ಟ್ವೆಂಟಿ-20 ವಿಶ್ವಕಪ್ ಫೈನಲ್: ಅಂಪೈರ್‌ಗಳ ಆಯ್ಕೆ
ಕೋಲ್ಕತಾ, ಎ.1: ರವಿವಾರ ಇಲ್ಲಿ ನಡೆಯಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ಪುರುಷರ ಹಾಗೂ ಮಹಿಳೆಯ ಫೈನಲ್ ಪಂದ್ಯಗಳಿಗೆ ಐಸಿಸಿ ಅಂಪೈರ್‌ಗಳನ್ನು ಆಯ್ಕೆ ಮಾಡಿದೆ.
ಇಂಗ್ಲೆಂಡ್ ಹಾಗೂ ವೆಸ್ಟ್‌ಇಂಡೀಸ್‌ನ ನಡುವಿನ ಪುರುಷರ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ ಧರ್ಮಸೇನಾ ಅವರು ರಾಡ್ ಟಕರ್ ಹಾಗೂ ಮರಾಯಿಸ್ ಎರಾಸ್ಮಸ್ ಅವರೊಂದಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಆಸ್ಟ್ರೇಲಿಯ ಹಾಗೂ ವೆಸ್ಟ್‌ಇಂಡೀಸ್ ನಡುವಿನ ಮಹಿಳೆಯರ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಅಲೀಮ್ ದರ್, ರಿಚರ್ಡ್ ಎಲ್ಲಿಂಗ್‌ವರ್ತ್ ಹಾಗೂ ನೈಜೆಲ್ ಲಾಂಗ್ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮಹಿಳೆಯರ ವಿಶ್ವಕಪ್ ಫೈನಲ್‌ನಲ್ಲಿ ಆ್ಯಂಡಿ ಪೈಕ್ರಾಫ್ಟ್ ಹಾಗೂ ಪುರುಷರ ವಿಶ್ವಕಪ್ ಫೈನಲ್‌ನಲ್ಲಿ ರಂಜನ್ ಮದುಗಲ್ಲೆ ಮ್ಯಾಚ್ ರೆಫರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
Next Story





