‘ಬಾಲಿಕಾ ವಧು’ ನಟಿ ಪ್ರತ್ಯೂಷಾ ಆತ್ಮಹತ್ಯೆ
ಮುಂಬೈ,ಎ.1: ಜನಪ್ರಿಯ ಟಿವಿ ಧಾರಾವಾಹಿ ‘ಬಾಲಿಕಾ ವಧು ’ದಲ್ಲಿನ ನಾಯಕಿ ಆನಂದಿ ಪಾತ್ರದಿಂದ ಪ್ರಸಿದ್ಧಿಗೆ ಬಂದಿದ್ದ ನಟಿ ಪ್ರತ್ಯೂಷಾ ಬ್ಯಾನರ್ಜಿ(24) ಶುಕ್ರವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದ ಅವರನ್ನು ತಕ್ಷಣವೇ ಇಲ್ಲಿಯ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಭಗ್ನಪ್ರೇಮ ಈ ಕೃತ್ಯಕ್ಕೆ ಕಾರಣವೆನ್ನಲಾಗಿದೆ. ರಿಯಾಲಿಟಿ ಶೋ ‘ಝಲಕ್ ದಿಖಲಾ ಜಾ’ದಲ್ಲಿ ಸ್ಪರ್ಧಿಯಾಗಿದ್ದ ಪ್ರತ್ಯೂಷಾ ಕಲರ್ಸ್ ವಾಹಿನಿಯ ಬಿಗ್ ಬಾಸ್ 7ರಲ್ಲೂ ಸ್ಪರ್ಧಾಳುಗಳ ಪೈಕಿ ಓರ್ವರಾಗಿದ್ದರು.
ಇತರ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದರು.
Next Story





