ಇಲ್ಲಿದೆ ಬ್ಯಾಂಕುಗಳಿಗೆ ಉದ್ದೇಶಪೂರ್ವಕವಾಗಿ ಅತಿ ಹೆಚ್ಚು ಸಾಲ ಬಾಕಿಯಿರಿಸಿದವರ ಪಟ್ಟಿ

ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬುಧವಾರದಂದು ಅತಿ ಹೆಚ್ಚು, ಅಂದರೆ ರೂ. 500 ಕೋಟಿಗೂ ಹೆಚ್ಚು ಮೊತ್ತದಬ್ಯಾಂಕ್ ಸಾಲ ಬಾಕಿಯಿಟ್ಟವರ ಪಟ್ಟಿಯನ್ನು ಸುಪ್ರೀಂ ಕೋರ್ಟಿಗೆನೀಡಿದ್ದುಈ ಹೆಸರುಗಳನ್ನು ಗೌಪ್ಯವಾಗಿಡಬೇಕೆಂದೂ ಮನವಿ ಮಾಡಿದೆ.ಸಾಲ ಪಡೆದ ಕಂಪೆನಿಗಳು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದಲ್ಲಿ ಹಾಗೂ ಅವುಗಳ ಹೆಸರನ್ನು ಬಹಿರಂಪಡಿಸಿದಲ್ಲಿ ಅವುಗಳ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದೆಂಬುದು ಆರ್‌ಬಿಐ ಇದಕ್ಕೆ ನೀಡುವ ಕಾರಣ.
ಆದರೆ ಇದೇ ನಿಯಮ ಉದ್ದೇಶಪೂರ್ವಕವಾಗಿ ಬ್ಯಾಂಕ್ ಸಾಲ ಬಾಕಿಯಿರಿಸುವವರಿಗೆ ಅನ್ವಯವಾಗುವುದಿಲ್ಲ ಹಾಗೂ ಬ್ಯಾಂಕ್ ಸಾಲ ಬಾಕಿಯಿರಿಸಿದ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪೆನಿಗಳಿಗೆ ಯಾವುದೇ ಕರುಣೆ ತೋರಿಸುವ ಅಗತ್ಯವಿಲ್ಲವೆಂದು ಫಸ್ಟ್ ಪೋಸ್ಟ್ ವರದಿಯೊಂದು ಹೇಳುತ್ತದೆ. ಫೆಬ್ರವರಿಯಲ್ಲಿ ಫಸ್ಟ್ ಪೋಸ್ಟ್ ವಿವಿಧ ಭಾರತೀಯ ಬ್ಯಾಂಕುಗಳಲ್ಲಿರುವ ಅನುತ್ಪಾದಕ ಸಾಲ ಖಾತೆಗಳ ಬಗ್ಗೆ ಹೇಳಿತ್ತು. ಇದೀಗಕ್ರೆಡಿಟ್ ಇನ್ಫಾರ್ಮೇಶನ್ ಬ್ಯೂರೋ ಲಿಮಿಟೆಡ್‌ನಿಂದ ದೊರೆತ ಮಾಹಿತಿಯಂತೆಅತ್ಯಂತಹೆಚ್ಚು ಸಾಲವನ್ನು ಉದ್ದೇಶಪೂರ್ವಕವಾಗಿ ಬಾಕಿಯಿರಿಸಿದ 18 ಕಂಪೆನಿಗಳ ಪಟ್ಟಿ ಬಿಡುಗಡೆ ಮಾಡಿದೆ.ಡಿಸೆಂಬರ್ 31,2015ರಂತೆ ದೇಶದಲ್ಲಿ ಉದ್ದೇಶಪೂರ್ವಕವಾಗಿ ಸಾಲ ಬಾಕಿಯಿರಿಸಿದ 7,2129 ಕಂಪೆನಿಗಳು ಇದ್ದು ಇವರ ಒಟ್ಟು ಸಾಲದ ಮೊತ್ತ ರೂ 70,540.34 ಕೋಟಿ ಆಗಿದೆ. ಫಸ್ಟ್ ಪೋಸ್ಟ್ ನೀಡಿದ 18ಹೆಸರುಗಳ ಪಟ್ಟಿಯಲ್ಲಿ ಒಟ್ಟು ಸಾಲಬಾಕಿ ರೂ. 17,488 ಕೋಟಿ ಆಗಿದೆ.
