ಇಂಡಿಯಾ ಓಪನ್ ಸೂಪರ್ ಸರಣಿ: ಸೈನಾ ನೆಹ್ವಾಲ್ ಸವಾಲು ಅಂತ್ಯ
ಹೊಸದಿಲ್ಲಿ, ಎ.2: ಇಂಡಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಸೈನಾ ನೆಹ್ವಾಲ್ ಸವಾಲು ಅಂತ್ಯವಾಗಿದೆ.
ಶನಿವಾರ ಸಂಜೆ ಇಲ್ಲಿನ ಸಿರಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ ಸೈನಾ ಅವರು ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಲೀ ಕ್ಸುರುಯಿ ವಿರುದ್ಧ 22-20, 17-21, 21-19 ಗೇಮ್‌ಗಳ ಅಂತರದಿಂದ ಶರಣಾಗಿ ತವರಿನ ಬ್ಯಾಡ್ಮಿಂಟನ್ ಅಭಿಮಾನಿಗಳಿಗೆ ನಿರಾಸೆಗೊಳಿಸಿದರು.
ವಿಶ್ವದ ನಂ.2ನೆ ಆಟಗಾರ್ತಿ ಲೀ ವಿಶ್ವದ ನಂ.6ನೆ ಆಟಗಾರ್ತಿ ಸೈನಾರ ವಿರುದ್ಧ ಆಡಿರುವ 13 ಪಂದ್ಯಗಳಲ್ಲಿ 11ನೆ ಗೆಲುವು ಸಂಪಾದಿಸಿದರು.
ಹೈದರಾಬಾದ್‌ನ ಸೈನಾ 2012ರಲ್ಲಿ ಇಂಡೋನೇಷ್ಯಾ ಓಪನ್ ಟೂರ್ನಿಯಲ್ಲಿ ಲೀ ಅವರನ್ನು ಕೊನೆಯ ಬಾರಿ ಸೋಲಿಸಿದ್ದರು.
..........
Next Story





