Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಮಕ್ಕಳಲ್ಲಿ ಆಟಿಸಂ ಕಾಯಿಲೆ: ಹೆತ್ತವರಿಗೆ...

ಮಕ್ಕಳಲ್ಲಿ ಆಟಿಸಂ ಕಾಯಿಲೆ: ಹೆತ್ತವರಿಗೆ ಈ ಮಾಹಿತಿಗಳು ಗೊತ್ತಿರಲಿ

ವಾರ್ತಾಭಾರತಿವಾರ್ತಾಭಾರತಿ3 April 2016 7:25 PM IST
share
ಮಕ್ಕಳಲ್ಲಿ ಆಟಿಸಂ ಕಾಯಿಲೆ: ಹೆತ್ತವರಿಗೆ ಈ ಮಾಹಿತಿಗಳು ಗೊತ್ತಿರಲಿ

ಭಾರತೀಯರಲ್ಲಿ ಆಟಿಸಂ ಅಥವಾ ಸ್ವಲೀನತೆ ಬಗ್ಗೆ ವಿಶ್ಲೇಷಣೆ ನಡೆಸಿದಾಗ ಸುಮಾರು 1.7-2 ದಶಲಕ್ಷ ಮಕ್ಕಳಿಗೆ ಈ ಸಮಸ್ಯೆ ಇರುವುದು ತಿಳಿದುಬಂದಿದೆ. ಇಂತಹ ಆತಂಕಕಾರಿ ಅಂಕಿ ಅಂಶಗಳ ಹೊರತಾಗಿಯೂ ದೇಶದಲ್ಲಿ ಆಟಿಸಂ ಬಗ್ಗೆ ಜಾಗೃತಿ ಕಡಿಮೆಯೇ ಇದೆ. ಸುಮಾರು 18 ತಿಂಗಳಾಗುವವರೆಗೂ ಸ್ವಲೀನತೆ ಸಮಸ್ಯೆಯನ್ನು ತಿಳಿದುಕೊಳ್ಳುವುದು ಕಷ್ಟ. ಈ ವಯಸ್ಸಿನಲ್ಲಿ ಮಕ್ಕಳಲ್ಲಿ ಚಿಂತಾಜನಕ ನಡವಳಿಕೆಯನ್ನು ತಜ್ಞರು ಗುರುತಿಸುತ್ತಾರೆ. ಸ್ವಲೀನತೆಗೆ ಚಿಕಿತ್ಸೆ ಪಡೆಯುವ ಉತ್ತಮ ವಯಸ್ಸೆಂದರೆ 1ರಿಂದ 2. ಶೇ 80-90ರಷ್ಟು ಮೆದುಳಿನ ಬೆಳವಣಿಗೆ ಮಕ್ಕಳ 3 ವರ್ಷದೊಳಗೆ ಆಗಿರುತ್ತದೆ. ದುರದೃಷ್ಟವಶಾತ್ ಧೀರ್ಘ ಕಾಲ ಕಾದಷ್ಟು ಮಕ್ಕಳಿಗೆ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದು ಕಷ್ಟವಾಗುತ್ತದೆ. ಈ ತಿಂಗಳುಗಳು ನಂತರ ಸಿಗದ ಅವಕಾಶವನ್ನು ಮಕ್ಕಳಿಗೆ ಕೊಡುತ್ತದೆ. ಆರಂಭದಲ್ಲಿಯೇ ಜಾಗೃತಿ ವಹಿಸಿದರೆ ಹಸುಗೂಸುಗಳಲ್ಲಿ ಸ್ವಲೀನತೆ ಸಮಸ್ಯೆಯನ್ನು ತಪ್ಪಿಸಬಹುದು.

