ಉತ್ತರಪ್ರದೇಶ:ಮಂಗಳಮುಖಿಯರ ವೇಷಹಾಕಿ ಪ್ರಯಾಣಿಕರನ್ನು ದೋಚುತ್ತಿದ್ದವರ ಸೆರೆ

ಅಲಹಾಬಾದ್, ಎಪ್ರಿಲ್.3: ಇದನ್ನು ನಿರುದ್ಯೋಗದ ಸಮಸ್ಯೆ ಎನ್ನುತ್ತೀರೊ ಗೊತ್ತಿಲ್ಲ. ಹಣ ಮಾಡಲಿಕ್ಕಾಗಿ ಮಂಗಳಮುಖಿಯರ ವೇಶಧರಿಸಿ ಚಪ್ಪಾಳೆ ತಟ್ಟುತ್ತಾ ಪ್ರಯಾಣಿಕರಿಂದ ಹಣ ವಸೂಲು ಮಾಡುತ್ತಿದ್ದವರನ್ನು ಆರ್‌ಫಿಎಫ್ ಪೊಲೀಸರು ಮುತ್ತಿಗೆ ಹಾಕಿ ಹಿಡಿದಿರುವ ಘಟನೆ ಉತ್ತರ ಪ್ರದೇಶದ ನೈನಿ ಎಂಬಲ್ಲಿಂದ ವರದಿಯಾಗಿದೆ.
ಮಹಿಳೆಯರ ವೇಶಧರಿಸಿ ಕೆಲವರು ಪ್ರಯಾಣಿಕರನ್ನು ದೋಚುತ್ತಿದ್ದಾರೆಂದು ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರೆಂದು ವರದಿಗಳುತಿಳಿಸಿವೆ. ಹೀಗೆ ನಾಲ್ವರು ನಕಲಿ ಮಂಗಳಮುಖಿಯರು ಸೆರೆಯಾಗಿದ್ದಾರೆ. ಕಾಶಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಇವರು ಪ್ರಯಾಣಿಕರಿಂದ ಬಲವಂತದಿಂದ ಹಣ ವಸೂಲು ಮಾಡುತ್ತಿದ್ದರೆನ್ನಲಾಗಿದೆ.
ಆರ್‌ಫಿಎಫ್ ಕ್ರೈಂ ಬ್ರಾಂಚ್ ಮುಖ್ಯಸ್ಥ ಸಂಜಯ್‌ಪಾಂಡೆ ಸೆರೆಸಿಕ್ಕ ನಾಲ್ವರು ಪುರುಷರಾಗಿದ್ದು ಮಹಿಳೆಯರ ವೇಶ ಧರಿಸುತ್ತಿದ್ದರು ಮತ್ತು ರೈಲಿನಲ್ಲಿ ಪ್ರಯಾಣಿಕರಿಂದ ಬಲವಂತದಿಂದ ಹಣ ವಸೂಲು ಮಾಡುತ್ತಿದ್ದರೆಂದು ತಿಳಿಸಿದ್ದಾರೆ. ನೈನಿಯಿಂದ ಅಲಾಹಬಾದ್‌ಗೆ ಬರುವ ಟ್ರೈನ್‌ನಲ್ಲಿ ಕೆಲವರುಮಹಿಳೆಯರ ವೇಶಧರಿಸಿ ಬಲವಂತದ ವಶೀಲಿಗಿಳಿದಿದ್ದಾರೆ ಎಂದು ದೂರು ಬಂದಿತ್ತು.
ನಿರಂತರ ದೂರು ಸಿಕ್ಕಿದ್ದರಿಂದ ಆರ್‌ಪಿಎಫ್ ಕ್ರೈಂಬ್ರಾಂಚ್ ತಂಡ ಗುರುವಾರ ಬೆಳಗ್ಗೆ ನೈನಿ ರೈಲ್ವೆ ಸ್ಟೇಶನ್‌ನಿಂದ ಅಲಾಹಾಬಾದ್‌ಗೆ ಬರುತ್ತಿದ್ದ ಕಾಶಿ ಎಕ್ಸ್‌ಪ್ರೆಸ್‌ನಲ್ಲಿದ್ದ ನಾಲ್ವರನ್ನು ರೆಡ್‌ಹ್ಯಾಂಡ್‌ಆಗಿ ಹಿಡಿದಿದೆ. ಇನ್ನೂ ಆರು ಮಂದಿ ಅಲ್ಲಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾರೆಂದು ವರದಿಗಳು ತಿಳಿಸಿವೆ.
ರೈಲ್ವೆ ಕಾನೂನು ಪ್ರಕಾರ ಇವರ ವಿರುದ್ಧ ಕ್ರಮಕೈಗೊಳ್ಳಲಾಗುವುದೆಂದು ಕ್ರೈಂಬ್ರಾಂಚ್ ಮುಖ್ಯಸ್ಥ ಸಂಜಯ್ ಪಾಂಡೆ ತಿಳಿಸಿದ್ದಾರೆ. ಇಂತಹವರನ್ನು ಪತ್ತೆಹಚ್ಚುವ ಕಾರ್ಯಾಚರಣೆ ಮುಂದುವರಿಸಲಾಗುವುದೆಂದೂ ಅವರು ತಿಳಿಸಿರುವುದಾಗಿ ವರದಿಯಾಗಿದೆ.







