ಕ್ರೈಸ್ತ ಪ್ರಯಾಣಿಕರನ್ನು ರಕ್ಷಿಸಿದ ಮುಸ್ಲಿಂ ಶಿಕ್ಷಕನಿಗೆ ಅತ್ಯುನ್ನತ ಪ್ರಶಸ್ತಿ ನೀಡಲಿರುವ ಕೆನ್ಯಾ

ನೈರೋಬಿ :ತಾನು ಪ್ರಯಾಣಿಸುತ್ತಿದ್ದ ಬಸ್ಸೊಂದಕ್ಕೆ ಉಗ್ರರು ದಾಳಿ ನಡೆಸಿದಾಗ ಬಸ್ಸಿನಲ್ಲಿದ್ದ ಕ್ರೈಸ್ತ ಪ್ರಯಾಣಿಕರನ್ನುತನ್ನ ಪ್ರಾಣವನ್ನೇ ಒತ್ತೆಯಾಗಿಟ್ಟು ರಕ್ಷಿಸಿ ಉಗ್ರರ ಬಂದೂಕಿಗೆ ಎದೆಯೊಡ್ಡಿ ನಂತರ ತನ್ನ ಪ್ರಾಣವನ್ನೇ ಕಳೆದುಕೊಂಡ ಮುಸ್ಲಿಂ ಸಮುದಾಯಕ್ಕೆ ಸೇರಿದ ಶಿಕ್ಷಕ ಸಲಾಹ್ ಫರ್ಹಾನಿಗೆ ಆ ಘಟನೆ ನಡೆದು ಮೂರು ತಿಂಗಳ ನಂತರ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ ಆರ್ಡರ್ ಆಫ್ ದಿ ಗ್ರ್ಯಾಂಡ್ ವಾರಿಯರ್ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಿ ಸನ್ಮಾನಿಸಲು ಕೆನ್ಯಾ ಸರಕಾರ ನಿರ್ಧರಿಸಿದೆ.
ಈ ವಿಚಾರವನ್ನು ಕೆನ್ಯಾ ಅಧ್ಯಕ್ಷ ಉಹುರು ಕೆನ್ಯಟ್ಟ ಸಂಸತ್ತಿನಲ್ಲಿ ತಾನು ಗುರುವಾರ ನೀಡಿದ ಭಾಷಣದಲ್ಲಿ ತಿಳಿಸಿದರು.
ಫರ್ಹಾಮತ್ತಿತರ ಸುಮಾರು 60 ಮಂದಿ ಪ್ರಯಾಣಿಕರು ನೈರೋಬಿಯಿಂದ ಮಂಡೇರಾಗೆ ಡಿಸೆಂಬರ್ 21ರಂದು ಪ್ರಯಾಣಿಸುತ್ತಿದ್ದಾಗಸೊಮಾಲಿಯಾದ ಅಲ್-ಶಬಾಬ್ ಉಗ್ರರುಬಸ್ಸಿನತ್ತ ಗುಂಡು ಹಾರಾಟ ನಡೆಸಿದ್ದುಬಂದೂಕುಧಾರಿಗಳು ಮುಸ್ಲಿಂ ಹಾಗೂ ಕ್ರೈಸ್ತ ಪ್ರಯಾಣಿಕರನ್ನು ಪ್ರತ್ಯೇಕವಾಗಿ ನಿಲ್ಲಲು ಹೇಳಿದಾಗಫರ್ಹಾ ಮತ್ತಿತರ ಪ್ರಯಾಣಿಕರು ಅವರ ಮಾತನ್ನು ಕೇಳದೆ ಎಲ್ಲಾ ಪ್ರಯಾಣಿಕರನ್ನೂ ಕೊಲ್ಲಲು ತಿಳಿಸಿದ್ದರು. ಆಗ ದಾಳಿಕೋರರು ಫರ್ಹಾಗೆ ಗುಂಡಿಕ್ಕಿದ್ದು ಪೃಷ್ಠ ಹಾಗೂಭುಜಕ್ಕೆ ಗುಂಡಿನ ಗಾಯಗಳಾಗಿದ್ದ ಆತ ಒಂದು ತಿಂಗಳನಂತರ ಶಸ್ತ್ರಚಿಕಿತ್ಸೆ ಸಮಯ ಮೃತಪಟ್ಟಿದ್ದ.
‘‘ಜನರೆಲ್ಲಾ ಶಾಂತಿ ಸೌಹಾರ್ದತೆಯಿಂದ ಬಾಳಬೇಕು,’’ಎಂದು ಫರ್ಹಾ ಆಸ್ಪತ್ರೆಯಿಂದ ವಾಯಿಸ್ ಆಫ್ ಅಮೆರಿಕಾಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದನು.







