ಕುವೈಟ್: 3ವರ್ಷ ದುಡಿದವರಿಗೆ ಇಕಾಮ ಬದಲಿಸಲು ಸ್ಪೋನ್ಸರ್ ಅನುಮತಿ ಅಗತ್ಯವಿಲ್ಲ

ಕುವೈಟ್ ಸಿಟಿ, ಎಪ್ರಿಲ್.2: ಮೂರುವರ್ಷ ಒಬ್ಬನೆ ಸ್ಪೋನ್ಸರ್‌ನ ಕೈಕೆಳಗೆ ದುಡಿದವರು ಆತನ ಅನುಮತಿಯಿಲ್ಲದೆ ತಮಗೆ ಸೂಕ್ತವೆಂದು ಕಂಡುಬರುವ ಬೇರೆ ಸ್ಥಳಗಳಿಗೆ ಇಖಾಮವನ್ನು ಪರಿವರ್ತಿಸಬಹುದು ಎಂದು ವರದಿಯಾಗಿದೆ. ಮ್ಯಾನ್‌ಪವರ್ ಅಥಾರಿಟಿ ಇದರ ಅಧಿಕೃತ ವಕ್ತಾರ ಪಬ್ಲಿಕ್ ರಿಲೇಶನ್ ಡಿಪಾರ್ಟ್‌ಮೆಂಟ್ ಮುಖಂಡ ಅಸೀಲ್ ಅಲ್ ಮಸೀದ್ ಪತ್ರಿಕಾ ಹೇಳಿಕೆಯಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಉದ್ಯೋಗ ಒಪ್ಪಂದ ಮಾಡಿದ ನಂತರ ಮೂರುವರ್ಷ ಕಳೆದಿದ್ದರೆ ಉದ್ಯೋಗಿಗಳು ಬೇಕಿದ್ದರೆ ತಮಗೆ ಸೂಕ್ತವಾದ ಇತರ ಕೆಲಸದ ಸ್ಥಳಗಳಿಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ. ಅದೇವೇಳೆ, ಮೂರುವರ್ಷ ಪೂರ್ತಿಯಾಗುವುದಕ್ಕಿಂತ ಮೊದಲು ಕೆಲಸಮಾಡುವ ವ್ಯಕ್ತಿ ತಾನು ಬೇರೆ ಕಡೆ ಕೆಲಸಕ್ಕೆ ಹೋಗಲು ಬಯಸುತ್ತೇನೆಂಬ ಮಾಹಿತಿಯನ್ನು ನೀಡಿರಬೇಕಾಗಿದೆ. ಮಾಹಿತಿ ನೀಡದೆ ಕೆಲಸಕ್ಕೆ ಬರದಿರುವವರ ಬಗ್ಗೆ ತಪ್ಪಿಸಿಕೊಂಡ ಕುರಿತು ಕೇಸು ದಾಖಲಿಸಲು ಕೆಲಸದಲ್ಲಿ ಮಾಲಕನಿಗೆ ಅವಕಾಶ ಇದೆ. ಎಲ್ಲ ಕ್ರಮವಿಧಾನಗಳನ್ನು ಪಾಲಿಸಿದ ಬಳಿಕ ಒಂದು ಉದ್ಯೋಗ ಒಪ್ಪಂದದಲ್ಲಿ ಮೂರುವರ್ಷ ಆಗಿರುವವರು ಸಂಬಂಧಿಸಿದ ಕಾರ್ಯಾಲಯಗಳನ್ನು ಸಮೀಪಿಸಿದರೆ ವೀಸಾ ಬದಲಾವಣೆಗೆ ಯಾವುದೆ ತಡೆಯಿರುವುದಿಲ್ಲ ವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೇವೇಳೆ ವರ್ಕರ್ ಒಪ್ಪಂದದ ಕಾರ್ಮಿಕರಿಗೆ ವೀಸಾ ಬದಲಾವಣೆಗೆ ಮೂರುವರ್ಷ ಪೂರ್ತಿಯಾಗಬೇಕೆಂಬ ನಿಬಂಧನೆ ಬಾಧಕವಲ್ಲ. ಬದಾಲಾಗಿ ಒಪ್ಪಂದದ ಕಾಲಾವಧಿ ಮುಗಿದರೆ ಕೆಲಸದ ಮಾಲಕ ಆ ಕಾರ್ಮಿಕರನ್ನು ಸರಕಾರದ ಅಧೀನದ ಸಂಸ್ಥೆಗಳಿಗೆ ಸ್ಥಾನಾಂತರಿಸುವ ಅಗತ್ಯ ಇಲ್ಲ. ಹೊಸ ಆದೇಶದ ಪ್ರಕಾರ ಸರಕಾರ ಒಪ್ಪಂದಗಳ ರಿಜಿಸ್ತ್ರಿ ಮಾಡಿಸಿದ ಕಾರ್ಮಿಕರನ್ನು ವಿಶೇಷ್ ಟೆಕ್ನಿಕಲ್ ವಿಭಾಗಕ್ಕೆ ವೀಸಾ ಸ್ಥಾನಾಂತರಿಸಲು ಅನುಮತಿಸಲಾಗುವುದು.
ಇಂತಹ ಕಾರ್ಮಿಕರಿಗೆ ತಜ್ಷ ಉದ್ಯೋಗ ಕ್ಷೇತ್ರವಲ್ಲದೆ ವೀಸಾ ಬದಲಾಯಿಸುವುದಾದರೆ ನಿಶ್ಚಿತ ಮೊತ್ತದ ಶುಲ್ಕ ಈಡುಗೊಳಿಸಬೇಕೆಂಬ ನಿಬಂಧನೆ ಕೂಡಾ ಇರಿಸಲಾಗಿದೆಯೆಂದು ವರದಿಯಾಗಿದೆ.