ಅಮೆರಿಕದ ಆಟಿಸಂ ಸಮಾಜವು ಮಗುವಿನ ಮೊದಲ ಮೂರು ವರ್ಷಗಳಲ್ಲಿ ಕಾಣುವ ಈ ಸಂಕೀರ್ಣ ಬೆಳವಣಿಗೆ ನ್ಯೂನತೆಯನ್ನು ಮೆದುಳಿನ ಸಾಮಾನ್ಯ ಕಾರ್ಯಗಳ ಮೇಲೆ ಪರಿಣಾಮ ಬೀರುವ ನರಸಂಬಂಧಿ ವಿಕಲತೆಗಳು ಕಾರಣ ಎಂದಿದೆ. ಇದು ಮಕ್ಕಳ ಸಾಮಾಜಿಕ ಸಂಪರ್ಕ ಮತ್ತು ಸಂವಹನ ಕೌಶಲ್ಯದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಮತ್ತು ವಯಸ್ಕರಿಬ್ಬರಲ್ಲೂ ಆಟಿಸಂ ಮೌಖಿಕ ಮತ್ತು ಮೌಖಿಕವಲ್ಲದ ಸಂವಹನ ಸಮಸ್ಯೆಯನ್ನು ತೋರಿಸುತ್ತದೆ. ಸಾಮಾಜಿಕ ಸಂಪರ್ಕಗಳು ಮತ್ತು ಆಟದಂತಹ ಆರಾಮ ಸಮಯದ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಬೆಳವಣಿಗೆಯ ಮೂರು ಪ್ರಮುಖ ಪ್ರಾಂತದಲ್ಲಿ ಇದು ಪರಿಣಾಮ ಬೀರುತ್ತದೆ. ಸಾಮಾಜಿಕ ಮಾತುಕತೆ ಮತ್ತು ಅರ್ಥೈಸುವಿಕೆ, ಮೌಖಿಕ ಮತ್ತು ಮೌಖಿಕವಲ್ಲದ ಸಂಪರ್ಕ ಮತ್ತು ಯೋಚನೆ ಮತ್ತು ನಡವಳಿಕೆಯ ನಮ್ಯತೆ ಮತ್ತು ಕಲ್ಪನೆಯ ಸಮಸ್ಯೆಯನ್ನೂ ಹೊಂದಿರುತ್ತದೆ.

ಸ್ಪಾರ್ಷ್ ಫಾರ್ ಚಿಲ್ಡ್ರನ್ ನಿರ್ದೇಶಕಿ ದೆಹಲಿ ಮೂಲದ ಸುರಭಿ ವರ್ಮಾ ಪ್ರಕಾರ, ಆಟಿಸಂ ಅತೀ ಸಂಕೀರ್ಣ ರೋಗ. ಆದರೆ ನಾಲ್ಕು ಆಯಾಮಗಳಲ್ಲಿ ಇದನ್ನು ಪರಿಹರಿಸಬಹುದು. ಯೋಚನೆಯ ದೃಢತೆ, ಭಾಷಣ/ ಭಾಷೆಯ ವಿಳಂಬ ಮತ್ತು ದುರ್ಬಲತೆ, ವಿಸ್ತತ ಸಾಮಾಜಿಕ ಸಂಪರ್ಕ ಕೌಶಲ್ಯಗಳು ಮತ್ತು ಸಂವೇದನಾ ಪ್ರಕ್ರಿಯೆಗಳ ಸವಾಲುಗಳ ಮೂಲಕ ಇದನ್ನು ನಿವಾರಿಸಬಹುದು. ಆಟಿಸಂ ಇರುವ ಮಕ್ಕಳು ಪರಸ್ಪರರಿಂದ ಪಊರ್ಣ ಭಿನ್ನವಾಗಿರುತ್ತಾರೆ. ಹೀಗಾಗಿ ಅವರನ್ನು ವಿಭಿನ್ನ ಆಯಾಮದಲ್ಲಿ ಮತ್ತು ಬಿಂದುವಲ್ಲಿ ತರಬೇತುಗೊಳಿಸಬೇಕು.

