ಕ್ಷಿಪಣಿ ಹಾರಿಸಿದ ಕೊರಿಯ
ಸಿಯೋಲ್, ಎ. 1: ಪ್ರಚೋದನಾತ್ಮಕವಾಗಿ ವರ್ತಿಸುವುದನ್ನು ನಿಲ್ಲಿಸಿ ಅಥವಾ ಇನ್ನಷ್ಟು ದಿಗ್ಬಂಧನಗಳನ್ನು ಎದುರಿಸಿ ಎಂಬ ಎಚ್ಚರಿಕೆಯನ್ನು ದಕ್ಷಿಣ ಕೊರಿಯ, ಜಪಾನ್ ಮತ್ತು ಅಮೆರಿಕಗಳ ನಾಯಕರು ನೀಡಿದ ಗಂಟೆಗಳ ಬಳಿಕ, ಉತ್ತರ ಕೊರಿಯ ಶುಕ್ರವಾರ ತನ್ನ ಪೂರ್ವ ಕರಾವಳಿಯಲ್ಲಿ ಸಮುದ್ರಕ್ಕೆ ಕ್ಷಿಪಣಿಯೊಂದನ್ನು ಹಾರಿಸಿದೆ ಎಂದು ದಕ್ಷಿಣ ಕೊರಿಯದ ಸೇನೆ ಹೇಳಿದೆ.
ಉತ್ತರ ಕೊರಿಯ ಕಿರು ವ್ಯಾಪ್ತಿಯ ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಯೊಂದನ್ನು ಹಾರಿಸಿತು ಎಂದು ದಕ್ಷಿಣ ಕೊರಿಯ ಸೇನೆಯ ಅಧಿಕಾರಿಯೊಬ್ಬರು ತಿಳಿಸಿದರು. ಕ್ಷಿಪಣಿಯ ಹಾರಾಟ ವ್ಯಾಪ್ತಿಯನ್ನು ತಿಳಿಯಲು ಸೇನೆ ಯತ್ನಿಸುತ್ತಿದೆ ಎಂದರು.ಸ್ಥಳೀಯ ಸಮಯ ಅಪರಾಹ್ನ 12:45ಕ್ಕೆ ಕ್ಷಿಪಣಿಯನ್ನು ಉಡಾಯಿಸಲಾಯಿತು.
Next Story





