ಕಿರು ತೆರೆ ನಟಿ ಪ್ರತ್ಯೂಷಾ ಆತ್ಮಹತ್ಯೆ ಪ್ರಕರಣ:ಗೆಳೆಯ ರಾಹುಲ್ ಸಿಂಗ್ ಬಂಧನ

ಮುಂಬೈ, ಎ.2: ‘ಬಾಲಿಕಾ ವಧು‘ ಧಾರಾವಾಹಿ ಖ್ಯಾತಿಯ ಕಿರು ತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಗೆಳೆಯನನ್ನು ಮುಂಬೈ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಶುಕ್ರವಾರ ರಾತ್ರಿ 7:15ಕ್ಕೆ ಪ್ರತ್ಯೂಷಾ ಅಂಧೇರಿಯ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿಕೊನೆಯುಸಿರೆಳೆದಿದ್ದರು. ನೇಣು ಬಿಗಿದ ಸ್ಥಿತಿಯಲ್ಲಿ ಮನೆಯ ಕೊಠಡಿಯಲ್ಲಿ ಪತ್ತೆಯಾಗಿದ್ದ ಪ್ರತ್ಯೂಷಾರನ್ನು ಆಕೆಯ ಗೆಳೆಯ ರಾಹುಲ್ ರಾಜ್ ಸಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರತ್ಯೂಷಾ ಆಕಸ್ಮಿಕ ಸಾವು ಹಲವು ಅನುಮಾನವನ್ನು ಹುಟ್ಟುಹಾಕಿದೆ.
‘‘ಪ್ರತ್ಯೂಷಾ ಆತ್ಮಹತ್ಯೆಗೈದಿರುವ ಫ್ಲಾಟ್‌ನ್ನು ಶೋಧಿಸಲಾಗುತ್ತಿದ್ದು, ಇಡಿಆರ್ ದಾಖಲಿಸಲಾಗಿದೆ. ನಾವು ಈ ಬಗ್ಗೆ ಇನ್ನಷ್ಟು ತನಿಖೆ ನಡೆಸಲಿದ್ದೇವೆ. ಸಾವಿಗೆ ಕಾರಣವೇನೆಂದು ಈಗಲೇ ಹೇಳಲು ಸಾಧ್ಯವಿಲ್ಲ’’ ಎಂದು ಮುಂಬೈ ಪೊಲೀಸ್ ಡಿಸಿಪಿ ವಿಕ್ರಮ್ ದೇಶ್‌ಪಾಂಡೆ ತಿಳಿಸಿದ್ದಾರೆ.
ಪ್ರತ್ಯೂಷಾ ಹೆತ್ತವರು ಜವ್ಶೆುಡ್‌ಪುರದಲ್ಲಿ ವಾಸವಾಗಿದ್ದು, ವಿಮಾನದ ಮೂಲಕ ಮುಂಬೈಗೆ ಆಗಮಿಸಿ ಮೃತದೇಹವನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಪ್ರತ್ಯೂಷಾ ಹಾಗೂ ರಾಹುಲ್ ಸಿಂಗ್ ಕಿರುತೆರೆಯ ರಿಯಾಲಿಟಿ ಶೋನಲ್ಲಿ ಜೋಡಿಯಾಗಿ ಭಾಗವಹಿಸಿದ್ದರು.







