ಬಹ್ರೈನ್,ವಾಹನ ಢಿಕ್ಕಿಹೊಡೆದು ನಿಲ್ಲಿಸದೆ ಹೋಗುವ ಘಟನೆಗಳ ಸಂತ್ರಸ್ತರಿಗೆ ಧನಸಹಾಯ ಲಭಿಸಲು ಹೊಸ ಯೋಜನೆ

ಮನಾಮ: ಎಪ್ರಿಲ್,2: ವಾಹನ ಢಿಕ್ಕಿಹೊಡೆದು ನಿಲ್ಲಿಸದೆ ಹೋಗುವ ಘಟನೆಗಳಲ್ಲಿ ಬಲಿಯಾದವರ ಕುಟುಂಬಗಳಿಗೂ ಸಾಂತ್ವನವಾಗುವ ಯೋಜನೆಯೊಂದನ್ನು ಇಲ್ಲಿನ ಸೆಂಟ್ರಲ್‌ಬ್ಯಾಂಕ್ ಆಫ್ ಬಹ್ರೈನ್(ಸಿಬಿಬಿ)ರೂಪಿಸಿರುವುದಾಗಿ ವರದಿಯಾಗಿದೆ. ಬಹ್ರೈನಿಗಳಿಗೂ ವಿದೇಶಿಯರಿಗೂ ಏಕರೀತಿಯಲ್ಲಿಪ್ರಯೋಜನವಾಗು ಯೋಜನೆ ಇದು. ಆದರೆ ವಿದೇಶಿಗಳಲ್ಲಿ ಸರಿಯಾದ ದಾಖಲಿರಬೇಕು. ಸಂದರ್ಶಕರನ್ನು ಕೂಡಾ ಈ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಡಿಪ್ಲಾಮೆಟಿಕ್ ಏರಿಯಾಗಳಲ್ಲಿರುವ ಸಿಬಿಬಿ ಕೇಂದ್ರಗಳಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅಧಿಕಾರಿಗಳು ಇದನ್ನು ತಿಳಿಸಿದ್ದಾರೆ. ಜನರಲ್ ಡೈರೆಕ್ಟರೇಟ್ ಆಫ್ ಟ್ರಾಫಿಕ್ ಡೈರೆಕ್ಟರ್ ಜನರಲ್ ಶೈಕ್ ನಾಸಿರ್ ಬಿನ್ ಅಬ್ದುರ್ರಹ್ಮಾನ್ ಅಲ್ ಖಲೀಫಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಹೊಸಯೋಜನೆಯಂತೆ ಇಂತಹಪ್ರಕರಣಗಳಲ್ಲಿ ಮರಣ ಸಂಭವಿಸುವುದು ಮತ್ತು ಸಂಪೂರ್ಣವಾಗಿ ಚಲನಾಶಕ್ತಿ ಕಳೆದುಕೊಳ್ಳುವುದು ಆದರೆ ಅಂತಹ ವ್ಯಕ್ತಿಗಳಿಗೆ ಅಥವಾ ಕುಟುಂಬಕ್ಕೊ 10,000 ದೀನಾರ್ ಮತ್ತು ಇತರ ಘಟನೆಗಳಲ್ಲಿ 500 ದೀನಾರ್ ನಷ್ಟಪರಿಹಾರ ನೀಡಲಾಗುವುದು. ವಾಹನ ಢಿಕ್ಕಿಯಾಗಿ ನಿಲ್ಲಿಸದೆ ಹೋಗುವ ಕೇಸುಗಳ ಸಂತ್ರಸ್ತರಿಗೆ ಇನ್ಶೂರೆನ್ಸ್ ಭದ್ರತೆ ಸಿಗದಿರುವ ಪರಿಸ್ಥಿತಿಯಲ್ಲಿ ಹೊಸ ಕ್ರಮವನ್ನು ಸಿಬಿಬಿ ಹಮ್ಮಿಕೊಂಡಿದೆ ಎಂದು ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಬ್ದುರ್ರಹ್ಮಾನ್ ಹೇಳಿದ್ದಾರೆ. ಸಾಂಪ್ರದಾಯಿಕ ಮೋಟರ್ ಇನ್ಶೂರೆನ್ಸ್ ಪಾಲಿಸಿ ಪ್ರಕಾರ ಅಪರಾಧ ವೆಸಗಿದಾತ ಅಪಘಾತಕ್ಕೊಳಗಾದ ವ್ಯಕ್ತಿಗೆ ನಷ್ಟಪರಿಹಾರ ನೀಡಬೇಕಾಗಿದೆ. ಅಂತಹ ಪ್ರಕರಣದಲ್ಲಿ ನಷ್ಟಪರಿಹಾರ ನೀಡಬೇಕಾದ ಹೊಣೆ ಇನ್ಶೂರೆನ್ಸ್ ಕಂಪೆನಿಗಳಿಗಿರುವುದಿಲ್ಲ. ಈ ಪರಿಸ್ಥಿತಿಯಲ್ಲಿ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ವರದಿಯಾಗಿದೆ.
