ಸೇನಾ ಸಂಸದರ ವಿರೋಧ
ಸೂ ಕಿಗೆ ವಿಶೇಷ ಸ್ಥಾನ

ಯಾಂಗನ್ (ಮ್ಯಾನ್ಮಾರ್), ಎ. 1: ಸರಕಾರದ ವಿಶೇಷ ಸಲಹಾಗಾರ್ತಿ ಪದವಿಯನ್ನು ನೀಡುವ ಮೂಲಕ ಆಂಗ್ ಸಾನ್ ಸೂ ಕಿಯ ಅಧಿಕಾರವನ್ನು ಬಲಪಡಿಸುವ ಯತ್ನಕ್ಕೆ ಮ್ಯಾನ್ಮಾರ್‌ನ ಸೇನಾ ಸಂಸದರು ಶುಕ್ರವಾರ ಆಕ್ಷೇಪ ಎತ್ತಿದ್ದಾರೆ. ಇಂಥ ಕ್ರಮ ಅಸಾಂವಿಧಾನಿಕ ಎಂದು ಸೇನಾ ಬೆಂಬಲದ ಸಂಸದರು ಹೇಳಿದ್ದು, ನಾಗರಿಕ ಸರಕಾರವೊಂದು ಅಸ್ತಿತ್ವಕ್ಕೆ ಬಂದ ಆರಂಭದಲ್ಲೇ ಸೇನೆ ಅದರೊಂದಿಗೆ ಸಂಘರ್ಷಕ್ಕಿಳಿದಿರುವುದು ಸ್ಪಷ್ಟವಾಗಿದೆ.
ಬುಧವಾರ ಸೂ ಕಿ ಮತ್ತು ಅವರ ಪ್ರಜಾಪ್ರಭುತ್ವ ಪರ ಪಕ್ಷದ ಸರಕಾರ ಅಧಿಕಾರ ವಹಿಸಿಕೊಳ್ಳುವ ಮುನ್ನ ಮ್ಯಾನ್ಮಾರ್‌ನಲ್ಲಿ ಅರ್ಧ ಶತಮಾನಕ್ಕೂ ಅಧಿಕ ಕಾಲ ಸೇನೆ ಆಡಳಿತ ನಡೆಸಿತ್ತು.
ಸೂ ಕಿಗೆ ‘‘ಸರಕಾರದ ವಿಶೇಷ ಸಲಹಾಕಾರ್ತಿ’’ ಸ್ಥಾನವನ್ನು ನೀಡುವ ಮಸೂದೆಯೊಂದನ್ನು ಮಂಡಿಸುವ ಪ್ರಸ್ತಾಪವನ್ನು ಅವರ ಪಕ್ಷ ಮುಂದಿಟ್ಟಿತ್ತು.
ಶುಕ್ರವಾರ ಮೇಲ್ಮನೆಯಲ್ಲಿ ಮಸೂದೆಯ ಕುರಿತು ಚರ್ಚೆ ನಡೆಸುವಾಗ, ಸೂ ಕಿಗೆ ಸರಕಾರದ ವಿಶೇಷ ಸಲಹಾಕಾರ್ತಿ ಪದವಿಯನ್ನು ನೀಡುವುದು ಅಸಾಂವಿಧಾನಿಕ ಎಂಬುದಾಗಿ ಸೇನಾ ಸಂಸದರು ಹೇಳಿದರು. ಮ್ಯಾನ್ಮಾರ್‌ನಲ್ಲಿ ಸೇನೆಯು ಈಗಲೂ ಪ್ರಭಾವಶಾಲಿ ಯಾಗಿದೆ.





