ವಿವಿಧೆಡೆ ಮುಂದುವರಿದ ಎನ್‌ಪಿಎಸ್ ನೌಕರರ ಪ್ರತಿಭಟನೆ
.jpg)
ಸಾಗರ,ಎ.2: ಸರಕಾರ ಜಾರಿಗೆ ತಂದಿರುವ ನೂತನ ಪಿಂಚಣಿ ಯೋಜನೆಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ಸಾಗರ ಶಾಖೆ ವತಿಯಿಂದ ಎಲ್ಲ ಇಲಾಖೆಯ ನೌಕರರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಯೋಜನೆ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಪತ್ರ ಚಳವಳಿ ನಡೆಸಿದರು. ಸಂದರ್ಭದಲ್ಲಿ ಮಾತನಾಡಿದ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಗಣಪತಪ್ಪ ರಾಜ್ಯ ಸರಕಾರಿ ನೌಕರರಿಗೆ ಕಳೆದ ಎ. 2006ರಲ್ಲಿ ಜಾರಿಗೆ ತಂದಿರುವ ಪಿಂಚಣಿ ಯೋಜನೆ ಒಂದು ರೀತಿಯ ಶಾಪವಾಗಿದೆ. ಇದರಿಂದ ನೌಕರರು ನಿವೃತ್ತಿ ನಂತರ ಸಾಕಷ್ಟು ಸೌಲಭ್ಯದಿಂದ ವಂಚಿತರಾಗುತ್ತಾರೆ. ಹಿಂದಿನಂತೆ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು ಹಾಗೂ ಈಗಾಗಲೇ ಮರಣ ಹೊಂದಿರುವ ನೌಕರರ ಅವಲಂಬಿತರಿಗೆ ಹಿಂದಿನ ಪಿಂಚಣಿ ಯೋಜನೆ ಅನ್ವಯ ಸೌಲಭ್ಯಗಳನ್ನು ನೀಡಬೇಕು. ಸಂಘವು ಹಮ್ಮಿಕೊಂಡಿರುವ ಎಲ್ಲ ಹೆರಾಟಕ್ಕೆ ಸರಕಾರಿ ನೌಕರರ ಸಂಘ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ಪ ಒ.ಕೆ., ಸಂ
ಘದ ಅಧ್ಯಕ್ಷ ಮಂಜುನಾಥ್ ಆರ್.ಸಿ. ಮಾತನಾಡಿದರು. ಸರಕಾರಿ ನೌಕರರ ಸಂಘ ಸಾಗರ ಶಾಖೆ ಕಾರ್ಯದರ್ಶಿ ಎಚ್.ಎಂ.ಪಂಡಿತಾರಾಧ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಂ.ವೈ.ಮೂರ್ತಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಚಂದ್ರಶೇಖರ್, ಕಾರ್ಯದರ್ಶಿ ಲಕ್ಷ್ಮಣ ಆರ್. ನಾಯ್ಕೌ, ಖಜಾಂಚಿ ವೀರಭದ್ರಪ್ಪ, ಎನ್.ಸಿ.ಪಿ. ನೌಕರರ ಸಂಘದ ಕಾರ್ಯದರ್ಶಿ ಈಶ್ವರ್, ಖಜಾಂಚಿ ಪ್ರವೀಣ್‌ಕುಮಾರ್, ಮನು ಡಿ., ಜಯಶೀಲ ಮತ್ತಿತರರು ಉಪಸ್ಥಿತರಿದ್ದರು.
ತೀರ್ಥಹಳ್ಳಿ
ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಎನ್‌ಪಿಎಸ್ ಯೋಜನೆ ಕೈಬಿಡುವಂತೆ ಆಗ್ರಹಿಸಿ ಸಹಾರಿ ಎನ್‌ಪಿಎಸ್ ತಾಲೂಕು ಘಟಕದ ನೌಕರರು ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಪಟ್ಟಣದ ತಾಲೂಕು ಕಚೆೇರಿ ಎದುರು ಮನವಿ ಅರ್ಪಿಸಿದ ನೌಕರರು, ಎನ್‌ಪಿಎಸ್ ಯೋಜನೆ ಸರಕಾರಿ
ೌಕರರನ್ನೇ ಎರಡು ಗುಂಪಾಗಿ ವಿಂಗಡಿಸುತ್ತದೆ. ಯೋಜನೆಯಲ್ಲಿ ನಿಶ್ಚಿತ ಕುಟುಂಬ ಪಿಂಚಣಿ ಇಲ್ಲವಾಗಿದೆ. ಮಾರುಕಟ್ಟೆ ಆಧಾರಿತ ಎನ್‌ಪಿಎಸ್ ಯೋಜನೆಯಿಂದ ಪಿಂಚಣಿ ಪಡೆಯುವುದು ಅನಿಶ್ಚಿತವಾಗಿದೆ. ಹೊಸ ಪಿಂಚಣಿ ಯೋಜನೆಯಲ್ಲಿ ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ನೌಕರರು ದೂರಿದರು. ಆರ್ಥಿಕ ಸುಧಾರಣೆ ನೆಪ ದಲ್ಲಿ ಎ್ಡಿಐ ಒತ್ತಡ ಇರುವುದು ತಿಳಿದುಬಂದಿದೆ. ನೌಕರರ ಹಿತ ಕಾಪಾಡಲು ರಕಾರ ತಕ್ಷಣ ಎನ್‌ಪಿಎಸ್‌ಯೋಜನೆ ಕೈಬಿಡಬೇಕೆಂದು ಘಟಕ ಆಗ್ರಹಿಸಿತು. ಗ್ರೇಡ್-2 ತಹಶೀಲ್ದಾರ್ ಪ್ರದೀಪ್ ಕೆ. ಮನವಿ ಸ್ವೀಕರಿಸಿದರು.







