ಕಾಂಗ್ರೆಸ್ ಕೂಡ ಪತ್ರಿಕೆಗಳ ಮುಖಪುಟವನ್ನು ಖರೀದಿಸಿತ್ತು
ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿಯಿಂದ ವಿವಾದಾಸ್ಪದ ಹೇಳಿಕೆ
.jpg)
ಹೊಸದಿಲ್ಲಿ, ಎಪ್ರಿಲ್.2:ಕಾಂಗ್ರೆಸ್ ವಕ್ತಾರ,ಯುಪಿಎ ಸರಕಾರದಲ್ಲಿ ಮಾಹಿತಿ ಮತ್ತು ವಾರ್ತಾ ಪ್ರಸಾರ ಸಚಿವರಾಗಿದ್ದ ಮನೀಷ್ ತಿವಾರಿಯವರ ಹೇಳಿಕೆಯೊಂದು ಕಾಂಗ್ರೆಸ್ ಪಕ್ಷವನ್ನೇ ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ದಿಲ್ಲಿಯ ನ್ಯೂಸ್ ರೂಮ್ ಪೋಸ್ಟ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮನಿಷ್ ತಿವಾರಿ ರಾಜಕೀಯ ಪಕ್ಷಗಳು ಮಾಧ್ಯಮಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದು ಹೇಳಿದ್ದರು. ಇದುಕಾಂಗ್ರೆಸ್‌ಗೆ ಕಿರಿಕಿರಿಯನ್ನುಂಟುಮಾಡಿದೆಯೆಂದು ವರದಿಗಳು ತಿಳಿಸಿವೆ.
ಕಾರ್ಯಕ್ರಮದ ಚರ್ಚೆಯಲ್ಲಿ ಭಾಗವಹಿಸಿ 2009ರ ಸಂಸದೀಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲ ಪತ್ರಿಕೆಗಳ ಮೊದಲ ಪುಟವನ್ನು ಖರೀದಿಸಿದ್ದವು ಎಂದು ಅವರು ಹೇಳಿದ್ದರೆನ್ನಲಾಗಿದೆ. ಕಾಂಗ್ರೆಸ್ ಮೊದಲ ಪುಟ ಖರೀದಿಸಿ ಅದರ ಸ್ವರೂಪ ಬದಲಿಸಲು ಹೆಚ್ಚು ಹಣ ಪಾವತಿಸಿತ್ತು ಎಂದು ಹೇಳಿದ್ದಾರೆಂದು ವರದಿಯಾಗಿವೆ.
ಕಾಂಗ್ರೆಸ್ ದಿಗ್ಗಜನ ಈ ಹೇಳಿಕೆ ಮಾಧ್ಯಮಗಳಲ್ಲಿ ತುಂಬಿಕೊಂಡಿತ್ತು. ಜನರು ಮನೀಷ್‌ರ ಹೇಳಿಕೆಗೆ ಪ್ರತಿಕ್ರಿಯೆ ನೀಡತೊಡಿಗಿದರು. ಈ ಸತ್ಯ ಆಗ ಯಾಕೆ ಬಹಿರಂಗಗೊಳಿಸಲ್ಲ ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆಯನ್ನು ನಿರ್ವಹಿಸುತ್ತಿದ್ದ ಅವರನ್ನು ಜನರು ಪ್ರಶ್ನಿಸತೊಡಗಿದ್ದಾರೆಂದು ವರದಿಯಾಗಿವೆ.