ಈ ಪಟ್ಟಿಯಲ್ಲಿ ಮೊದಲ ಸ್ಥಾನ ರೂ 2,411 ಕೋಟಿ ಸಾಲದೊಂದಿಗೆಝೂಮ್ ಡೆವಲೆಪರ್ಸ್‌ಗೆ ಹೋಗಿದ್ದರೆ, ಎರಡನೇ ಮತ್ತು ಮೂರನೇ ಸ್ಥಾನಗಳು ಕ್ರಮವಾಗಿ ವಿನ್ಸಮ್ ಡೈಮಂಡ್ಸ್ ಎಂಡ್ ಜ್ಯುವೆಲ್ಲರಿ (ರೂ. 2411 ಕೋಟಿ) ಹಾಗೂಫೊರೆವರ್ ಪ್ರೆಶ್ಯಸ್ ಜ್ಯುವೆಲ್ಲರಿ (ರೂ 1,315 ಕೋಟಿ)ಗೆ ಹೋಗಿವೆ.
ವಿಜಯ್ ಮಲ್ಯ ಒಡೆತನದ ಕಿಂಗ್‌ಫಿಶರ್ ಏರ್‌ಲೈನ್ಸ್ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆಯಾದರೂಅದು ಎಸ್‌ಬಿಐನ ರೂ 1,2011 ಕೋಟಿ ಸಾಲ ಬಾಕಿಯಿರಿಸಿದ್ದಕ್ಕಾಗಿ. ಎಸ್‌ಬಿಐ ಹೊರತಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಾತ್ರ ಕಿಂಗ್‌ಫಿಶರ್ ಕಂಪೆನಿಯನ್ನು ಉದ್ದೇಶಪೂರ್ವಕವಾಗಿ ಸಾಲ ಬಾಕಿಯಿರಿಸಿದ ಕಂಪೆನಿಯೆಂದು ಘೋಷಿಸಿವೆ.
ಈ ಪಟ್ಟಿಯಲ್ಲಿ ಬರುವ ಇತರ ಪ್ರಮುಖ ಹೆಸರೆಂದರೆ ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್.
ಇಲ್ಲಿ ಗಮನಿಸತಕ್ಕ ಅಂಶವೇನೆಂದರೆ ಉದ್ದೇಶಪೂರ್ವಕವಾಗಿ ಬಾಕಿಯಿರಿಸಿದ ಸಾಲಗಳಲ್ಲಿ ಹೆಚ್ಚಿನ ಸಾಲ ನೀಡಿದ ಬ್ಯಾಂಕ್ ಎಸ್‌ಬಿಐ ಆಗಿದ್ದುಅದರ ಬಳಿ 1,034 ಖಾತೆಗಳ ರೂ 12,091 ಕೋಟಿ ಅನುತ್ಪಾದಕ ಸಾಲಗಳಿವೆ.
ಬ್ಯಾಂಕುಗಳಲ್ಲಿರುವ ಒಟ್ಟು ಅನುತ್ಪಾದಕ ಸಾಲದಲ್ಲಿ (ರೂ 4,00,000 ಕೋಟಿ) ಉದ್ದೇಶಪೂರ್ವಕವಾಗಿ ಬಾಕಿಯಿರಿಸಿರುವ ಸಾಲ ಶೇ.16ರಷ್ಟಿದ್ದು ಈ ಮೊತ್ತ ಬ್ಯಾಂಕುಗಳು ನೀಡಿದ ಒಟ್ಟು ಸಾಲದ ಶೇ. 1ರಷ್ಟಾಗಿದೆ.







