Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಭಟ್ಕಳ: ಅಂಜುಮನ್ ಮಹಾವಿದ್ಯಾಲಯಕ್ಕೆ...

ಭಟ್ಕಳ: ಅಂಜುಮನ್ ಮಹಾವಿದ್ಯಾಲಯಕ್ಕೆ ನ್ಯಾಕ್‌ತಂಡ ಭೇಟಿ

ವಾರ್ತಾಭಾರತಿವಾರ್ತಾಭಾರತಿ3 April 2016 5:09 PM IST
share
ಭಟ್ಕಳ: ಅಂಜುಮನ್ ಮಹಾವಿದ್ಯಾಲಯಕ್ಕೆ ನ್ಯಾಕ್‌ತಂಡ ಭೇಟಿ

 ಭಟ್ಕಳ:ಇಲ್ಲಿಯ ಪ್ರತಿಷ್ಠಿತ ಅಂಜುಮನ್ ಹಾಮಿ ಇ ಮುಸ್ಲಮೀನ್ ಸಂಸ್ಥೆಯ ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರಕೇಂದ್ರಕ್ಕೆರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಸಂಸ್ಥೆ,(National Assessment and Accreditation Council –NAAC) ಬೆಂಗಳೂರು ಇದರತಂಡ ಕಳೆದ ಮಾರ್ಚ್ 28, 29 ಮತ್ತು 30ರಂದು ಭೇಟಿ ನೀಡಿತು.

ಈ ತಂಡದ ಮುಖ್ಯಸ್ಥರುರಾಜಸ್ಥಾನದಎಂ.ಡಿ.ಎಸ್. ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಕೃಷ್ಣ ಕೆ.ಶರ್ಮಾಆಗಿದ್ದರು.ಈ ತಂಡದಲ್ಲಿ ತಮಿಳುನಾಡಿನ ಗಾಂಧಿಗ್ರಾಮರೂರಲ್ ಇನ್‌ಸ್ಟಿಟ್ಯೂಟ್ ಡೀಮ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಡಾ.ರಾಜೇಂದ್ರನ್ ಸಂಯೋಜಕರಾಗಿ ಮತ್ತು ಮಹಾರಾಷ್ಟ್ರದ ಮುಂಬಯಿಯಮಾಲಿನಿ ಕಿಶೋರ ಸಂಘವಿ ಕಾಲೇಜಿನ ಪ್ರಾಂಶುಪಾಲರಾದಡಾ. (ಶ್ರೀಮತಿ) ಕೃಷ್ಣಾ ಗಾಂಧಿ ಸದಸ್ಯರಾಗಿ ಆಗಮಿಸಿದ್ದರು.ನ್ಯಾಕ್‌ತಂಡವು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಎ. ಎಂ. ಮುಲ್ಲಾ, ನ್ಯಾಕ್ ಸಂಯೋಜಕರಾದ ಪ್ರೊ.ಎಂ.ಎಂ.ಜಮಾದಾರ್, ಆಡಳಿತ ಮಂಡಳಿಯ ಸದಸ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಪಾಲಕರೊಡನೆ ಸಮಾಲೋಚನೆ ನಡೆಸಿತು.

ಈ ಪರಿಶೀಲನಾ ತಂಡವು ಮಹಾವಿದ್ಯಾಲಯದಎಲ್ಲ ವಿಭಾಗಗಳಿಗೆ ಭೇಟಿನೀಡಿ, ಇಲ್ಲಿರುವ ಸವಲತ್ತುಗಳು ಮತ್ತು ಅವಕಾಶಗಳನ್ನು ಪರಿಶೀಲಿಸಿತು.ಈಗಾಗಲೇ ಮಹಾವಿದ್ಯಾಲಯವು ಸಲ್ಲಿಸಿರುವ ಸ್ವ-ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ ಸಂಗತಿಗಳ ಸತ್ಯಾಸತ್ಯತೆಯನ್ನು ಈ ತಂಡವುಒರೆಗೆಹಚ್ಚಿ ನೋಡಿತು.

