ಪಾಕಿಸ್ತಾನ: 59 ಭಾರತೀಯ ಬೆಸ್ತರ ಬಂಧನ!

ಹೊಸದಿಲ್ಲಿ/ಇಸ್ಲಾಮಾಬಾದ್, ಎಪ್ರಿಲ್.2: ಪಾಕಿಸ್ತಾನದ ಸಮುದ್ರ ಗಡಿಮೀರಿ ಮೀನುಗಾರಿಕೆ ನಡೆಸಿದ ಆರೋಪದಲ್ಲಿ ಭಾರತದ 59 ಬೆಸ್ತರನ್ನು ನಿನ್ನೆ ಅದು ಬಂಧಿಸಿದೆ ಎಂದು ವರದಿಯಾಗಿವೆ. ಅಧಿಕೃತ ಮೂಲಗಳ ಪ್ರಕಾರ ಪಾಕಿಸ್ತಾನದ ಸಮುದ್ರದ ಗಡಿಯಲ್ಲಿ ನಿಗಾ ಇರಿಸುವ ಮೆರಿಟೈಮ್ ಸೆಕ್ಯೂರಿಟಿ ಏಜೆನ್ಸಿ ಅರಬ್ಬಿ ಸಮುದ್ರದಲ್ಲಿ ಮೀನು ಹಿಡಿಯುತ್ತಿದ್ದ ಈ 59 ಬೆಸ್ತರನ್ನು ಬಂಧಿಸಿದೆ.
ಬೆಸ್ತರು ಮೀನು ಹಿಡಿಯಲು ಬಳಸಿದ ಬೋಟ್‌ಗಳನ್ನು ಕೂಡ ವಶಕ್ಕೆ ಪಡೆಯಲಾಗಿದ್ದು ಈಗ ಟಾಸ್ಕ್ ಪೊಲೀಸ್ ಠಾಣೆಯ ಕಸ್ಟಡಿಯಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ. ಇಂದು ಅವರನ್ನು ಬಹುಶಃ ಕೋರ್ಟ್‌ನ ಮುಂದೆ ಹಾಜರು ಪಡಿಸಲಾಗುವುದು.
ಪೊಲೀಸಧಿಕಾರಿಗಳು ಹೆಚ್ಚಿನ ಬೆಸ್ತರು ಗುಜರಾತ್‌ನವರು ಎಂದು ತಿಳಿಸಿದ್ದಾರೆ. ಪಾಕಿಸ್ತಾನ ಕಳೆದ ಮಾರ್ಚ್ 16ಕ್ಕೆ 87 ಭಾರತೀಯ ಬೆಸ್ತರನ್ನು ಬಂಧಿಸಿತ್ತು ಮತ್ತು ಮಾರ್ಚ್20ಕ್ಕೆ ಇತರ 86 ಮೀನುಗಾರರನ್ನು ಬಿಡುಗಡೆಗೊಳಿಸಿತ್ತು. ಪಾಕಿಸ್ತಾನದ ಒಂಬತ್ತು ಮೀನುಗಾರರನ್ನು ಮಾರ್ಚ್17ರಂದು ಭಾರತ ಬಿಡುಗಡೆಗೊಳಿಸಿತ್ತು.
ಭಾರತದ ಜೈಲಿನಲ್ಲಿ ಈಗ 150ಕ್ಕೂ ಅಧಿಕ ಮೀನುಗಾರರು ಇದ್ದರೆ ಪಾಕಿಸ್ತಾನದ ಜೈಲಿನಲ್ಲಿ 377 ಭಾರತೀಯ ಮೀನುಗಾರರು ಇದ್ದಾರೆಂದು ವರದಿಗಳು ತಿಳಿಸಿವೆ.