ಆಟಿಸಂ ಚಿಹ್ನೆಗಳು

-ನಿರಂತರವಿಲ್ಲದ ಅಥವಾ ದುರ್ಬಲ ಕಣ್ಣುಗಳ ಸಂಪರ್ಕ ಮತ್ತು ಕಣ್ಣುಗಳನ್ನು ಸಂಪರ್ಕಿಸಿದಾಗ ನಗು ಕಡಿಮೆ

-ಶಬ್ದಕ್ಕೆ ಅತಿಯಾದ ವರ್ತನೆ

-ಮಗುವಿನ ಹೆಸರು ಕರೆದಾಗ ಪ್ರತಿಕ್ರಿಯೆ ಇಲ್ಲ ಅಥವಾ ಸರಿಯಾದ ಪ್ರತಿಕ್ರಿಯೆಯಿಲ್ಲ. ಶ್ರವಣ ಪರೀಕ್ಷೆ ಸಹಜವಾಗಿರುತ್ತದೆ.

-ಸ್ವತಃ ಕಚ್ಚಿಕೊಳ್ಳುವುದು, ಹೊಡೆದುಕೊಳ್ಳುವುದು ಮೊದಲಾದ ನಡವಳಿಕೆ

-ತನ್ನದೇ ಲೋಕದಲ್ಲಿ ಮುಳುಗಿರುವುದು.

-ವಸ್ತುಗಳನ್ನು ನೋಡಿಯೂ ಸುಮ್ಮನಿರುವುದು

-ಸಂವಹನಕ್ಕೆ ಸನ್ನೆಗಳನ್ನು ಮಾಡದೆ ಇರುವುದು

ಸಾಮಾನ್ಯ ಚಿಹ್ನೆಗಳು

-ಮೌಖಿಕ ಸಂವಹನದಲ್ಲಿ ಕಷ್ಟ

-ಸ್ನೇಹಿತರನ್ನು ಮಾಡಲು ಸಾಧ್ಯವಾಗದೆ ಏಕಾಂಗಿಯಾಗಿ ಆಡುವುದು

-ಮೌಖಿಕವಲ್ಲದ ಸಂವಹನದಲ್ಲಿ ಕಷ್ಟಪಡುವುದು

-ಸಾಮಾಜಿಕ ಸಂವಹನದಲ್ಲಿ ಕಷ್ಟಪಡುವುದು

-ಕಲ್ಪನೆಯ ಕೊರತೆ

-ನಿತ್ಯದ ಅಥವಾ ಆಪ್ತ ಪರಿಸರಕ್ಕೂ ಹೊಂದಿಕೊಳ್ಳಲು ಕಷ್ಟಪಡುವುದು

-ಪದೇ ಪದೇ ದೇಹದ ಚಲನೆ ಅಥವಾ ನಡತೆಯ ಸ್ವರೂಪ, ಕೈ ಅಲ್ಲಾಡಿಸುವುದು, ಸುತ್ತುವುದು ಮತ್ತು ತಲೆ ಅಲ್ಲಾಡಿಸುವುದು.

ಸವಾಲುಗಳು

ಅಂಗೀಕಾರ ದೊಡ್ಡ ಸವಾಲು. ಈ ನ್ಯೂನತೆ ಬಗ್ಗೆ ಸಮಾಜದ ಮನೋಭಾವ ದೊಡ್ಡ ಸಮಸ್ಯೆ. ಕೆಲವೊಮ್ಮೆ ಹೆತ್ತವರು ಮತ್ತು ಚಿಕಿತ್ಸಕರ ನಡುವೆ ಹೊಂದಾಣಿಕೆ ಇರುವುದಿಲ್ಲ. ಅಂತಹ ಸಮಯದಲ್ಲಿ ಮಕ್ಕಳು ಬೆಳವಣಿಗೆ ತೋರಿಸುವುದಿಲ್ಲ. ಈ ಸಮಸ್ಯೆಯನ್ನು ರೋಗ ಎಂದು ತಿಳಿದುಕೊಂಡು ಚಿಕಿತ್ಸೆ ಪಡೆಯುವುದು ಅಗತ್ಯ. ಈ ಮಕ್ಕಳಿಗೆ ಶಾಶ್ವತ ಭಾವನಾತ್ಮಕ ಮತ್ತು ಮನೋವೈಜ್ಞಾನಿಕ ನೆರವಿನ ಅಗತ್ಯವಿದೆ.

