ಎಂಟು ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಎ.1: ರಾಜ್ಯ ಸರಕಾರವು ಇಂದಿನಿಂದ ಜಾರಿಗೆ ಬರುವಂತೆ ಎಂಟು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದಶಿಯಾಗಿ ಶಾಲಿನಿ ರಜನೀಶ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಹರ್ಷಗುಪ್ತ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾಗಿ ವಿ.ಪೊನ್ನುರಾಜು, ಮೈಸೂರುಪೇಪರ್ ಮಿಲ್‌ನ ಆಡಳಿತ ನಿರ್ದೇಶಕರಾಗಿ ಟಿ.ಕೆ.ಅನಿಲ್‌ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಅದೇ ರೀತಿ ಕಲ್ಪನಾ ಅವರನ್ನು ಮೈಸೂರು ಎಟಿಐ ನಿರ್ದೇಶಕರಾಗಿ, ನವೀನ್ ರಾಜ್‌ಸಿಂಗ್‌ರನ್ನು ಹಿಂದುಳಿದ ವರ್ಗದ ಇಲಾಖೆಯ ನಿರ್ದೇಶಕರಾಗಿ, ರಾಮೇಗೌಡರನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ನಿರ್ದೇಶಕರಾಗಿ, ಪಲ್ಲವಿ ಅಕುರತಿ ಅವರನ್ನು ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣೆ ಇಲಾಖೆಯ ಉಪ ಕಾರ್ಯದರ್ಶಿಯಾಗಿ ರಾಜ್ಯ ಸರಕಾರ ವರ್ಗಾವಣೆ ಆದೇಶ ಹೊರಡಿಸಿದೆ.
Next Story





