ಎಪ್ರಿಲ್ ಫೂಲ್ ದಿನ ಟ್ವಿಟರ್‌ನಲ್ಲಿ ಮೋದಿ ದಿವಸ್ ಆಯ್ತು!
ಹೊಸದಿಲ್ಲಿ, ಎ.1: ಪ್ರಧಾನಿ ನರೇಂದ್ರ ಮೋದಿ, ಆಗಾಗ ಸಾಮಾಜಿಕ ಮಾಧ್ಯಮಗಳ ಕಲ್ಪನೆಗಳ ವಸ್ತುವಾಗುತ್ತಾರೆ. ಶುಕ್ರವಾರದ ಎಪ್ರಿಲ್ ಫೂಲ್‌ನ ದಿನದಂದೂ ಭಿನ್ನವಾಗಿಲ್ಲ.
ಇಂದಿನ ದಿನ ಮೋದಿ ಬೆಂಬಲಿಗರು ಹಾಗೂ ಟೀಕಾಕಾರರ ನಡುವಣ ವರಸೆ ಯುದ್ಧದ ಮೂಲಕವೇ ಆರಂಭವಾಗಿದೆ. ‘ಮೋದಿ ದಿವಸ್’ ಎಂಬ ಟ್ಯಾಗ್‌ನೊಂದಿಗೆ, ಭರವಸೆ ಈಡೇರಿಸದುದಕ್ಕಾಗಿ ಪ್ರಧಾನಿಯನ್ನು ಟೀಕಿಸಲಾಗಿದೆ.
ಇಂತಹ ಅನೇಕ ಟೀಕೆಗಳಲ್ಲಿ ವಿದೇಶಗಳಲ್ಲಿರುವ ಕಪ್ಪು ಹಣ ಮರಳಿ ತರುವ ಮೋದಿಯವರ ಭರವಸೆ ಅಗ್ರ ಸ್ಥಾನ ಪಡೆದಿದೆ. ‘‘ನನ್ನ ಖಾತೆಗೆ ಇದೀಗ ರೂ.15 ಲಕ್ಷ ಜಮೆ ಮಾಡಲ್ಪಟ್ಟಿದೆ.’’ ಎಂದು ಒಂದು ಟ್ವೀಟ್ ಹೇಳಿದರೆ, ಇನ್ನೋಬ್ಬಾತ, ‘‘ನೀವು ನಮ್ಮ ಬ್ಯಾಂಕ್ ಖಾತೆಗಳಿಗೆ ತಲಾ ರೂ. 15 ಲಕ್ಷ ತುಂಬಿಸುವ ಆಶ್ವಾಸನೆ ನೀಡಿದ್ದಿರಿ. ಆದರೆ, ಅದನ್ನು ವಿಜಯ ಮಲ್ಯರ ಖಾತೆಗೆ ಹಾಕಿದ್ದೀರಿ. ಅವರು ಭಾತರದಿಂದ ಓಡಿಹೋದರು’’ ಎಂದು ಟ್ವೀಟಿಸಿದ್ದಾನೆ.
ಇತರ ಮೋದಿ ಟೀಕೆಗಳಲ್ಲಿ ಅವರ ಈಗಿನ ವಿದೇಶ ಪ್ರವಾಸ ಸೇರಿದೆ.
2014ರಲ್ಲಿ ಮೋದಿ , ಬಿಜೆಪಿಯ ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಲ್ಪಟ್ಟ ಬಳಿಕ, ಮೋದಿ ಭಾಗವಹಿಸಿದ್ದ, ವಾಣಿಜ್ಯ ಛೇಂಬರೊಂದರ ಕಾರ್ಯಕ್ರಮದಲ್ಲಿ, ಕಾಂಗ್ರೆಸ್ ಹಾಗೂ ಅದರ ಬೆಂಬಲಿಗರು ‘ಫೇಕು’ ಎಂಬ ಟ್ಯಾಗ್‌ನಲ್ಲಿ ಸಾಮಾಜಿಕ ಮಾಧ್ಯಮ ಅಭಿಯಾನವೊಂದನ್ನು ಆರಂಭಿಸಿದ್ದರು. ತಿಂಗಳ ಮೊದಲ ದಿನದ ಆಚರಣೆ ‘ಎಪ್ರಿಲ್ ಫೂಲ್’ ಟ್ಯಾಗ್‌ಗೆ 2.83 ಲಕ್ಷ ಟ್ವೀಟ್‌ಗಳು ಬಂದಿವೆೆ. ಎಪ್ರಿಲ್ 1ರಂದು ಆರೆಸ್ಸೆಸ್ ಮುಖಂಡ ಹೆಡಗೇವಾರ್ ಹುಟ್ಟು ಹಬ್ಬವಾಗಿರುವುದು ವ್ಯಂಗ್ಯಕ್ಕೆ ಇನ್ನೊಂದು ಕಾರಣವೂ ಆಗಿತ್ತು.