ಬಹಳಷ್ಟು ಸಂದರ್ಭದಲ್ಲಿ ಸಾಮಾಜಿಕ ಮೌಢ್ಯವು ಇತರ ಮಕ್ಕಳಿಗೂ ಸಮಸ್ಯೆ ಹರಡಬಹುದೆಂಬ ಕಾರಣದಿಂದ ಆಟಿಸಂ ಇರುವ ಮಕ್ಕಳನ್ನು ಪ್ರತ್ಯೇಕಿಸಲಾಗುತ್ತದೆ. ಕೆಲವೊಮ್ಮೆ ಇವರನ್ನು ಹೊರಗಿನವರಾಗಿ ಇಡಲಾಗುತ್ತದೆ. ಹೆತ್ತವರು ಮಕ್ಕಳನ್ನು ಇತರರ ಜೊತೆ ಬೆರೆಯಲು ಬಿಡುವುದಿಲ್ಲ. ಬಹಳಷ್ಟು ಸಂದರ್ಭದಲ್ಲಿ ಈ ಮಕ್ಕಳ ಬಗ್ಗೆ ಸಾರ್ವಜನಿಕ ತಮಾಷೆಯೂ ಆಗುತ್ತದೆ. ಸಮಾಜದ ಸ್ವಭಾವ ಬದಲಾಗಬೇಕು.

ಹೆತ್ತವರು ಮಾಡುವ ಸಾಮಾನ್ಯ ತಪ್ಪು

ಬಹುತೇಕ ಈ ಚಿಹ್ನೆಗಳು ಇದೆ ಎಂದು ತಿಳಿದಾಗ ಹೆತ್ತವರು ಅದನ್ನು ಸರಿಯಾಗಿ ಅರಿತುಕೊಳ್ಳುವುದಿಲ್ಲ. ಅವರ ಅಸಹಾಯಕತೆ ದೇವರಿಂದ ಸಿಕ್ಕ ಶಿಕ್ಷೆ ಎಂದು ಭಾವಿಸುವಂತೆ ಮಾಡುತ್ತದೆ. ಕೆಲವೊಮ್ಮೆ ಹೆತ್ತವರಿಗೆ ಮಕ್ಕಳ ಜತೆಗೆ ವ್ಯವಹರಿಸಲು ತಮಗೆ ಸಾಧ್ಯವಿಲ್ಲ ಎನ್ನುವ ಭಾವನೆ ಇರುತ್ತದೆ. ಮಕ್ಕಳ ಬಗ್ಗೆ ಮರುಕ ತೋರುವುದರಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ಪಶ್ಚಾತ್ತಾಪದ ಬೇಗೆಯಲ್ಲಿ ಹೆತ್ತವರು ಚಿಕಿತ್ಸೆ ವಿಳಂಬ ಮಾಡುತ್ತಾರೆ. ಮತ್ತೊಂದು ಸಾಮಾನ್ಯ ತಪ್ಪೆಂದರೆ ಮಗು ವಯಸ್ಸಿನೊಂದಿಗೆ ಸರಿಹೊಂದುತ್ತಾನೆಂಬ ಹೆತ್ತವರ ತಪ್ಪು ನಂಬಿಕೆ. ಆಟಿಸಂ ಮಕ್ಕಳ ಜತೆಗೆ ವ್ಯವಹರಿಸುವುದು ಹೇಗೆ ಎನ್ನುವುದನ್ನು ಹೆತ್ತವರು ತಿಳಿದುಕೊಳ್ಳುವುದು ಅಗತ್ಯ. ಸರಿಯಾದ ವಯಸ್ಸಿನಲ್ಲಿ ಚಿಕಿತ್ಸೆ ಆರಂಭಿಸಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X