ದಿನಾಂಕ 30ರಂದು ನಡೆದ ನಿರ್ಗಮನ ಸಭೆಯಲ್ಲಿತಂಡದಅಧ್ಯಕ್ಷರಾದ ಪ್ರೊ.ಕೃಷ್ಣ ಕೆ.ಶರ್ಮಾತಮ್ಮ ಅನಿಸಿಕೆಗಳನ್ನು ಹೇಳುವುದರ ಜೊತೆಗೆ ಸದ್ಯದಲ್ಲಿಯೇ ಶತಮಾನವನ್ನುಪೂರೈಸಲಿರುವಅಂಜುಮನ್ ಸಂಸ್ಥೆ ಶಿಕ್ಷಣ ಕ್ಷೇತ್ರಕ್ಕೆ ನೀಡಿದಕಾಣಿಕೆಯನ್ನುಕುರಿತು ಶ್ಲಾಘಿಸಿದರು.ಅಂಜುಮನ್ ಮಹಾವಿದ್ಯಾಲಯವೂ ಸಹ ಸ್ಥಳೀಯ ಪರಿಸರದಲ್ಲಿಉಂಟುಮಾಡಿದ ಶಿಕ್ಷಣ ಕ್ರಾಂತಿಯನ್ನು ಮುಕ್ತಕಂಠದಿಂದ ಹೊಗಳಿದರು.ಇದೇ ಸಂದರ್ಭದಲ್ಲಿ ಶ್ರೀ ಶರ್ಮಾಅವರುತಾವು ಸಿದ್ಧಪಡಿಸಿದ ಮೌಲ್ಯೀಕರಣದ ಪ್ರತಿಯನ್ನು ಪ್ರಾಚಾರ್ಯರಾದ ಪ್ರೊ. ಎ. ಎಂ. ಮುಲ್ಲಾಅವರಿಗೆ ಹಸ್ತಾಂತರಿಸಿದರು.ಅವರು ನೀಡಿದ ಈ ವರದಿಯನ್ನು ಆಧರಿಸಿಯೇ ನ್ಯಾಕ್ ಸಂಸ್ಥೆಯು ಮಹಾವಿದ್ಯಾಲಯಕ್ಕೆ ಶ್ರೇಣಿಯನ್ನು ನೀಡಲಿದೆ.

ಈ ಸಂದರ್ಭದಲ್ಲಿ ಸಹಕರಿಸಿದ ಸರ್ವರಿಗೂ ಪ್ರಾಚಾರ್ಯ ಪ್ರೊ.ಮುಲ್ಲಾ ಮತ್ತು ನ್ಯಾಕ್ ಸಮಯೋಜಕ ಪ್ರೊ.ಜಮಾದಾರ್‌ಕೃತಜ್ಞತೆಯನ್ನು ಸಲ್ಲಿಸಿದರು. ನಿರ್ಗಮನ ಸಭೆಗೆ ಮೊದಲಿಗೆ ಪ್ರಾಚಾರ್ಯರುಎಲ್ಲರನ್ನು ಸ್ವಾಗತಿಸಿದರೆ, ಕೊನೆಯಲ್ಲಿನ್ಯಾಕ್ ಸಂಯೋಜಕರು ವಂದಿಸಿದರು.ಪ್ರೊ.ಸಹೀಲ್‌ಅಹ್ಮದ್‌ಕಾರ್ಯಕ್ರಮವನ್ನುಅಚ್ಚುಕಟ್ಟಾಗಿ ನಿರ್ವಹಿಸಿದರು.

ಅಂಜುಮನ್ ಮಹಾವಿದ್ಯಾಲಯಕ್ಕೆ ಎ ಗ್ರೇಡ್‌ದೊರೆಯುವ ವಿಶ್ವಾಸ - ಪ್ರೋ.ಮುಲ್ಲಾ

ಭಟ್ಕಳ: ಶತಮಾನ ಪೂರೈಸುತ್ತಿರುವಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯಅಂಜುಮನ್ ಪದವಿ ಮಹಾವಿದ್ಯಾಲಯವು ನ್ಯಾಕ್ ಸಮಿತಿಯಎಲ್ಲ ಅವಶ್ಯಕತೆಗಳನ್ನು ಪೂರೈಸಿದ್ದು ಇದಕ್ಕೆ ಎ ಗ್ರೇಡ್ ಸಿಗುತ್ತದೆ ಎಂದು ಸಂಸ್ಥೆಯ ಪ್ರಚಾರ್ಯ ಫ್ರೋ.ಎ.ಎಂ. ಮುಲ್ಲಾ ವಿಶ್ವಾಸ ವ್ಯಕ್ತಪಡಿಸಿದರು.ಅವರು ಭಾನುವಾರ ಮಹಾವಿದ್ಯಾಯಲದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿ ಮಾತನಾಡುತ್ತಿದ್ದರು.

 ಐದು ವರ್ಷಗಳಿಗೊಮ್ಮೆ ನಡೆಯುವ ಈ ಮೌಲ್ಯೀಕರಣದಲ್ಲಿ ಹಿಂದೆ ಬಿ ಗ್ರೇಡ್ ನೀಡಲಾಗಿತ್ತು.ಈ ಬಾರಿ ಸಂಸ್ಥೆ ಉತ್ತಮರೀತಿಯಲ್ಲಿ ಬೆಳವಣಿಗೆ ಹೊಂದಿದೆ.ಉತ್ತಮ ಆಡಳಿತ ಮಂಡಳಿಯ ಮೇಲ್ವಿಚಾರಣೆಯಲ್ಲಿ ಸಂಸ್ಥೆಯುಅಭಿವೃದ್ದಿ ಪಥದತ್ತ ಮುನ್ನುಗ್ಗುತ್ತಿದೆ. ಹಾಗಾಗಿ ಎ ಗ್ರೇಡ್ ಸಿಗುತ್ತದೆ ಎನ್ನುವ ವಿಶ್ವಾಸವನ್ನುಅವರು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಫ್ರೋ.ಜಮಾದಾರ್ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X