ಸರಕಾರದ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ಪತ್ರ
ಲೋಕಾಯುಕ್ತ ವಿವಾದ

ಬೆಂಗಳೂರು, ಎ.2: ಲೋಕಾಯುಕ್ತ ಸಂಸ್ಥೆ ಯನ್ನು ಸಮಾಧಿ ಮಾಡಲು ಮುಂದಾಗಿರುವ ರಾಜ್ಯ ಸರಕಾರದ ಕ್ರಮವನ್ನು ತಡೆಯಬೇಕೆಂದು ಬಿಜೆಪಿ ಮುಖಂಡರು ಇಂದು ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಈ ಬಗ್ಗೆ ಶನಿವಾರ ರಾಜ್ಯಪಾಲ ಭವನದ ಎದುರು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಲೋಕಾಯುಕ್ತ ಸಂಸ್ಥೆಯನ್ನು ರಾಜ್ಯ ಸರಕಾರ ದುರ್ಬಲಗೊಳಿಸಿದೆ. ಕರ್ನಾಟಕದ ಲೋಕಾಯುಕ್ತ ದೇಶಕ್ಕೆ ಮಾದರಿಯಾಗಿತ್ತು. ಆದರೆ, ಇದೀಗ ಲೋಕಾ ಸಮಾಧಿ ಮಾಡಲುಮುಂದಾಗಿರುವ ಸರಕಾರದ ಕ್ರಮ ಖಂಡ ನೀಯ ಎಂದರು.
ಎಸಿಬಿ ಮತ್ತು ಲೋಕಾಯುಕ್ತ ಸಂಸ್ಥೆಗೆ ಸಂಬಂಧಪಟ್ಟಂತೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಗೊಂದಲ ಹುಟ್ಟುಹಾಕಿದೆ. ಎಲ್ಲಿ ದೂರು ನೀಡಬೇಕು? ನ್ಯಾಯ ಎಲ್ಲಿ ಸಿಗುತ್ತದೆ? ಎಂಬ ಅನುಮಾನ ಹೆಚ್ಚಾಗಿದೆ. ಆದಷ್ಟು ಬೇಗ ಸರಕಾರ ಇದನ್ನು ದೂರಗೊಳಿಸಬೇಕೆಂದು ಸಲಹೆ ನೀಡಿದರು. ಸಮಾನ ವೇದಿಕೆಯಲ್ಲಿ ಈ ಎರಡು ಏಜೆನ್ಸಿಗಳು ಹೇಗೆ ಕಾರ್ಯನಿರ್ವಹಿಸಲಿವೆ ಎಂದು ರಾಜ್ಯಪಾಲ ವಿ.ಆರ್. ವಾಲ ಅವರುಪ್ರಶ್ನಿಸಿದ್ದು, ಶೀಘ್ರದಲ್ಲಿಯೇ ಸರಕಾರದಿಂದ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವು ದಾಗಿ ಭರವಸೆ ನೀಡಿದ್ದಾರೆ ಎಂದು ಜೋಷಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿ ಪ್ರಮುಖ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.







