ಗಾಝದಲ್ಲಿ ಕತರ್ ನೇತೃತ್ವದ 1000 ವಸತಿಯೂನಿಟ್‌ಗಳು ಪೂರ್ಣ

ದೋಹಾ, ಎಪ್ರಿಲ್.2: ಗಾರ ಪುನರ್‌ನಿರ್ಮಾಣದ ಅಂಗವಾಗಿ ಗಾಝಾದಲ್ಲಿ ಕತರ್‌ನ ನೇತೃತ್ವದಲ್ಲಿ ನಡೆಯುತ್ತಿರುವ 1,000 ವಾಸ್ತವ್ಯ ಯೂನಿಟ್‌ಗಳ ನಿರ್ಮಾಣ ಕೂಡಾ ಪೂರ್ಣಗೊಂಡಿದೆ ಎಂದು ಫೆಲೆಸ್ತೀನ್ ವಸತಿ ಸಚಿವ ಮುಫೀದ್ ಅಲ್ ಹುಸಾಯಿನ ಹೇಳಿದ್ದಾರೆ. 2014ರಲ್ಲಿ ಇಸ್ರೇಲ್‌ನ ಗಾರ ಆಕ್ರಮಣದಲ್ಲಿ ಧ್ವಂಸವಾದ ಐವತ್ತು ವಾಸ್ತವ್ಯದ ಯೂನಿಟ್‌ಗಳು ಇರುವ ಬುರ್ಜಾ ದಾಫಿರ್- 4,ರ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಫೆಲೆಸ್ತೀನ್ ಜನರ ಉನ್ನತಿಗಾಗಿ ಮತ್ತು ಪ್ರಗತಿಗಾಗಿ ಕತರ್ ಅದರ ನಾಯಕತ್ವವೂ ಚಾರಿಟಿ ಸಂಘಟನೆಗಳೂ ವಹಿಸಿರುವ ಪಾತ್ರ ಬಹಳ ದೊಡ್ಡದೆಂದುಅಮೀರ್ ಶೈಕ್ ತಮೀಮ್ ಬಿನ್ ಹಮದ್ ಅಲ್‌ಥಾನಿಯವರ ಪರಿಶ್ರಮ ಇದರ ಹಿಂದಿದೆ ಎಂದು ಹುಸಾಯಿನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇಸ್ರೇಲ್‌ನ ಆಕ್ರಮಣದಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಫೆಲೆಸ್ತೀನಿಯರಿಗೆ ಸಂಬಂಧಿಸಿದಂತೆ ಪವಿತ್ರ ಮಣ್ಣನ್ನುರಕ್ಷಣೆಗಾಗಿ ತೊಡಗಿಸಿಕೊಂಡ ದೇಶಗಳಲ್ಲಿ ಕತರ್ ಮುಂಪಕ್ತಿಯಲ್ಲಿದೆ. ಗಾಝ ಪುನರ್‌ನಿರ್ಮಾಣಕ್ಕೆ ಸಂಬಂಧಿಸಿ ಬೇರೆಬೇರೆ ಯೋಜನೆಗಳನ್ನು ಕತರ್ ನಡೆಸುತ್ತಾ ಬಂದಿದೆ ಅದು ಈಗಲೂಮುಂದುವರಿಯುತ್ತಿದೆ ಎಂದು ಹುಸಾಯಿನ ಹೇಳಿದ್ದಾರೆ. ಕತರಿನ ಹಸ್ತವಿಲ್ಲದ ಯೋಜನೆಗಳು ಗಾಝದಲ್ಲಿ ವಿರಳವಾಗಿದೆ. ವಾಣಿಜ್ಯ ಆರೋಗ್ಯ, ವಾಸ್ತವ್ಯಯೂನಿಟ್‌ಗಳು ವಿವಿಧ ಸಂಸ್ಥೆಗಳು ಶಿಕ್ಷಣ ಮುಂತಾದುವು ಇಸ್ರೇಲ್‌ನ ಆಕ್ರಮಣದಲ್ಲಿ ಧ್ವಂಸವಾದ ಹಲವಾರು ಕ್ಷೇತ್ರಗಳ ಪುನರುಜ್ಜೀಕರಣದಲ್ಲಿ ಕತರ ದೊಡ್ಡ ಪಾತ್ರವನ್ನು ನಿಭಾಯಿಸಿದೆ. ಗಾಝದಲ್ಲಿ ಅಮೀರ್ ಹಮದ್ ಬಿನ್ ಖಲೀಫ ಸಿಟಿ ಇವುಗಳಲ್ಲಿ ಪ್ರಧಾನವಾದ ಒಂದು ಸ್ಥಳವಾಗಿದೆ ಎಂದು ಸಚಿವ ಹುಸಾಯಿನ ಹೇಳಿದ್ದಾರೆ ಎಂದು ವರದಿಯಾಗಿದೆ.





