ಇಂದಿನ ಕಾರ್ಯಕ್ರಮ
ಸ್ವಯಂಪ್ರೇರಿತ ರಕ್ತದಾನ ಶಿಬಿರ:
ಉಡುಪಿಯ ಶ್ರೀಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಕುಂದಾಪುರ ರಕ್ತನಿಧಿ ಹಾಗೂ ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ. ಸಮಯ: ಬೆಳಗ್ಗೆ 9:30ರಿಂದ. ಸ್ಥಳ: ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ.
ವಾರ್ಷಿಕೋತ್ಸವ: ಉಡುಪಿ ಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ. ಸಮಯ: ಬೆಳಗ್ಗೆ 10ರಿಂದ. ಸ್ಥಳ: ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ, ಉಡುಪಿ.
ಪೇಜಾವರ ಶ್ರೀಗಳ ಪಂಚಮ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ 9:30ಕ್ಕೆ ಅಖಂಡ ಸಪ್ತೋತ್ಸವ ಹಗಲು ಉತ್ಸವ, ಸಂಜೆ 5ಕ್ಕೆ ಚಂದ್ರಶಾಲೆಯಲ್ಲಿ ಪುರಾಣ ಬೆಂಗಳೂರಿನ ವಿದ್ವಾನ್ ಬ್ರಹ್ಮಣ್ಯಾಚಾರ್ಯರಿಂದ ಪ್ರವಚನ. 5:30ಕ್ಕೆ ರಾಜಾಂಗಣದಲ್ಲಿ ಧಾರ್ಮಿಕ ಉಪನ್ಯಾಸ ಬೆಂಗಳೂರಿನ ವಿದ್ವಾನ್ ಸಿ.ಎಚ್. ಬದರಿನಾಥಾಚಾರ್ರಿಂದ ಪ್ರವಚನ, 6:30ಕ್ಕೆ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರು ಹಾಗೂ ಶ್ರೀವಿಶ್ವಪ್ರಸನ್ನ ತೀರ್ಥರಿಂದ ಅನುಗ್ರಹ ಸಂದೇಶ. 7ರಿಂದ ರಾಜಾಂಗಣದಲ್ಲಿ ಆಳ್ವಾಸ್ ವಿದ್ಯಾರ್ಥಿಗಳಿಂದ ನಾಟಕ ‘ಧಾಂ ಧೂಂ ಸುಂಟರಗಾಳಿ’.