ಇಂಡಿಯಾ ಸೂಪರ್ ಸರಣಿ: ಸೈನಾ ಸೆಮಿ ಫೈನಲ್‌ಗೆ

ಹೊಸದಿಲ್ಲಿ, ಎ.1: ಇಂಡಿಯಾ ಸೂಪರ್ ಬ್ಯಾಡ್ಮಿಂಟನ್ ಸರಣಿಯಲ್ಲಿ ಸೆಮಿ ಫೈನಲ್‌ಗೆ ತಲುಪಿರುವ ಹಾಲಿ ಚಾಂಪಿಯನ್ ಸೈನಾ ನೆಹ್ವಾಲ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಇಲ್ಲಿನ ಸಿರಿ ಫೋರ್ಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೈನಾ ಅವರು ಕೊರಿಯಾದ ಸಂಗ್ ಜಿ ಹ್ಯೂನ್ ವಿರುದ್ಧ 19-21, 21-14, 21-19 ಗೇಮ್‌ಗಳ ಅಂತರದಿಂದ ರೋಚಕ ಗೆಲುವು ದಾಖಲಿಸಿದರು.
ಮೂರು ಗೇಮ್‌ಗಳ ಪಂದ್ಯದಲ್ಲಿ ಉಭಯ ಆಟಗಾರ್ತಿಯರು ಅನಗತ್ಯ ತಪ್ಪೆಸಗಿದರು. ಈ ಹಿಂದೆ ಐದು ಬಾರಿ ಹ್ಯೂನ್‌ರನ್ನು ಮಣಿಸಿದ್ದ ಸೈನಾ ಗೆಲುವಿನ ದಾಖಲೆಯನ್ನು ಕಾಯ್ದುಕೊಂಡರು.
Next Story





