Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಧ್ಯಪ್ರದೇಶದಲ್ಲಿ ಬಡತನದಿಂದಾಗಿ...

ಮಧ್ಯಪ್ರದೇಶದಲ್ಲಿ ಬಡತನದಿಂದಾಗಿ ಹೆತ್ತವರಿಂದಲೇ ಮಕ್ಕಳ ಮಾರಾಟ!

ವಾರ್ತಾಭಾರತಿವಾರ್ತಾಭಾರತಿ2 April 2016 3:23 PM IST
share
ಮಧ್ಯಪ್ರದೇಶದಲ್ಲಿ ಬಡತನದಿಂದಾಗಿ ಹೆತ್ತವರಿಂದಲೇ ಮಕ್ಕಳ ಮಾರಾಟ!

ಭೋಪಾಲ, ಎಪ್ರಿಲ್.2: ಮಧ್ಯಪ್ರದೇಶದ ಸರಕಾರ ಒಂದು ಕಡೆ ಹೆಪ್ಪಿನೆಸ್ ಸಚಿವಾಲಯ ರೂಪಿಸುವುದಾಗಿ ಘೋಷಿಸುತ್ತಿದೆ. ಇನ್ನೊಂದು ಕಡೆ ಜನರು ತಮ್ಮ ಮಕ್ಕಳನ್ನು ಮಾರಲು ನಿರ್ಬಂಧಿಸಲ್ಪಡುತ್ತಿದ್ದಾರೆ. ಹೀಗೆ ತಮ್ಮ ಮಾರಿದ್ದಲ್ಲಿಂದ ಇಬ್ಬರು ಮಕ್ಕಳು ತಪ್ಪಿಸಿಕೊಂಡು ಉತ್ತರ ಪ್ರದೇಶಕ್ಕೆ ಓಡಿಬಂದಿದ್ದಾರೆ. ಅವರು ಮಧ್ಯಪ್ರದೇಶದ ಶಿವಪುರಿ ಮತ್ತು ಗುಣಾಜಿಲ್ಲೆಯ ನಿವಾಸಿಗಳಾಗಿದ್ದು ಇವರನ್ನು ತಂದೆ ತಾಯಂದಿರೇ ಮೂರು ಸಾವಿರ ರೂಪಾಯಿಗೆ ಗಿರವಿ ಇಟ್ಟಿದ್ದರೆಂದು ವರದಿಗಳು ತಿಳಿಸಿವೆ.

ಗುಣಾ ಜಿಲ್ಲೆಯ ಪಿಪರಿಯ ನಿವಾಸಿ ಕಾಶಿರಾಮ್(12) ಮತ್ತು ಶಿವಪುರಿ ಕನೆರಾ ಚಪರಾ ನಿವಾಸಿಮುಖೇಶ್( 12) ಝಾನ್ಸಿ ಜಿಲ್ಲೆಯ ಸಿಪರಾ ಠಾಣೆ ವ್ಯಾಪ್ತಿಯ ಚಂದ್ರಪುರ ಗ್ರಾಮದಲ್ಲಿ ಅಲೆದಾಡುತ್ತಿದ್ದರು. ಇಬ್ಬರು ಮಕ್ಕಳನ್ನು ನಗರ ನ್ಯಾಯಾಧೀಶ ಆರ್.ಪಿ. ಮಿಶ್ರಾರು ಜಿಲ್ಲಾ ಪ್ರೊಬೇಶನ್ ಅಧಿಕಾರಿ(ಡಿಪಿಒ) ರಾಜೇಶ್ ಶರ್ಮರ ಮೂಲಕ ಚಿಲ್ಡ್ರನ್ ಹೆಲ್ಫ್ ಲೈನ್‌ಗೆ ಒಪ್ಪಿಸಿದ್ದಾರೆ. ಈ ಇಬ್ಬರು ಮಕ್ಕಳನ್ನು ಅವರ ತಂದೆತಾಯಿ ಒಬ್ಬ ದಲ್ಲಾಳಿಯ ಮೂಲಕ ಮೂರು ಸಾವಿರ ರೂಪಾಯಿ ತಿಂಗಳಿಗೆ ನೀಡುವಂತೆ ರಾಜಸ್ಥಾನದ ಒಬ್ಬ ವ್ಯವಹಾರಸ್ಥನಿಗೆ ಮಾರಿದ್ದರು. ಈ ಬಾಲಕರು ಕುರಿಗಾಹಿಗಳಾಗಿ ಕೆಲಸ ಮಾಡುತ್ತಿದ್ದರು.

