ನಕ್ಸಲರಿಂದ ಸರಣಿ ಬಾಂಬ್ ಸ್ಫೋಟ: ನಾಲ್ವರಿಗೆ ಗಾಯ
ರಾಂಚಿ, ಎ.2: ಜಾರ್ಖಂಡ್‌ನ ಧನಬಾದ್ ಜಿಲ್ಲೆಯಲ್ಲಿ ಮಾವೊವಾದಿಗಳಿಂದು ನಡೆಸಿದ ಸರಣಿ ಸ್ಫೋಟಗಳಲ್ಲಿ 4 ಮಂದಿ ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಸಿಆರ್‌ಪಿಎಫ್ ಯೋಧರು ಬೈಕ್‌ಗಳ ಮೇಲೆ ಗಸ್ತು ತಿರುಗುತ್ತಿದ್ದಾಗ ಟೊಪ್ಚಂಚಿ ಜೀತ್‌ಪುರ ದಾರಿಯಲ್ಲಿ ಈ ಘಟನೆ ನಡೆದಿದೆ.
ಪ್ರದೇಶದಲ್ಲಿ ನಡೆದ ಸುಧಾರಿತ ಸ್ಫೋಟ ಸಾಧನಗಳ(ಐಇಡಿ) ಸರಣಿ ಸ್ಫೋಟಗಳಿಂದಾಗಿ ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಸೆಕೆಂಡ್ ಇನ್ ಕಮಾಂಡ್ ದರ್ಜೆಯ ಹಿರಿಯಧಿಕಾರಿಯೊಬ್ಬರು ತಂಡದ ನೇತೃತ್ವ ವಹಿಸಿದ್ದರು. ಗಾಯಾಳುಗಳ ಸ್ಥಿತಿ ಸಾಮಾನ್ಯವಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
154ನೆ ಬೆಟಾಲಿಯನ್‌ಗೆ ಸೇರಿದ ಸಿಆರ್‌ಪಿಎಫ್ ಪಡೆಗಳು ರಾಜ್ಯ ಪೊಲೀಸರೊಂದಿಗೆ ದೀರ್ಘ ವ್ಯಾಪ್ತಿಯ ಗಸ್ತು ನಡೆಸುತ್ತಿದ್ದರು. ಮಧ್ಯಾಹ್ನ 12:15ರ ವೇಳೆ ಅವರು ಸರಣಿ ಬಾಂಬ್ ದಾಳಿಗೆ ಒಳಗಾದರು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆಯೆಂದು ಅವರು ಹೇಳಿದ್ದಾರೆ.
Next Story