ಈಗ ಇರುವಂತೆ ವಾಹನ ಢಿಕ್ಕಿಯಾಗಿ ನಿಲ್ಲಿಸದೆ ಹೋದ ಕೇಸುಗಳಲ್ಲಿ ಗಾಯಗೊಂಡವರಿಗೆ ಉಚಿತ ತುರ್ತುಚಿಕಿತ್ಸೆ ಲಭಿಸುತ್ತದೆ. ಗಂಭೀರ ಗಾಯಗೊಂಡವರು ಸೌಲಭ್ಯಕ್ಕಾಗಿ ಅರ್ಜಿಹಾಕಬಹುದು. ಆದರೆ ಒಟ್ಟಾಗಿಒಂದೇ ಬಾರಿ ದೊಡ್ಡ ಮೊತ್ತ ಸಿಗುವ ವ್ಯವಸ್ಥೆ ಇಲ್ಲ. ಬಹ್ರೈನ್ ಇನ್ಶೂರೆನ್ಸ್ ಅಸೋಸಿಯೇಶನ್ (ಬಿಐಎ) ಫಂಡ್ ಚಾಲನೆ ನೀಡಲಿದೆ/ ಸಿಬಿಬಿ ಲೈಸನ್ಸ್ ನೀಡಿದ ಇನ್ಶೂರೆನ್ಸ್ ಕಂಪೆನಿಗಳ ಬೆಂಬಲವೂ ಇದಕ್ಕಿದೆ. ಇನ್ಶೂರೆನ್ಸ್ ಮಾಡಿರುವ ಎಲ್ಲ ವಾಹನಗಳ ಒಟ್ಟು ಪ್ರೀಮಿಯಂನ ಶೇ. ಒಂದರಷ್ಟು ಇದಕ್ಕಾಗಿ ತೆಗೆದಿರಿಸಲಾಗುತ್ತದೆ. ಖಾಸಗಿ ಕ್ಷೇತ್ರದ ನೆರವನ್ನೂ ಯಾಚಿಸಲಾಗುವುದು. ಅಪಘಾತಕ್ಕೊಳಗಾದವರಿಗೆ ಒಂದು ತಿಂಗಳೊಳಗೆ ಪರಿಹಾರಮೊತ್ತ ಲಭಿಸಲಿದೆ. ಇದಕ್ಕಾಗಿ ಸರಿಯಾದ ದಾಖಲೆಗಳನ್ನು ಒದಗಿಸಬೇಕಾಗಿದೆ. ಟ್ರಾಫಿಕ್ ಪೊಲೀಸ್ ವರದಿ. ಮೆಡಿಕಲ್ ವರದಿ, ಮರಣ ಸಂಭವಿಸಿದ್ದರೆ ಮರಣ ಸರ್ಟಿಫಿಕೆಟ್ ಮುಂತಾದುದನ್ನು ಸಮರ್ಪಿಸಬೇಕಾಗಿದೆ. ಹೊಸ ಕ್ರಮ ಬಹರೈನಿಗಳು ವಿದೇಶಿಗಳಿಗೂ ಒಂದೇ ರೀತಿ ಪ್ರಯೋಜನವಾಗಲಿದೆ ಎಂದು ಟ್ರಾಫಿಕ್ ಡೈರಕ್ಟರ್ ಜನರಲ್ ಶೈಕ್ ನಾಸೀರ್ ಹೇಳಿದ್ದಾರೆ. ಅಪಘಾತಕ್ಕೊಳಗಾದವರಿಗೆ ಮಾನವೀಯ ಪರಿಗಣನೆ ಲಭಿಸುವುದಕ್ಕೆ ಹೊಸ ಕ್ರಮಗಳು ಉಪಯುಕ್ತವಾಗಲಿದೆಯೆಂದು ಅವರು ಹೇಳಿದ್ದಾರೆ. ಇಂತಹ ಪ್ರಕರಣಗಳಲ್ಲಿ ವಿಳಂಬವಾಗುವುದಿದೆ ಎಂದು ವರದಿಗಳು ತಿಳಿಸಿವೆ.







