಪರಿಂಟೆಂಡೆಂಟ್ ಕೃಷ್ಣಮೂರ್ತಿ ಅವರಲ್ಲಿ ರೇಷನ್ ಕಾರ್ಡ್ ಸಹಿ ಪಡೆಯಲೆಂದು ಹೋಗಿ ಹಿಂದಿರುಗಿದಾಗ ಅಲ್ಲೇ ಉಪಪ್ಥಿತರಿದ್ದ ಚಕ್ರೇಶ್ ಕುಮಾರ್ ತನ್ನನ್ನು ಗುರುಗುಟ್ಟಿ ನೋಡಿದ ಎಂದು ಹೇಳಿ ರೀಪ್‌ವೊಂದರಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಸಂತೋಷ್ ಆರೋಪಿಸಿದ್ದಾರೆ.
ಹಲ್ಲೆಗೊಳಗಾಗಿರುವ ಸಂತೋಷ್ ನಗರ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Next Story





