ಮಧ್ಯಪ್ರದೇಶ:ವ್ಯಕ್ತಿಯನ್ನು ಗುಂಪೊಂದು ರಸ್ತೆಯ ನಡುವೆ ಕಗ್ಗೊಲೆ
ರಕ್ಷಣೆಗೆ ಧಾವಿಸದೆ ತಮಾಷೆ ನೋಡಿ ನಿಂತ ಜನರು!

ಕಾಂಡ್ವಾ, ಎಪ್ರಿಲ್,2:ಮಧ್ಯಪ್ರದೇಶದ ಕಾಂಡ್ವಾದಲ್ಲಿ ಕ್ಷುಲ್ಲಕ ವಿವಾದದಿಂದ ವ್ಯಕ್ತಿಯೊಬ್ಬನನ್ನು ಕೆಳಗೆ ದೂಡಿಹಾಕಿ ಲಾಠಿ-ಕೋಲುಗಳಿಂದ ಹೊಡೆದು ಹತ್ಯೆಗೈದ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಹತ್ತರಿಂದ ಹನ್ನೆರಡು ಮಂದಿಯ ಗುಂಪು ಅರ್ಧ ಜೀವವಾದರೂ ಹೊಡೆಯುವುದನ್ನು ನಿಲ್ಲಿಸಲಿಲ್ಲ ಆದ್ದರಿಂದ ಆತ ಮೃತನಾದನೆಂದು ವರದಿಗಳು ತಿಳಿಸಿವೆ. ವಿಕಾಸ್ ಯಾನೆ ಪಪ್ಪು ಬಂಸಲೆ(25) ಮಾತಾ ಚೌಕ ಎಂಬಲ್ಲಿಂದ ತನ್ನಿಬ್ಬರು ಗೆಳೆಯರೊಂದಿಗೆ ಗುಡಿ ಬಜಾರ್ ಎಂಬಲ್ಲಿಗೆ ಬರುತ್ತಿದ್ದ. ಅವರ ಬಳಿ ಹಂದಿ ಮಾಂಸ ಇತ್ತು ಅದನ್ನು ಮಾರಲಿಕ್ಕಾಗಿ ಅವರು ತರುತ್ತಿದ್ದರು. ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವರು ಅವರನ್ನು ತಡೆದು ನಿಲ್ಲಿಸಿದಾಗ ಜಗಳ ಆರಭವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದುದನ್ನು ಕಂಡು ಪಪ್ಪುವಿನ ಇಬ್ಬರು ಗೆಳೆಯರು ತಪ್ಪಿಸಿಕೊಂಡು ಅಲ್ಲಿಂದ ಓಡಿಹೋಗಿದ್ದರು. ಆದರೆ ಪಪ್ಪುವನ್ನು ಹಿಡಿದು ನಿಲ್ಲಿಸಿದ ಗುಂಪು ಮಾರಣಾಂತಿಕವಾಗಿ ಥಳಿಸಿತು. ತತ್ಪರಿಣಾಮವಾಗಿ ಪಪ್ಪು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲಿ ಸೇರಿದ್ದ ಜನರು ಸುಮ್ಮನೆ ನಿಂತು ತಮಾಶೆ ನೋಡುತ್ತಿದ್ದರು. ಯಾರು ಕೂಡಾ ಪಪ್ಪುವಿನ ರಕ್ಷಣೆಗೆ ಬಂದಿಲ್ಲ. ಪೊಲೀಸರು ಆರೋಪಿಗಳ ವಿರುದ್ಧ ಹತ್ಯಾಪ್ರಕರಣ ದಾಖಲಿಸಿದ್ದಾರೆ.





