ಎ. 3: ಫರಂಗಿಪೇಟೆಯಲ್ಲಿ ತರಬೇತಿ ಶಿಬಿರ
ಬಂಟ್ವಾಳ, ಎ. 2: ಇರ್ಫಾನಿಯಾ ದಅ್ ವಾ ಸಂಘ ಬಂಟ್ವಾಳ ವಲಯ ಇದರ ಆಶ್ರಯದಲ್ಲಿ ಎಪ್ರಿಲ್ 3ರಂದು ಮಗ್ರಿಬ್ ನಮಾಝ್ ಬಳಿಕ ಫರಂಗಿಪೇಟೆಯ ಅಥೈ ಕಾಂಪ್ಲೆಕ್ಸ್ ನಲ್ಲಿ ದೀನೀ ತರಬೇತಿ ಶಿಬಿರ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಪ್ಪರಪಡವು ಇರ್ಫಾನಿಯಾ ಅರಬಿಕ್ ಕಾಲೇಜಿನ ಪ್ರೊಫೆಸರ್ ಶರೀಫ್ ಫೈಝಿ ಇರ್ಫಾನಿ ವಹಿಸಲಿದ್ದಾರೆ.
ಕೇರಳ ಕಣ್ಣೂರಿನ ಸಲಾಂ ಫೈಝಿ ಇರ್ಫಾನಿ ಅವರು 'ಅಹ್ಲ್ ಸುನ್ನತ್ ವಲ್ ಜಮಾಅತ್' ಎಂಬ ವಿಷಯದಲ್ಲಿ ಮುಖ್ಯ ಪ್ರಭಾಷಣ ಗೈಯಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಇರ್ಫಾನಿಯಾ ದಅ್ ವಾ ಸಂಘದ ಕೇಂದ್ರ ಸಮಿತಿ ಕೋಶಾಧಿಕಾರಿ ಕುಂಞಿ ಅಬ್ದುಲ್ಲಾ ಫೈಝಿ, ಫರಂಗಿಪೇಟೆ ಜುಮಾ ಮಸೀದಿ ಮುದರಿಸ್ ಉಸ್ಮಾನ್ ದಾರಿಮಿ, ಅಮೆಮ್ಮಾರ್ ಜುಮಾ ಮಸೀದಿಯ ಮುದರಿಸ್ ಉಮರ್ ದಾರಿಮಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





