ಛತ್ತೀಸ್‌ಗಡ: ಒಂದರನಂತರ ಒಂದರಂತೆ ಐವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಛತ್ತೀಸ್‌ಗಡ, ಎಪ್ರಿಲ್.3: ಕಾತರದಿಂದ ಕಾದು ಮಗುವೊಂದು ಜನಿಸಲಿದೆಯಲ್ಲ ಎಂದು ಸಂತೋಷದಲ್ಲಿದ್ದ ಛತ್ತೀಸ್‌ಗಡದ 25 ವರ್ಷದ ಯುವತಿ ಮನಿತಾ ಸಿಂಗ್ ಹೆರಿಗೆ ಕೋಣೆಗೆ ಹೋದಾಗ ಅವರ ಸಂತೋಷ ಐದು ಪಟ್ಟು ಹೆಚ್ಚಿತು. ಅರ್ಧಗಂಟೆಯಲ್ಲಿಒಂದರ ನಂತರ ಒಂದರಂತೆ ಐದು ಮಕ್ಕಳು ಅವರಿಗೆ ಜನಿಸಿದ್ದವು. ಇದರೊಂದಿಗೆ ಮನಿತಾ ಜಗತ್ತಿನ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ. ಹುಟ್ಟಿದ ಐದು ಶಿಶುಗಳು ಕೂಡಾ ಹೆಮ್ಮಕ್ಕಳು ಎಂಬುದು ಇನ್ನೊಂದು ವಿಶೇಷವಾಗಿದೆ. ಗರ್ಭಿಣಿಯಾಗಿ 26ವಾರ ಪೂರ್ತಿಯಾದಾಗ ಮನಿತಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಮನಿತಾರ ಮೊದಲ ಮಗು ಎರಡು ವರ್ಷವಾದಾಗ ಮೃತವಾಗಿತ್ತು. ಛತ್ತೀಸ್‌ಗಡದ ಅಂಬಿಕಾಪುರಿಯ ಸರಕಾರಿ ಆಸ್ಪತ್ರೆಯಲ್ಲಿ ಬೆಳಗ್ಗೆ ಹನ್ನೊಂದು ಗಂಟೆಗೆ ಮನಿತಾ ಮೊದಲ ಮಗುವಿಗೆ ಹೆರಿಗೆಯಾಯಿತು. ಆನಂತರ ನಾಲ್ವರು ಸಹೋದರಿಯರೂ ಹುಟ್ಟಿದರು ಎಂದು ವರದಿಗಳು ತಿಳಿಸಿವೆ.
ಒಂದರ ನಂತರ ಒಂದರಂತೆ ಐದು ಮಕ್ಕಳನ್ನು ಕೊಟ್ಟಿರುವ ದೇವನಿಗೆ ತಾನು ಕೃತಜ್ಞತೆ ಸಲ್ಲಿಸುವೆ ಎಂದು ಮನಿತಾರ ಪತಿ ಮನೀಷ್ ಪ್ರತಿಕ್ರಿಯಿಸಿದ್ದಾರೆ. ಮೊದಲ ಮಗ ಮೃತನಾದಾಗ ನಮ್ಮ ಹೃದಯವೇ ಸ್ತಂಭಿಸಿದಂತಾಗಿತ್ತು. ಈಗ ದೇವನು ನಷ್ಟಪರಿಹಾರವನ್ನು ನೀಡಿದೆ ಎಂದು ಮನೀಷ್ ಹೇಳಿದ್ದಾರೆಂದು ವರದಿಯಾಗಿದೆ. ಈ ಹೆಮ್ಮಕ್ಕಳಿಗೆ ಉತ್ತಮವಾದ ಜೀವನವೊದಗಿಸಲು ತನಗೆ ಸಾಧ್ಯವಿದೆ ಎಂದು ಮನೀಷ್ ಭಾವಿಸಿದ್ದಾರೆ. ತನ್ನ ಕೆರಿಯರ್‌ನಲ್ಲಿ ಇದೇ ಮೊದಲ ಸಲ ಇಂತಹದೊಂದು ಹೆರಿಗೆಯನ್ನು ನಿಭಾಯಿಸಿದೆ ಎಂದು ಹೆರಿಗೆಗೆ ನೇತೃತ್ವ ವಹಿಸಿದ್ದ ಡಾ. ತೆಕಾಂ ಹೇಳಿದ್ದಾರೆ. ಸಾಮಾನ್ಯ ರೀತಿಯ ಹೆರಿಗೆಯಲ್ಲಿ ಐದು ಮಕ್ಕಳು ಜನಿಸಿರುವುದು ಇದೇ ಮೊದಲು ಎಂದು ತಾನು ಭಾವಿಸಿದ್ದೇನೆಂದು ವೈದ್ಯರು ಹೇಳಿರುವುದಾಗಿ ವರದಿಗಳು ತಿಳಿಸಿವೆ. ಮಕ್ಕಳು ಸಂಪೂರ್ಣ ಬೆಳವಣಿಗೆಯಾಗದೆ ಹೆರಿಗೆಯಾದ್ದರಿಂದ ಅವರನ್ನು ತೀವ್ರ ನಿಗಾ ವಿಭಾಗದಲ್ಲಿ ಇರಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಇವರಿಗೆ ಆರೋಗ್ಯವಿದ್ದರೂ ಅವರನ್ನು ತೀವ್ರ ಉಪಚಾರಕ್ಕೆ ವಿಧೇಯಗೊಳಿಸಲಾಗಿದೆ. ಎಲ್ಲ ಐದು ಶಿಶುಗಳ ರಕ್ಷಣೆ ಸೂಕ್ತವಾದವೆಲ್ಲವನ್ನೂ ಮಾಡುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.