ಆದರೆ ಅವರಿಗೆ ಸರಿಯಾಗಿ ಊಟಹಾಕುತ್ತಿರಲಿಲ್ಲ. ಆದ್ದರಿಂದ ಅಲ್ಲಿಂದ ತಪ್ಪಿಸಿಕೊಂಡು ಝಾನ್ಸಿಗೆ ಓಡಿ ಬಂದಿದ್ದರೆಂದು ವರದಿಯಾಗಿದೆ. ಮಕ್ಕಳನ್ನು ಪ್ರಶ್ನಿಸಿದಾಗ ಆಶ್ಚರ್ಯಕಾರಿ ಮಾಹಿತಿಗಳು ಲಭಿಸಿದವು. ಮಕ್ಕಳ ತಂದೆತಾಯರನ್ನು ಕರೆಯಿಸಿ ವಿಚಾರಿಸಿದಾಗ ಕಾಶಿರಾಮ್‌ನ ತಂದೆ ಬಡತನದಿಂದಾಗಿ ಇಬ್ಬರ ಮಕ್ಕಳನ್ನು ಮಾರಿದ್ದನ್ನು ಒಪ್ಪಿಕೊಂಡರು ಎಂದು ತಿಳಿದು ಬಂದಿದೆ. ಅವರ ಪುತ್ರ ಕಾಶಿರಾಂ ಪರಾರಿಯಾಗಲು ಯಶಸ್ವಿಯಾದರೂ ಇನ್ನೊಬ್ಬ ಪುತ್ರ ಅಲ್ಲಿ ಈಗಲೂ ಇದ್ದಾನೆ.

ಮುಖೇಶನ ಕತೆ ಕೂಡಾ ಕಾಶಿರಾಂನಂತೆಯೆ ಇದೆ. ಅವನ ತಂದೆ ಅವನನ್ನು ಗಿರವಿ ಇರಿಸಿದ್ದ. ಅವನ ತಂದೆ ಹರಿಸಿಂಗ್ ಕೂಲಿಕೆಲಸ ಮಾಡುವ ಬಡಪಾಯಿಯಾಗಿದ್ದು ಅವು ತನ್ನ ಬಡತನದ ಕುರಿತು ಚೈಲ್ಡ್ ಲೈನ್‌ನೊಡನೆ ಅಲವತ್ತುಕೊಂಡಿದ್ದಾನೆ. ಇಬ್ಬರ ತಂದೆಯಂದಿರು ಅಚೀಚಿನ ಕೆಲವು ಗ್ರಾಮದಲ್ಲಿ ಮಕ್ಕಳನ್ನು ಮೂರು ಸಾವಿರದಿಂದ ಐದು ಸಾವಿರವರೆಗೆ ಪ್ರತಿ ತಿಂಗಳು ನೀಡುವ ಒಡಂಬಡಿಕೆಯಲ್ಲಿ ಕುರಿವ್ಯವಹಾರ ಮಾಡುವವರಿಗೆ ಕೊಟ್ಟು ಬಿಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಒಬ್ಬ ಏಜೆಂಟ್ ಅಲ್ಲಿ ಈ ವ್ಯವಹಾರವನ್ನು ಕುದುರಿಸುತ್ತಾನೆಂದು ಅವರಿಬ್ಬರೂ ಚೈಲ್ಡ್ ಲೈನ್ ಮುಂದೆ ಹೇಳಿದ್ದಾರೆ.

ಇದಕ್ಕೆ ಮೊದಲು ಹರ್ದಾ ಜಿಲ್ಲೆಯಲ್ಲಿ ಇಂತಹ ಇಬ್ಬರು ಮಕ್ಕಳು ದೊರಕಿದ್ದರು. ಅವರನ್ನು ಕೂಡಾ ಅವರ ತಂದೆತಾಯಂದಿರು ಮಾರಿದ್ದರು. ಕುರಿಕಾಯಲಿಕ್ಕಾಗಿ ಅದರ ಮಾಲಕರಿಗೆ ಅವರನ್ನು ಗಿರವಿ ಇಡಲಾಗಿತ್ತು. ಮಧ್ಯಪ್ರದೇಶದಲ್ಲಿ ಮಳೆಯಾಗದಿರುವುದರಿಂದ ಬರಪರಿಸ್ಥಿತಿ ನೆಲೆಸಿದ್ದು ಇಲ್ಲಿನ 43 ಜಿಲ್ಲೆಗಳಲ್ಲಿ 268 ಗ್ರಾಮಗಳು ಬರಗ್ರಸ್ತವಾಗಿದೆಯೆಂದು ಘೋಷಿಸಲಾಗಿದೆ. ಹೊಲ ಬತ್ತಿಹೋಗಿದ್ದು ಕೂಲಿನಾಲಿ ಗೆ ಅವರೀಗ ರೊಟ್ಟಿ ಸಂಪಾದಿಸಲಿಕ್ಕಾಗಿ ತಮ್ಮ ಮಕ್ಕಳನ್ನೇ ಪಕ್ಕದ ರಾಜಸ್ಥಾನ ಮುಂತಾದೆಡೆಗೆ ಮಾರುತ್ತಿದ್ದಾರೆಂದು ವರದಿಗಳು ತಿಳಿಸಿವೆ. ಬುಂದೇಲ್ ಖಂಡ್‌ನ ಹಸಿವು ಸಮಸ್ಯೆಯ ಕುರಿತು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಸರಕಾರಕ್ಕೆ ನೋಟಿಸು ಕೂಡ ನೀಡಿದೆ ಎಂದು ವರದಿಯಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X